ಯೋಗಿ ಆದಿತ್ಯನಾಥ್- ಕೇಶವ್ ಮೌರ್ಯ ನಡುವೆ ಭಿನ್ನಾಭಿಪ್ರಾಯ?; ಪ್ರಧಾನಿ ಮೋದಿ ಭೇಟಿ ಮಾಡಿದ ಯುಪಿ ಬಿಜೆಪಿ ಮುಖ್ಯಸ್ಥ

|

Updated on: Jul 17, 2024 | 8:32 PM

ಕೇಶವ್ ಪ್ರಸಾದ್ ಮೌರ್ಯ ಅವರು ಪಕ್ಷದ ಕಾರ್ಯಕ್ರಮವೊಂದರಲ್ಲಿ "ಸರ್ಕಾರಕ್ಕಿಂತ ಸಂಘಟನೆ ಯಾವಾಗಲೂ ದೊಡ್ಡದು. ಸಂಘಟನೆಗಿಂತ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ" ಎಂದು ಟೀಕಿಸಿದ ಕೆಲವು ದಿನಗಳ ನಂತರ ಈ ಸಭೆಗಳು ನಡೆದಿವೆ. ಅಂದಹಾಗೆ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಈ ಹೇಳಿಕೆ ನೀಡಲಾಗಿದೆ. ಚುನಾವಣೆ ಹಿನ್ನಡೆಗೆ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ.

ಯೋಗಿ ಆದಿತ್ಯನಾಥ್- ಕೇಶವ್ ಮೌರ್ಯ ನಡುವೆ ಭಿನ್ನಾಭಿಪ್ರಾಯ?; ಪ್ರಧಾನಿ ಮೋದಿ ಭೇಟಿ ಮಾಡಿದ ಯುಪಿ ಬಿಜೆಪಿ ಮುಖ್ಯಸ್ಥ
ಯೋಗಿ ಆದಿತ್ಯನಾಥ್-ಕೇಶವ್ ಮೌರ್ಯ
Follow us on

ಲಕ್ನೋ ಜುಲೈ 17: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ (Keshav Prasad Maurya) ನಡುವಿನ ಭಿನ್ನಾಭಿಪ್ರಾಯಗಳ ಊಹಾಪೋಹಗಳ ನಡುವೆ, ಯುಪಿ ಬಿಜೆಪಿ ಮುಖ್ಯಸ್ಥ ಭೂಪೇಂದ್ರ ಸಿಂಗ್ ಚೌಧರಿ (Bhupendra Singh Chaudhary) ಬುಧವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು, ಇದರ ಬೆನ್ನಲ್ಲೇ ಯುಪಿ ಬಿಜೆಪಿ ಘಟಕದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಊಹಾಪೋಹ ಹರಿದಾಡುತ್ತಿದೆ.

ರಾಜಕೀಯವಾಗಿ ನಿರ್ಣಾಯಕ ರಾಜ್ಯದಲ್ಲಿ ಪಕ್ಷವನ್ನು ಬಾಧಿಸುತ್ತಿರುವ ಸಾಂಸ್ಥಿಕ ವಿಷಯಗಳ ಬಗ್ಗೆ ಬಿಜೆಪಿ ನಾಯಕರು ಪಿಎಂ ಮೋದಿಯವರಿಗೆ ತಿಳಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ.  ಮಂಗಳವಾರ ಚೌಧರಿ ಮತ್ತು ಮೌರ್ಯ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದರು.

ಕೇಶವ್ ಪ್ರಸಾದ್ ಮೌರ್ಯ ಅವರು ಪಕ್ಷದ ಕಾರ್ಯಕ್ರಮವೊಂದರಲ್ಲಿ “ಸರ್ಕಾರಕ್ಕಿಂತ ಸಂಘಟನೆ ಯಾವಾಗಲೂ ದೊಡ್ಡದು. ಸಂಘಟನೆಗಿಂತ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ” ಎಂದು ಟೀಕಿಸಿದ ಕೆಲವು ದಿನಗಳ ನಂತರ ಈ ಸಭೆಗಳು ನಡೆದಿವೆ. ಅಂದಹಾಗೆ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಈ ಹೇಳಿಕೆ ನೀಡಲಾಗಿದೆ. ಚುನಾವಣೆ ಹಿನ್ನಡೆಗೆ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ.

ಮೌರ್ಯ ಅವರು ಇಂದು ಎಕ್ಸ್ ನಲ್ಲಿ ‘ಸಂಘಟನೆ ದೊಡ್ಡದು’ ಎಂಬ ಸಂದೇಶವನ್ನು ಪುನರಾವರ್ತಿಸಿದ್ದಾರೆ. ಸರ್ಕಾರಕ್ಕಿಂತ ಸಂಘಟನೆ ದೊಡ್ಡದು, ಕಾರ್ಯಕರ್ತರ ನೋವು  ನನ್ನದು. ಸಂಘಟನೆಗಿಂತ ಯಾರೂ ದೊಡ್ಡವರಲ್ಲ, ಕಾರ್ಯಕರ್ತರೇ ಹೆಮ್ಮೆ,” ಎಂದು ಡೆಪ್ಯೂಟಿ ಸಿಎಂ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಬಿಜೆಪಿಯ ಉನ್ನತ ನಾಯಕರು ಮೌರ್ಯ ಮತ್ತು ಚೌಧರಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ. 10 ಯುಪಿ ಸ್ಥಾನಗಳಲ್ಲಿ ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುವುದು ಬಿಜೆಪಿಯ ಪ್ರಮುಖ ಆದ್ಯತೆಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಅಖಿಲೇಶ್ ಯಾದವ್ ವಿರುದ್ಧ ಕೇಶವ್ ಪ್ರಸಾದ್ ಮೌರ್ಯ ವಾಗ್ದಾಳಿ

ವಿಪಕ್ಷಗಳು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದು, ಇಂದು ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಬಲವಾಗಿದೆ ಮತ್ತು 2027 ರಲ್ಲಿ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.

ಎಸ್‌ಪಿ ಬಹದ್ದೂರ್ ಅಖಿಲೇಶ್ ಯಾದವ್ ಜಿ, ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಪ್ರಬಲ ಸಂಘಟನೆ ಮತ್ತು ಸರ್ಕಾರವನ್ನು ಹೊಂದಿದೆ. ಸಮಾಜವಾದಿ ಪಕ್ಷದ PDA  ಸುಳ್ಳು. ಯುಪಿ ಎಸ್‌ಪಿಯ ಗೂಂಡಾಗಿರಿಗೆ ಮರಳುವುದು ಅಸಾಧ್ಯ, 2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 2017 ಅನ್ನು ಪುನರಾವರ್ತಿಸುತ್ತದೆ ಎಂದು ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವಿದೆ ಎಂಬ ಯಾದವ್ ಹೇಳಿಕೆಗೆ ಮೌರ್ಯ ಎಕ್ಸ್‌ನಲ್ಲಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ ಸರ್ಕಾರದಿಂದ ಅತೀಕ್ ಅಹ್ಮದ್​​ನ ₹ 50 ಕೋಟಿ ಮೌಲ್ಯದ ಆಸ್ತಿ ಸ್ವಾಧೀನ

“ಬಿಜೆಪಿಯ ಅಧಿಕಾರದ ಹೋರಾಟದ ಬಿಸಿಯಲ್ಲಿ ಯುಪಿಯಲ್ಲಿ ಸರ್ಕಾರ ಮತ್ತು ಆಡಳಿತವನ್ನು ಕಡೆಗಣಿಸಲಾಗಿದೆ, ಬಿಜೆಪಿ ಇತರ ಪಕ್ಷಗಳಲ್ಲಿ ಮಾಡುತ್ತಿದ್ದ ವಿಧ್ವಂಸಕ ರಾಜಕಾರಣದ ಕೆಲಸವನ್ನು ಈಗ ತನ್ನ ಪಕ್ಷದೊಳಗೆ ಮಾಡುತ್ತಿದೆ. ಬಿಜೆಪಿ ಆಂತರಿಕ ಘರ್ಷಣೆಯ ಕೂಪದಲ್ಲಿ ಮುಳುಗುತ್ತಿದೆ. ಬಿಜೆಪಿಯಲ್ಲಿ ಯಾರೂ ಸಾರ್ವಜನಿಕರ ಬಗ್ಗೆ ಯೋಚಿಸುವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ

ಲೋಕಸಭೆ ಚುನಾವಣೆಯಲ್ಲಿ ಯುಪಿಯಲ್ಲಿ ಬಿಜೆಪಿಯ ಸಾಧನೆ ಹೇಗಿತ್ತು?

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಳಗೊಂಡಿರುವ ಇಂಡಿಯಾ ಮೈತ್ರಿಕೂಟವು ರಾಜ್ಯದ 80 ಲೋಕಸಭಾ ಸ್ಥಾನಗಳಲ್ಲಿ 43 ಅನ್ನು ಗೆದ್ದುಕೊಂಡಿತು. ಇತ್ತ ಬಿಜೆಪಿ ನೇತೃತ್ವದ ಎನ್ ಡಿಎ 36 ಸೀಟು ಗೆದ್ದಿತ್ತು. ಎನ್ ಡಿಎ 2019 ರಲ್ಲಿ 64 ಸ್ಥಾನಗಳನ್ನು ಗೆದ್ದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ