ಹತ್ರಾಸ್ ಅತ್ಯಾಚಾರ-ಕೊಲೆ ಪ್ರಕರಣ: ತನಿಖೆಯ ಹೊಣೆ CBIಗೆ ವಹಿಸಿದ ಯುಪಿ ಸರ್ಕಾರ
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣ ಈಗ ಸಿಬಿಐ ಅಂಗಳಕ್ಕೆ ಬಂದಿದೆ. ಅನ್ಯಾಯಕ್ಕೊಳಗಾಗಿರುವ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ. ಆದ್ರೆ, ಯುಪಿ ಸರ್ಕಾರ ಮತ್ತೊಂದು ಯಡವಟ್ಟಿಗೆ ದಾರಿ ಮಾಡಿಕೊಟ್ಟಿದೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿರುವ 19 ವರ್ಷದ ಯುವತಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ಯಾಂತ ಭಾರೀ ಆಕ್ರೋಶವ್ಯಕ್ತವಾಗಿದೆ. ಸ್ಪಪಕ್ಷೀಯರಿಂದಲೇ ಟೀಕೆಗೆ ಒಳಗಾಗುತ್ತಿದ್ದಂತೆ ಯುಪಿ ಸರ್ಕಾರ ಎಚ್ಚೆತ್ತುಕೊಂಡಿದೆ. ತನಿಖೆಯ ಹೊಣೆ ಸಿಬಿಐಗೆ ವಹಿಸಿದ ಯುಪಿ ಸರ್ಕಾರ ದಲಿತ ಯುವತಿ ಗ್ಯಾಂಗ್‌ರೇಪ್ […]
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿರುವ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣ ಈಗ ಸಿಬಿಐ ಅಂಗಳಕ್ಕೆ ಬಂದಿದೆ. ಅನ್ಯಾಯಕ್ಕೊಳಗಾಗಿರುವ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಮೂಡಿದೆ. ಆದ್ರೆ, ಯುಪಿ ಸರ್ಕಾರ ಮತ್ತೊಂದು ಯಡವಟ್ಟಿಗೆ ದಾರಿ ಮಾಡಿಕೊಟ್ಟಿದೆ.
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿರುವ 19 ವರ್ಷದ ಯುವತಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ಯಾಂತ ಭಾರೀ ಆಕ್ರೋಶವ್ಯಕ್ತವಾಗಿದೆ. ಸ್ಪಪಕ್ಷೀಯರಿಂದಲೇ ಟೀಕೆಗೆ ಒಳಗಾಗುತ್ತಿದ್ದಂತೆ ಯುಪಿ ಸರ್ಕಾರ ಎಚ್ಚೆತ್ತುಕೊಂಡಿದೆ.
ತನಿಖೆಯ ಹೊಣೆ ಸಿಬಿಐಗೆ ವಹಿಸಿದ ಯುಪಿ ಸರ್ಕಾರ ದಲಿತ ಯುವತಿ ಗ್ಯಾಂಗ್‌ರೇಪ್ ಆಕ್ರೋಶದ ಕಿಚ್ಚು ದೇಶಾದ್ಯಂತ ವ್ಯಾಪಿಸುತ್ತಿದ್ದಂತೆ ಸಿಎಂ ಯೋಗಿ ಆದಿತ್ಯನಾಥ್ ಅಲರ್ಟ್ ಆಗಿದ್ದಾರೆ. ಈಗ ಅತ್ಯಾಚಾರ ಪ್ರಕರಣದ ತನಿಖೆಯನ್ನ ಎಸ್ಐಟಿಯಿಂದ ಸಿಬಿಐ ತನಿಖೆಗೆ ಹಸ್ತಾಂತರಿಸಿದೆ. ಪ್ರಕರಣದ ತನಿಖೆಯನ್ನ ಸಿಬಿಐಗೆ ವಹಿಸುವಂತೆ ಸಂತ್ರಸ್ತ ಯುವತಿ ಕುಟುಂಬಸ್ಥರು ಆಗ್ರಹಿಸಿದ್ರು. ಈಗ ಕುಟುಂಬ ಸದಸ್ಯರ ಒತ್ತಾಯಕ್ಕೆ ಯೋಗಿ ಆದಿತ್ಯನಾಥ್ ಸರ್ಕಾರ ಮಣಿದಿದೆ.
ಸಂತ್ರಸ್ತೆ ಗ್ರಾಮಕ್ಕೆ ಹಾಕಲಾಗಿದ್ದ ದಿಗ್ಭಂಧನ ತೆರವು ದಿಗ್ಬಂಧನ ಯುವತಿ ಅತ್ಯಾಚಾರ ಹಾಗೂ ಕೊಲೆ ಕೇಸ್ ವಿರುದ್ಧ ಕಾಂಗ್ರೆಸ್ ವ್ಯಾಪಕ ಆಕ್ರೋಶ ಹೊರಹಾಕುತ್ತಿದ್ದಂತೆ ಗ್ರಾಮಕ್ಕೆ ವಿಧಿಸಲಾಗಿದ್ದ ದಿಗ್ಭಂಧನ ತೆರವುಗೊಳಿಸಲಾಯ್ತು. ಹೀಗಾಗಿ ನಿನ್ನೆ ಯುವತಿಯ ಗ್ರಾಮಕ್ಕೆ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ರು.
ಕೈ ಕಾರ್ಯಕರ್ತರ ಮೇಲೆ ಪೊಲೀಸರ ಲಾಠಿಚಾರ್ಜ್ ಇನ್ನು ದೆಹಲಿಯ ಡಿಎನ್‌ಡಿ ಮೇಲ್ಸೆತುವೆ ಗೇಟ್ ಬಳಿ ಕಾಂಗ್ರೆಸ್ ಕಾರ್ಯಕರ್ತರನ್ನ ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ರು. ಈ ವೇಳೆ ಕಾರ್ಯಕರ್ತರನ್ನ ರಕ್ಷಿಸಲು ಪ್ರಿಯಾಂಕಾಗಾಂಧಿ ಮುಂದೆ ಬಂದ್ರು. ಆಗ ಪೊಲೀಸರು ಪ್ರಿಯಾಂಕಾ ಗಾಂಧಿ ಕುರ್ತಾ ಮೇಲೆ ಕೈ ಹಾಕಿ ಎಳೆದ ಘಟನೆ ನಡೆದಿದೆ. ಪೊಲೀಸರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಸಂತ್ರಸ್ತೆ ಕುಟುಂಬಕ್ಕೆ ಏಕೆ ನಾರ್ಕೋ ಅನಾಲಿಸಿಸ್ ಟೆಸ್ಟ್? ಯುಪಿ ಸರ್ಕಾರ ಆರೋಪಿಗಳನ್ನು ಮಾತ್ರವಲ್ಲದೇ, ರೇಪ್ ಸಂತ್ರಸ್ತೆಯ ಕುಟುಂಬವನ್ನು ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸಲು ನಿರ್ಧರಿಸಿದೆ. ಸಾಮಾನ್ಯವಾಗಿ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಮಾತ್ರ ಸುಳ್ಳು ಪತ್ತೆ ಪರೀಕ್ಷೆಗೊಳಪಡಿಸ್ತಾರೆ. ಆದರೆ, ಯುಪಿ ಪೊಲೀಸರು ಸಂತ್ರಸ್ತೆಯ ಕುಟುಂಬವನ್ನು ಸಹ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿರೋದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.