ಒಮಾನ್‌ನಲ್ಲಿ ಮಗುಚಿದ ತೈಲ ಸಾಗಣೆ ಹಡಗು; 9 ಸಿಬ್ಬಂದಿ ಪೈಕಿ 8 ಭಾರತೀಯರ ರಕ್ಷಣೆ
ಒಮಾನ್‌ನ ಪ್ರಮುಖ ಬಂದರು ಡುಗ್ಮ್ ನಿಂದ ಹೊರಟಿದ್ದ ಪ್ರೆಸ್ಟೀಜ್ ಪಾಲ್ಕನ್ ಹಡಗು ಒಮಾನ್ ಸಾಗರ ಪ್ರದೇಶದಲ್ಲಿ ಮಗುಚಿದೆ. ಈ ಹಡಗಿನಲ್ಲಿ ಪೂರ್ವ ಕಾರ್ಮೋಸ್ ದೇಶದ ತೈಲ ಟ್ಯಾಂಕರ್ ಇತ್ತು ಎಂದು ಸಾಗರ ಭದ್ರತಾ ಕೇಂದ್ರ ಹೇಳಿದೆ. ಈ ಹಡಗು ಯೆಮನ್ನ ಅದೆನ್ಗೆ ಹೊರಟಿತ್ತು ಎಂದು ಹೇಳಲಾಗಿದೆ. ಹಡಗು ಮುಳುಗಿ ನಾಪತ್ತೆಯಾಗಿದ್ದ 16 ಮಂದಿಯಲ್ಲಿ ಒಂಬತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಒಮಾನ್ ಜುಲೈ 17: ಒಮಾನ್ (Oman) ಕರಾವಳಿಯಲ್ಲಿ ಹಡಗು ಮುಳುಗಿ ನಾಪತ್ತೆಯಾಗಿದ್ದ 16 ಮಂದಿಯಲ್ಲಿ ಒಂಬತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಒಂಬತ್ತು ಸದಸ್ಯರಲ್ಲಿ ಎಂಟು ಮಂದಿ ಭಾರತೀಯರು ಮತ್ತು ಒಬ್ಬರು ಶ್ರೀಲಂಕಾದವರು ಎಂದು ಮೂಲಗಳು ತಿಳಿಸಿವೆ. ಒಮಾನ್‌ನ ಪ್ರಮುಖ ಬಂದರು ಡುಗ್ಮ್ ನಿಂದ(Duqm )ಹೊರಟಿದ್ದ ಪ್ರೆಸ್ಟೀಜ್ ಪಾಲ್ಕನ್ ಹಡಗು (MT Falcon Prestige) ಒಮಾನ್ ಸಾಗರ ಪ್ರದೇಶದಲ್ಲಿ ಮಗುಚಿದೆ. ಈ ಹಡಗಿನಲ್ಲಿ ಪೂರ್ವ ಕಾರ್ಮೋಸ್ ದೇಶದ ತೈಲ ಟ್ಯಾಂಕರ್ ಇತ್ತು ಎಂದು ಸಾಗರ ಭದ್ರತಾ ಕೇಂದ್ರ ಹೇಳಿದೆ. ಈ ಹಡಗು ಯೆಮನ್ನ ಅದೆನ್ಗೆ ಹೊರಟಿತ್ತು ಎಂದು ಹೇಳಲಾಗಿದೆ.
ಡುಗ್ಮ್ ಬಂದರು ಒಮಾನ್‌ನ ನೈಋತ್ಯ ಕರಾವಳಿಯಲ್ಲಿದೆ. ಇದು ಸುಲ್ತಾನೇಟ್‌ನ ಪ್ರಮುಖ ತೈಲ ಮತ್ತು ಅನಿಲ ಗಣಿಗಾರಿಕೆ ಯೋಜನೆಗಳಿಗೆ ಸಮೀಪದಲ್ಲಿದೆ. ಇದು ಡುಗ್ಮ್ನ ವಿಶಾಲವಾದ ಕೈಗಾರಿಕಾ ವಲಯದ ಭಾಗವಾಗಿರುವ ಪ್ರಮುಖ ತೈಲ ಸಂಸ್ಕರಣಾಗಾರವನ್ನು ಒಳಗೊಂಡಂತೆ, ಒಮಾನ್‌ನ ಅತಿದೊಡ್ಡ ಏಕ ಆರ್ಥಿಕ ಯೋಜನೆಯಾಗಿದೆ.
A Comoros flagged oil tanker capsized 25 NM southeast of Ras Madrakah. SAR Ops initiated with the relevant authorities. #MaritimeSecurityCentre
— مركز الأمن البحري| MARITIME SECURITY CENTRE (@OMAN_MSC) July 15, 2024
ಮುಳುಗಿದ ತೈಲ ಟ್ಯಾಂಕರ್ ಜುಲೈ 15 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಒಮಾನ್ ಕರಾವಳಿಯಲ್ಲಿ ದುರಂತದ ಕರೆಯನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ರಾಯಭಾರ ಕಚೇರಿಯು ಒಮಾನಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಶೋಧ ಮತ್ತು ರಕ್ಷಣಾ (ಎಸ್‌ಎಆರ್) ಕಾರ್ಯಾಚರಣೆಯನ್ನು ಒಮನ್ ಸಮುದ್ರ ಭದ್ರತಾ ಕೇಂದ್ರವು ಸಮನ್ವಯಗೊಳಿಸುತ್ತಿದೆ. ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಯೋಗಿ ಆದಿತ್ಯನಾಥ್- ಕೇಶವ್ ಮೌರ್ಯ ನಡುವೆ ಭಿನ್ನಾಭಿಪ್ರಾಯ?; ಪ್ರಧಾನಿ ಮೋದಿ ಭೇಟಿ ಮಾಡಿದ ಯುಪಿ ಬಿಜೆಪಿ ಮುಖ್ಯಸ್ಥ
ಭಾರತೀಯ ನೌಕಾಪಡೆಯ ಯುದ್ಧನೌಕೆ INS Teg ಅನ್ನು ಸಮುದ್ರ ಕಣ್ಗಾವಲು ವಿಮಾನ P-8I ಜೊತೆಗೆ ಒಮಾನಿ ಹಡಗುಗಳು ಮತ್ತು ಸಿಬ್ಬಂದಿಗಳೊಂದಿಗೆ ನಿಯೋಜಿಸಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:52 pm, Wed, 17 July 24