AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಗಾ ನದಿಗೆ ಬಿದ್ದು ಉತ್ತರಪ್ರದೇಶದ ಅಧಿಕಾರಿ ನಾಪತ್ತೆ; ಡೈವರ್‌ಗಳು ₹ 10,000 ಬೇಡಿಕೆಯೊಡ್ಡಿದ್ದಾರೆ ಎಂದು ಆರೋಪ

ಲಕ್ನೋದಿಂದ ಬಂದಿರುವ ಮತ್ತು ವಾರಣಾಸಿಯಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿಯ ಸ್ನೇಹಿತರು  ‘ಘಾಟ್’ನಲ್ಲಿದ್ದ ಖಾಸಗಿ ಡೈವರ್‌ಗಳು ₹ 10,000 ಗೆ ಬೇಡಿಕೆಯಿಟ್ಟಿದ್ದು, ಮೊದಲು ಪಾವತಿಸದೆ ನೀರಿಗೆ ಧುಮುಕಲು ನಿರಾಕರಿಸಿದರು ಎಂದು ಹೇಳಿದ್ದಾರೆ.“ನಮ್ಮಲ್ಲಿ ನಗದು ಇಲ್ಲ ಎಂದು ನಾವು ತಿಳಿಸಿದಾಗ, ಅವರು ಆನ್‌ಲೈನ್ ಪಾವತಿಗೆ ಒತ್ತಾಯಿಸಿದರು. ನಾವು ಹಣ ವರ್ಗಾವಣೆ ಮಾಡಿದ ನಂತರ ಅವರು ಧುಮುಕುವಷ್ಟರಲ್ಲಿ ಆದಿತ್ಯ ನಾಪತ್ತೆಯಾಗಿದ್ದರು' ಎಂದು ಸ್ನೇಹಿತರು ಆರೋಪಿಸಿದ್ದಾರೆ.

ಗಂಗಾ ನದಿಗೆ ಬಿದ್ದು ಉತ್ತರಪ್ರದೇಶದ ಅಧಿಕಾರಿ ನಾಪತ್ತೆ; ಡೈವರ್‌ಗಳು ₹ 10,000 ಬೇಡಿಕೆಯೊಡ್ಡಿದ್ದಾರೆ ಎಂದು ಆರೋಪ
ಗಂಗಾ ನದಿ
ರಶ್ಮಿ ಕಲ್ಲಕಟ್ಟ
|

Updated on: Sep 02, 2024 | 6:04 PM

Share

ಲಕ್ನೋ ಸೆಪ್ಟೆಂಬರ್ 02: ಉತ್ತರ ಪ್ರದೇಶದ ಹಿರಿಯ ಅಧಿಕಾರಿ ಆದಿತ್ಯ ವರ್ಧನ್ ಸಿಂಗ್ (Aditya Vardhan Singh) ಅವರು ಕಾನ್ಪುರ್ ನಗರ ಜಿಲ್ಲೆಯ ಬಿಲ್ಹೌರ್ ಪಟ್ಟಣದ ನಾನಮೌ ಘಾಟ್‌ನಲ್ಲಿ ಗಂಗಾನದಿಯಲ್ಲಿ (Ganga river) ಬಲವಾದ ಪ್ರವಾಹದಿಂದ ಕೊಚ್ಚಿಹೋದ ಎರಡು ದಿನಗಳ ನಂತರ ಸೋಮವಾರ ಶೋಧ ಕಾರ್ಯಾಚರಣೆ ಮುಂದುವರೆದಿದೆ.  ಪೊಲೀಸರ ಪ್ರಕಾರ, ಉತ್ತರ ಪ್ರದೇಶದ ಆರೋಗ್ಯ ಇಲಾಖೆಯ ಉಪನಿರ್ದೇಶಕ ಸಿಂಗ್, ತನ್ನ ಸ್ನೇಹಿತರು ಫೋಟೋ ಕ್ಲಿಕ್ಕಿಸಲು ಆಳವಾದ ನೀರಿನ ಕಡೆಗೆ ತೆರಳಿದ್ದು, ಅಲ್ಲಿ ಜಾರಿ ಬಿದ್ದಿದ್ದಾರೆ.

“ನಮ್ಮ ಪ್ರಾಥಮಿಕ ತನಿಖೆಯಿಂದ ಅವರು ಸೂರ್ಯನಿಗೆ ‘ಅರ್ಘ್ಯ’ ಅರ್ಪಿಸುವಾಗ ಫೋಟೋ ತೆಗೆಯಲು ಬಯಸಿದ್ದರು. ಅವರು ‘ಎಚ್ಚರಿಕೆ’ ಮಾರ್ಕ್ ಅನ್ನು ದಾಟಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ ಈಜುವುದು ತಿಳಿದಿದ್ದರೂ, ಅವರು ಬಲವಾದ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡರು ”ಎಂದು ) ಡಿಸಿಪಿ (ಪಶ್ಚಿಮ) ರಾಜೇಶ್ ಕುಮಾರ್ ಸಿಂಗ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಪ್ರವಾಹ ಘಟಕ, ಪೊಲೀಸರು ಮತ್ತು ಖಾಸಗಿ ಡೈವರ್‌ಗಳು ನಾಪತ್ತೆಯಾಗಿರುವ ಅಧಿಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಬಿಲ್ಹೌರ್ ಎಸಿಪಿ ಅಜಯ್ ಕುಮಾರ್ ತ್ರಿವೇದಿ ತಿಳಿಸಿದ್ದಾರೆ.

“ನಾವು ಭಾನುವಾರ ಬೆಳಿಗ್ಗೆ ಹುಡುಕಾಟವನ್ನು ಪುನರಾರಂಭಿಸಿದೆವು. ಆದರೆ, ಆದಿತ್ಯ ವರ್ಧನ್ ಸಿಂಗ್ ಅವರನ್ನು ಪತ್ತೆ ಹಚ್ಚುವಲ್ಲಿ ನಾವು ಯಶಸ್ವಿಯಾಗಲಿಲ್ಲ ಎಂದು ಅವರು ಹೇಳಿದ್ದಾರೆ.  ಲಕ್ನೋದಿಂದ ಬಂದಿರುವ ಮತ್ತು ವಾರಣಾಸಿಯಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿಯ ಸ್ನೇಹಿತರು  ‘ಘಾಟ್’ನಲ್ಲಿದ್ದ ಖಾಸಗಿ ಡೈವರ್‌ಗಳು ₹ 10,000 ಗೆ ಬೇಡಿಕೆಯಿಟ್ಟಿದ್ದು, ಮೊದಲು ಪಾವತಿಸದೆ ನೀರಿಗೆ ಧುಮುಕಲು ನಿರಾಕರಿಸಿದರು ಎಂದು ಹೇಳಿದ್ದಾರೆ.

“ನಮ್ಮಲ್ಲಿ ನಗದು ಇಲ್ಲ ಎಂದು ನಾವು ತಿಳಿಸಿದಾಗ, ಅವರು ಆನ್‌ಲೈನ್ ಪಾವತಿಗೆ ಒತ್ತಾಯಿಸಿದರು. ನಾವು ಹಣ ವರ್ಗಾವಣೆ ಮಾಡಿದ ನಂತರ ಅವರು ಧುಮುಕುವಷ್ಟರಲ್ಲಿ ಆದಿತ್ಯ ನಾಪತ್ತೆಯಾಗಿದ್ದರು’ ಎಂದು ಸ್ನೇಹಿತರು ಆರೋಪಿಸಿದ್ದಾರೆ.

ಇದನ್ನೂ ಓದಿ: ವ್ಯಕ್ತಿ ಅಪರಾಧಿಯಾದರೂ ಆಸ್ತಿ ಕೆಡವಲು ಸಾಧ್ಯವಿಲ್ಲ: ಬುಲ್ಡೋಜರ್ ಕ್ರಮ ವಿರುದ್ಧ ಸುಪ್ರೀಂಕೋರ್ಟ್ ಗರಂ

ಸ್ನೇಹಿತರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಲ್ಹೌರ್ ಎಸಿಪಿ ತ್ರಿವೇದಿ, ಡೈವರ್‌ಗಳು ತಮ್ಮ ಸ್ಟೀಮರ್‌ಗೆ ಇಂಧನ ಖರೀದಿಸಲು ಹಣ ಬಯಸಿದ್ದರು. ಆರೋಪಗಳಲ್ಲಿ ಯಾವುದೇ ಸತ್ಯವಿದ್ದರೆ, ನಾವು ಡೈವರ್ಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ