UPSC Recruitment 2021: 5 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೇಂದ್ರ ಲೋಕ ಸೇವಾ ಆಯೋಗ; ನೀವೂ ಅರ್ಹರಾಗಿದ್ದರೆ ತಡ ಮಾಡಬೇಡಿ..

ಕೇಂದ್ರ ಲೋಕ ಸೇವಾ ಆಯೋಗ (UPSC) ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದೆ. ಮಹಿಳಾ ವೈದ್ಯಕೀಯ ಅಧಿಕಾರಿ, ಪ್ರಧಾನ ವಿನ್ಯಾಸಾಧಿಕಾರಿ (Principal Design Officer), ಮತ್ತು ಉಳಿದ ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಯುಪಿಎಸ್​ಸಿ ತನ್ನ ವೆಬ್​​ಸೈಟ್​ನಲ್ಲಿ ಹೇಳಿಕೊಂಡಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಏಪ್ರಿಲ್​ 1ರ ಮಧ್ಯಾಹ್ನ 12ಗಂಟೆಯೊಳಗೆ upsc.gov.inನಲ್ಲಿ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಹಾಗೇ, ಆನ್​ಲೈನ್​ ಮೂಲಕ ತುಂಬಿದ ಅರ್ಜಿಗಳನ್ನು ಮುದ್ರಣ ತೆಗೆದು ಅದನ್ನು ಕಳಿಸಲು ಕೊನೇ […]

UPSC Recruitment 2021: 5 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೇಂದ್ರ ಲೋಕ ಸೇವಾ ಆಯೋಗ; ನೀವೂ ಅರ್ಹರಾಗಿದ್ದರೆ ತಡ ಮಾಡಬೇಡಿ..
ಕೇಂದ್ರ ಲೋಕಸೇವಾ ಆಯೋಗ
Follow us
Lakshmi Hegde
|

Updated on:Mar 15, 2021 | 3:12 PM

ಕೇಂದ್ರ ಲೋಕ ಸೇವಾ ಆಯೋಗ (UPSC) ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದೆ. ಮಹಿಳಾ ವೈದ್ಯಕೀಯ ಅಧಿಕಾರಿ, ಪ್ರಧಾನ ವಿನ್ಯಾಸಾಧಿಕಾರಿ (Principal Design Officer), ಮತ್ತು ಉಳಿದ ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಯುಪಿಎಸ್​ಸಿ ತನ್ನ ವೆಬ್​​ಸೈಟ್​ನಲ್ಲಿ ಹೇಳಿಕೊಂಡಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಏಪ್ರಿಲ್​ 1ರ ಮಧ್ಯಾಹ್ನ 12ಗಂಟೆಯೊಳಗೆ upsc.gov.inನಲ್ಲಿ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಹಾಗೇ, ಆನ್​ಲೈನ್​ ಮೂಲಕ ತುಂಬಿದ ಅರ್ಜಿಗಳನ್ನು ಮುದ್ರಣ ತೆಗೆದು ಅದನ್ನು ಕಳಿಸಲು ಕೊನೇ ದಿನ ಏಪ್ರಿಲ್​ 2ಎಂದು ಯುಪಿಎಸ್​ಸಿ ತಿಳಿಸಿದೆ.

UPSCಯ ಮಹಿಳಾ ವೈದ್ಯಾಧಿಕಾರಿ (ಕುಟುಂಬ ಕಲ್ಯಾಣ)ಹುದ್ದೆಯಲ್ಲಿ 2, ಪ್ರಧಾನ ವಿನ್ಯಾಸ ಅಧಿಕಾರಿ(ಎಲೆಕ್ಟ್ರಿಯಲ್​) ಪೋಸ್ಟ್​​ನಲ್ಲಿ ಒಂದು​​, ಶಿಪ್​ ಸರ್ವೇಯರ್​ ಕಮ್​ ಡೆಪ್ಯೂಟಿ ಡೈರೆಕ್ಟರ್​ ಜನರಲ್​ (ಟೆಕ್ನಿಕಲ್)ಹುದ್ದೆಯಲ್ಲಿ ಒಂದು ಹಾಗೂ ಅಸಿಸ್ಟೆಂಟ್​ ಆರ್ಕಿಟೆಕ್ಟ್​ ಮತ್ತು ಮುಖ್ಯ ಆರ್ಕಿಟೆಕ್ಟ್​ ಕಚೇರಿಯಲ್ಲಿ ತಲಾ ಒಂದು ವೆಕೆನ್ಸಿಗಳು ಇವೆ.

ಶೈಕ್ಷಣಿಕ ಅರ್ಹತೆ ಅಸಿಸ್ಟೆಂಟ್​ ಆರ್ಕಿಟೆಕ್ಟ್​ ಮತ್ತು ಮುಖ್ಯ ಆರ್ಕಿಟೆಕ್ಟ್ ಹುದ್ದೆ: ಈ ಪೋಸ್ಟ್​ಗೆ ಅರ್ಜಿ ಸಲ್ಲಿಸುವವರು ಆರ್ಕಿಟೆಕ್ಟ್​​ನಲ್ಲಿ ಪದವಿ ಪಡೆದಿರಬೇಕು ಅಥವಾ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆಯಿಂದ ಆರ್ಕಿಟೆಕ್ಟ್​ ಪದವಿಗೆ ಸಮಾನವಾದ ಡಿಪ್ಲೊಮಾ ಮಾಡಿರಬೇಕು. ಎರಡು ವರ್ಷಗಳ ಅನುಭವ ಕಡ್ಡಾಯ.

ಶಿಪ್​ ಸರ್ವೇಯರ್​ ಕಮ್​ ಡೆಪ್ಯೂಟಿ ಡೈರೆಕ್ಟರ್​ ಜನರಲ್​ (ಟೆಕ್ನಿಕಲ್): ನೌಕಾ ವಿನ್ಯಾಸದಲ್ಲಿ ಪದವಿ ಪಡೆದು, ಹಡಗು ವಿನ್ಯಾಸ, ಸಂವಹನ, ಸರ್ವೇ ಮತ್ತು ಹಡಗು ರಿಪೇರಿಯಲ್ಲಿ 8ವರ್ಷಗಳ ಅನುಭವ ಉಳ್ಳವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಪ್ರಧಾನ ವಿನ್ಯಾಸ ಅಧಿಕಾರಿ(ಎಲೆಕ್ಟ್ರಿಯಲ್​): ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್​ ಅಥವಾ ಟೆಲಿಕಮ್ಯೂನಿಕೇಶನ್​ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು, ಹಗಡುಗಳ ವಿನ್ಯಾಸ, ಅಳವಡಿಕೆ, ನಿರ್ಮಾಣದಲ್ಲಿ 10ವರ್ಷ ಪ್ರಾಯೋಗಿಕ ಅನುಭವ ಇದ್ದವರು ಅರ್ಜಿ ಸಲ್ಲಿಸಬಹುದಾಗಿದೆ.

ಮಹಿಳಾ ವೈದ್ಯಾಧಿಕಾರಿ (ಕುಟುಂಬ ಕಲ್ಯಾಣ)ಹುದ್ದೆ: ಮಾನ್ಯತೆ ಪಡೆದ ವೈದ್ಯಕೀಯ ಅರ್ಹತೆ ಇರಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು UPSC ವೆಬ್​ಸೈಟ್ upsc.gov.in ನಲ್ಲಿ ಪಡೆಯಬಹುದು.

ಇದನ್ನೂ ಓದಿ: ಭಾರತಮಾತೆಯ ಹೆಮ್ಮೆಯ ಪುತ್ರ ಸಂದೀಪ್​ ಉನ್ನಿಕೃಷ್ಣನ್​ ಜನ್ಮದಿನ ಇಂದು; ಮುಂಬೈ ಉಗ್ರದಾಳಿಯ ಹೋರಾಟದ ಕ್ಷಣವನ್ನೊಮ್ಮೆ ನೆನಪಿಸಿಕೊಳ್ಳೋಣ

Justice For Kamaraj: ‘ಕಾಮರಾಜು ಮತ್ತೆ ಕೆಲಸಕ್ಕೆ ನೇಮಕವಾಗುವವರೆಗೂ ಜೊಮ್ಯಾಟೊದಿಂದ ಆರ್ಡರ್​ ಪಡೆಯುವುದಿಲ್ಲ’- ಶುರುವಾಗಿದೆ ಅಭಿಯಾನ

Published On - 3:11 pm, Mon, 15 March 21

ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ