ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದ್ವೇಷಪೂರಿತ ಭಾಷಣ (hate speech against) ಮಾಡಿದ್ದಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಾರಣಾಸಿಯ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ವರದಿಗಳ ಪ್ರಕಾರ ಐದು ಬಾರಿ ಶಾಸಕರಾಗಿರುವ ಅವರು ಜನವರಿ 31 ರಂದು ವಾರಣಾಸಿಯ ಪಿಂದ್ರಾದಲ್ಲಿ ಅನುಮತಿ ಪಡೆಯದೆ ಸಾರ್ವಜನಿಕ ಸಭೆ ನಡೆಸಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ರಾಮಕೃಷ್ಣ ಯಾದವ್ ದೂರು ದಾಖಲಿಸಿದ್ದಾರೆ. ರೈ ಅವರು ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಉಪ್ಪಿನಲ್ಲಿ ಸಮಾಧಿ ಮಾಡಿ ಎಂದು ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ಪೊಲೀಸ್ಅಧಿಕಾರಿ ತಿಳಿಸಿದ್ದಾರೆ.
Keep salt ready, will bury PM Modi and Yogi with the same in the ground on 7th: Congress leader Ajay Rai from Varanasi pic.twitter.com/hhl9rURSXB
— MeghUpdates?™ (@MeghBulletin) February 4, 2022
ಮಾರ್ಚ್ 7ರಂದು ಉಪ್ಪಿನೊಂದಿಗೆ ಸಿದ್ಧರಾಗಿರಿ ನಾವು ಮೋದಿ ಮತ್ತು ಯೋಗಿಯನ್ನು ಸಮಾಧಿ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಅಜಯ್ ರೈಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ಈ ಘಟನೆಯ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. (ಕೆಲವೊಮ್ಮೆ, ಕೊಳೆತ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ವಾಸನೆ ಬರದಂತೆ ತಡೆಯಲು ಮೃತ ದೇಹವನ್ನು ಉಪ್ಪಿನೊಂದಿಗೆ ಹೂಳಲಾಗುತ್ತದೆ. ಇದರಿಂದಾಗಿ ನಾಯಿಗಳು ಮತ್ತು ಇತರ ಪ್ರಾಣಿಗಳು ಸಮಾಧಿಯನ್ನು ಅಗೆದು ಶವವನ್ನು ತಿನ್ನುವುದಿಲ್ಲ.) ಜನರ ನಡುವೆ ದ್ವೇಷ ಹುಟ್ಟಿಸುವ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶದಿಂದ ಈ ಭಾಷಣ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನಾಲ್ವರು ಸದಸ್ಯರ ತಂಡವು ವಿಚಾರಣೆ ನಡೆಸಿ ಎಫ್‌ಐಆರ್ ದಾಖಲಿಸಬೇಕು ಎಂದು ತೀರ್ಮಾನಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಇಂತಹ ಸಭೆಗಳನ್ನು ಆಯೋಜಿಸುವ ಮೂಲಕ ರೈ ಅವರು ಮಾದರಿ ನೀತಿ ಸಂಹಿತೆ ಮತ್ತು ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಸಹ ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋವನ್ನು ಪರೀಕ್ಷೆಗಾಗಿ (ವಿಧಿವಿಜ್ಞಾನ) ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಆದೇಶಕ್ಕೆ ಅವಿಧೇಯತೆ), 269 (ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಸಾಧ್ಯತೆ), 124-ಎ (ದೇಶದ್ರೋಹ), 153-ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸಾಮರಸ್ಯದ ನಿರ್ವಹಣೆಗೆ ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಮತ್ತು 153 (ಗಲಭೆಯನ್ನು ಉಂಟುಮಾಡುವ ಉದ್ದೇಶದಿಂದ ಪ್ರಚೋದನೆಯನ್ನು ನೀಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇನ್ನೂ ಈ ಆರೋಪವನ್ನು ನಿರಾಕರಿಸಿದ ರೈ, ನ್ಯಾಯಬೆಲೆ ಅಂಗಡಿಗಳಿಂದ ವಿತರಿಸುವ ಉಪ್ಪು ಗುಣಮಟ್ಟದಿಂದ ಕೂಡಿಲ್ಲ ಎಂದು ಜನರು ದೂರಿದ್ದಾರೆ. ಇದನ್ನು ಸೇವಿಸಿದ ನಂತರ ಜನರು ಅನಾರೋಗ್ಯಕ್ಕೆ ಒಳಗಾಗಿದ್ದರು. ಅದನ್ನು ಸಂಗ್ರಹಿಸಿ ಮತದಾನದ ದಿನವಾದ ಮಾರ್ಚ್ 7 ರಂದು ಅವರನ್ನು (ಬಿಜೆಪಿ) ಸಮಾಧಿ ಮಾಡಲು ನಾನು ಜನರಿಗೆ ಹೇಳಿದ್ದೇನೆ. ನಾನು ಪ್ರಧಾನಿ ಮತ್ತು ಸಿಎಂ ಬಗ್ಗೆ ಏನನ್ನು ಹೇಳಿಲ್ಲ. ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.
ಐದು ಬಾರಿ ಶಾಸಕರಾಗಿರುವ ಅಜಯ್ ರೈ ಅವರು 2017 ರ ಚುನಾವಣೆಯಲ್ಲಿ ಪಿಂದ್ರಾದಿಂದ ಸ್ಪರ್ಧಿಸಿ, ಬಿಜೆಪಿಯ ಅವಧೇಶ್ ಸಿಂಗ್ ವಿರುದ್ಧ ಸೋತರು. ಅಜಯ್ ರೈ ಅವರು ಈ ಹಿಂದೆ 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಮೋದಿ ವಿರುದ್ಧ ಸ್ಪರ್ಧಿಸಿ ವಿಫಲರಾಗಿದ್ದರು.
ಇದನ್ನೂ ಓದಿ:
ಕಾಂಗ್ರೆಸ್ ಸುಧಾರಣೆಯ ವಿರೋಧಿ; ಸಿದ್ದರಾಮಯ್ಯ ಜಿನ್ನಾ ಭೂತ ಬಂದಂತೆ ಆಡುತ್ತಿದ್ದಾರೆ: ಸಿ.ಟಿ ರವಿ ಆಕ್ರೋಶ
Published On - 8:40 pm, Sun, 6 February 22