ಹತ್ರಾಸ್‌ ಅತ್ಯಾಚಾರ-ಕೊಲೆ ಪ್ರಕರಣ: ಎಸ್​ಪಿ ವಿಕ್ರಾಂತ್​ ವೀರ್ ಸೇರಿ ಐವರ ಅಮಾನತು

| Updated By: ಸಾಧು ಶ್ರೀನಾಥ್​

Updated on: Oct 03, 2020 | 9:53 AM

ಉತ್ತರ ಪ್ರದೇಶದ ಹತ್ರಾಸ್‌ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಈಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ, ಪ್ರಕರಣವನ್ನು ನಿರ್ವಹಿಸುತ್ತಿರುವ ರೀತಿ, ಮಧ್ಯರಾತ್ರಿ ಯುವತಿಯ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೆ ಎಸ್​ಐಟಿ ಶಿಫಾರಸು ಮೇರೆಗೆ ಹತ್ರಾಸ್‌ನ ಎಸ್​ಪಿ ವಿಕ್ರಾಂತ್​ ವೀರ್ ಸೇರಿ ಐವರನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಇನ್ಸ್​ಪೆಕ್ಟರ್​ ದಿನೇಶ್​ ವರ್ಮಾ, ಎಸ್​ಐ ಜಗವೀರ್​ ಸಿಂಗ್, ಎಸ್​ಒ ರಾಮ್​ಶಬ್ದ್​, ಹೆಡ್​ ಕಾನ್ಸ್​ಟೇಬಲ್​ ಮಹೇಶ್​ […]

ಹತ್ರಾಸ್‌ ಅತ್ಯಾಚಾರ-ಕೊಲೆ ಪ್ರಕರಣ: ಎಸ್​ಪಿ ವಿಕ್ರಾಂತ್​ ವೀರ್ ಸೇರಿ ಐವರ ಅಮಾನತು
Follow us on

ಉತ್ತರ ಪ್ರದೇಶದ ಹತ್ರಾಸ್‌ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಈಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ, ಪ್ರಕರಣವನ್ನು ನಿರ್ವಹಿಸುತ್ತಿರುವ ರೀತಿ, ಮಧ್ಯರಾತ್ರಿ ಯುವತಿಯ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಈ ಬೆನ್ನಲ್ಲೆ ಎಸ್​ಐಟಿ ಶಿಫಾರಸು ಮೇರೆಗೆ ಹತ್ರಾಸ್‌ನ ಎಸ್​ಪಿ ವಿಕ್ರಾಂತ್​ ವೀರ್ ಸೇರಿ ಐವರನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಇನ್ಸ್​ಪೆಕ್ಟರ್​ ದಿನೇಶ್​ ವರ್ಮಾ, ಎಸ್​ಐ ಜಗವೀರ್​ ಸಿಂಗ್, ಎಸ್​ಒ ರಾಮ್​ಶಬ್ದ್​, ಹೆಡ್​ ಕಾನ್ಸ್​ಟೇಬಲ್​ ಮಹೇಶ್​ ಪಾಲ್, ಎಸ್​ಪಿ, ಎಸ್​ಒ ಸೇರಿ ಐವರು ಪೊಲೀಸರ ಅಮಾನತಿಗೆ ಆದೇಶಿಲಾಗಿದೆ.