ಹಾಪುರ್ ಸೆಪ್ಟೆಂಬರ್ 27: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಪ್ರತಿಕೃತಿ ದಹನಕ್ಕೆ ಮುಂದಾಗಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದು, ಪ್ರತಿಕೃತಿಗಾಗಿ ಪೊಲೀಸ್ ಮತ್ತು ಬಿಜೆಪಿ ಕಾರ್ಯಕರ್ತರು ಎಳೆದಾಡಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ ಅವರು ಮೀಸಲಾತಿ ಕುರಿತು ನೀಡಿದ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಪ್ರತಿಕೃತಿ ದಹನಕ್ಕೂ ಯತ್ನಿಸಿದರು. ಆದರೆ ಪೊಲೀಸರು ಈ ಯತ್ನವನ್ನು ತಡೆದರು. ಪ್ರತಿಕೃತಿಯನ್ನು ಪೊಲೀಸರು ಬಿಜೆಪಿ ಕಾರ್ಯಕರ್ತರ ಕೈಯಿಂದ ಕಸಿದುಕೊಂಡು ಓಡಿಹೋಗಿದ್ದು, ಅವರನ್ನು ಕಾರ್ಯಕರ್ತರು ಬೆನ್ನಟ್ಟುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಅಮೆರಿಕಾದ ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು “ಭಾರತವು ನ್ಯಾಯಯುತವಾದ ಸ್ಥಳ” ಆಗಿರುವಾಗ ಮೀಸಲಾತಿಯನ್ನು ರದ್ದುಗೊಳಿಸುವ ಬಗ್ಗೆ ಕಾಂಗ್ರೆಸ್ ಯೋಚಿಸುತ್ತದೆ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಕಾಂಗ್ರೆಸ್ಸಿನ ಅತ್ಯಂತ ಹಿರಿಯ ನಾಯಕ. ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅಮೆರಿಕಕ್ಕೆ ತೆರಳಿದ ಅವರು ಇಂತಹ ಹೇಳಿಕೆ ನೀಡಿದ್ದಾರೆ… ಇದು ಅತ್ಯಂತ ಖಂಡನೀಯ ಹೇಳಿಕೆ,’’ ಎಂದು ಬಿಜೆಪಿ ಸಂಸದ ಭೋಲಾ ಸಿಂಗ್ ಹೇಳಿದ್ದಾರೆ.
“ಪ್ರತಿಭಟನೆಯಲ್ಲಿ ಎಲ್ಲಾ ಪರಿಶಿಷ್ಟ ಜಾತಿಯ ಕಾರ್ಯಕರ್ತರು ಉಪಸ್ಥಿತರಿದ್ದರು. ಅವರು ದೇಶವಾಸಿಗಳು, ಎಲ್ಲಾ SC, ST ಮತ್ತು OBC ಜನರಲ್ಲಿ ಕ್ಷಮೆಯಾಚಿಸಬೇಕು” ಎಂದು ಸಿಂಗ್ ಹೇಳಿದ್ದಾರೆ.
हापुड – –कांग्रेस सांसद राहुल गांधी के अमेरिका में आरक्षण को लेकर दिए गए बयान के विरोध में भाजपा कार्यकर्ताओं ने राहुल गांधी का पुतला फूंकने का किया प्रयास | पुलिस के साथ हुई छिना झपटी । बुलंदशहर के सांसद भोला सिंह भी पुतला फूंकने में हुए शामिल.@sanjayjourno @ABPNews @AbpGanga pic.twitter.com/OhLf1HoTov
— Vipin sharma ( journalist ✍️🖊️) (@Vipinsh08101377) September 27, 2024
ತಮ್ಮ ಹೇಳಿಕೆಗೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ರಾಹುಲ್,”ನಿನ್ನೆ ಯಾರೋ ನನ್ನ ಹೇಳಿಕೆಯನ್ನು ನಾನು ಮೀಸಲಾತಿ ವಿರೋಧಿ ಎಂದು ತಪ್ಪಾಗಿ ಪ್ರತಿನಿಧಿಸಿದ್ದಾರೆ. ಆದರೆ ನಾನು ಸ್ಪಷ್ಟಪಡಿಸುತ್ತೇನೆ – ನಾನು ಮೀಸಲಾತಿಯ ವಿರೋಧಿಯಲ್ಲ. ನಾವು ಮೀಸಲಾತಿಯನ್ನು ಶೇ50 ಮಿತಿಯಿಂದ ಮೀರಿ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: 100 ಕ್ಕೂ ಹೆಚ್ಚು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಏಕೆ?: ಮಹಾರಾಷ್ಟ್ರ ಸರ್ಕಾರಕ್ಕೆ ಚುನಾವಣಾ ಆಯೋಗ ಪ್ರಶ್ನೆ
ಅವರ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರು ಏನನ್ನಾದರೂ ಅಸಂಬದ್ಧವಾದದುಎಂದು ಹೇಳಲು ಬಯಸಿದಾಗ, ಅವರು ಅಮೆರಿಕಾದಲ್ಲಿ ಹೇಳುತ್ತಾರೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ