UP Police: ಸತ್ತ ಪಾತಕಿಯ ಮಗಳ ಮದುವೆ ಮಾಡಿದ ಯುಪಿ ಪೊಲೀಸ್; ಎನ್​ಕೌಂಟರ್ ಮಾಡಿದ್ದ ತಂಡದ ಸದಸ್ಯರಿಂದಲೇ ಮದುವೆ ಕಾರ್ಯ

Marriage of Criminal's Daughter: ಕಳೆದ ವರ್ಷ ಪೊಲೀಸರ ಎನ್​ಕೌಂಟರ್​ನಲ್ಲಿ ಕೊಲ್ಲಲ್ಪಟ್ಟಿದ್ದ ಪಾತಕಿಯೊಬ್ಬನ ಮಗಳ ಮದುವೆಯನ್ನು ಪೊಲೀಸರೇ ಅದ್ಧೂರಿಯಾಗಿ ನೆರವೇರಿಸಿದ ಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮದುವೆಯಾದ ಹುಡುಗಿಗೆ ಅಪ್ಪನ ಅನುಪಸ್ಥಿತಿ ಕಾಡದ ರೀತಿಯಲ್ಲಿ ಮದುವೆಯ ಎಲ್ಲಾ ಜವಾಬ್ದಾರಿಯನ್ನು ಉ.ಪ್ರ.ದ ಜಲೌನ್ ಪೊಲೀಸರೇ ವಹಿಸಿ ನೆರವೇರಿಸಿದ್ದಾರೆ.

UP Police: ಸತ್ತ ಪಾತಕಿಯ ಮಗಳ ಮದುವೆ ಮಾಡಿದ ಯುಪಿ ಪೊಲೀಸ್; ಎನ್​ಕೌಂಟರ್ ಮಾಡಿದ್ದ ತಂಡದ ಸದಸ್ಯರಿಂದಲೇ ಮದುವೆ ಕಾರ್ಯ
ಶಿವಾನಿ ರಾಯ್ ಮದುವೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 04, 2024 | 4:17 PM

ಜಾಲೌನ್, ಉ.ಪ್ರ., ಮಾರ್ಚ್ 4: ಪೊಲೀಸರೆಂದರೆ ಕ್ರಿಮಿನಲ್​ಗಳನ್ನು ಹೆಡೆಮುರಿ ಕಟ್ಟಿ ಬೀಳಿಸುವುದೇ ಕಾಯಕವಾಗಿರಬಹುದು. ಅದನ್ನೂ ಮೀರಿ ಪೊಲೀಸರಿಂದ ಸಾಕಷ್ಟು ಮಾನವೀಯ ಕಾರ್ಯಗಳು ನಡೆಯುತ್ತಿರುತ್ತವೆ. ಉತ್ತರಪ್ರದೇಶದ ಪೊಲೀಸರು ಅಪರಾಧಿಯೊಬ್ಬನ ಮಗಳ ಮದುವೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕ್ರಿಮಿನಲ್​ನ ಮಗಳ ಮದುವೆ ಮಾಡುವುದು ಅದ್ಯಾವ ಒಳ್ಳೆಯತನ ಎನ್ನಬಹುದು. ಆದರೆ, ಆ ಅಪರಾಧಿ ಹಿಂದೆ ಉ.ಪ್ರ. ಪೊಲೀಸರ ಎನ್​ಕೌಂಟರ್​ನಲ್ಲಿ ಸತ್ತವ. ಪೊಲೀಸ್ ಕಾನ್ಸ್​ಟೆಬಲ್ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿದ್ದ ರಮೇಶ್ ಎಂಬಾತನನ್ನು ಪೊಲೀಸರು ಎನ್​ಕೌಂಟರ್ ಮಾಡಿದ್ದರು. ಇದೀಗ ಜಾಲೌನ್​ನಲ್ಲಿ (Jalaun, Uttar Pradesh) ಆ ವ್ಯಕ್ತಿಯ ಹಿರಿಯ ಮಗಳ ಮದುವೆಯನ್ನು ಪೊಲೀಸರೇ ನಿಂತು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಮೇ 10, 2023 ರಂದು, ಉರೈ ಕೊತ್ವಾಲಿ ಪ್ರದೇಶದ ಹೆದ್ದಾರಿ ಪೋಸ್ಟ್ ಬಳಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್ ಭೇದಜಿತ್ ಸಿಂಗ್ ಅವರನ್ನು ಶಿರಚ್ಛೇದ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ನಾಲ್ಕು ದಿನಗಳ ನಂತರ ಪೊಲೀಸರು ಪ್ರಮುಖ ಆರೋಪಿ ರಮೇಶ್ ರಾಯಕ್ವಾರ್ ಮತ್ತು ಕಲ್ಲು ಅಹಿರ್ವಾರ್ ಅವರನ್ನು ಎನ್‌ಕೌಂಟರ್‌ನಲ್ಲಿ ಕೊಂದಿದ್ದಾರೆ. ಇದರ ನಂತರ, ಪಾತಕಿ ರಮೇಶ್ ರಾಯಕ್ವಾರ್‌ನ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನ ಪಾಲನೆ ಮತ್ತು ಮದುವೆಯ ಜವಾಬ್ದಾರಿಯನ್ನು ಜಲೌನ್ ಪೊಲೀಸರೇ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಿವೃತ್ತ ಸೈನಿಕನ ಮಗ ಅಪ್ಪನ ಹಣ-ಜಾಗಕ್ಕಾಗಿ ಅಮ್ಮನನ್ನು ಹೊಡೆದು ಸಾಯಿಸಿಬಿಟ್ಟ! ಆ ಮೇಲೆ…

ಶನಿವಾರ ರಾತ್ರಿ (ಮಾ. 2) ರಮೇಶ್ ರಾಯಕ್ವಾರ್ ಅವರ ಹಿರಿಯ ಮಗಳು ಶಿವಾನಿ ರಾಯ್​ಳ ಮದುವೆಯನ್ನು ಪೊಲೀಸರು ಅದ್ಧೂರಿಯಾಗಿ ನೆರವೇರಿಸಿದರು. ಝಾನ್ಸಿ ಜಿಲ್ಲೆಯ ಮಾಂತ್ ಪೊಲೀಸ್ ಠಾಣೆ ವ್ಯಾಪ್ತಿಯ ಮಗ್ರೌರಾ ಗ್ರಾಮದ ನಿವಾಸಿ ಮಲ್ಖಾನ್ ಅವರ ಮಗ ಮೋನು ರಾಯಕ್ವಾರ್ ಅವರನ್ನು ಶಿವಾನಿ ರಾಯ್ ವರಿಸಿದ್ದಾಳೆ. ಈ ಸಂದರ್ಭದಲ್ಲಿ, ಪಾತಕಿ ರಮೇಶ್​ನ ಎನ್​ಕೌಂಟರ್ ಮಾಡಿದ ತಂಡದಲ್ಲಿದ್ದ ಸಿಒ ಗಿರ್ಜಾ ಶಂಕರ್ ತ್ರಿಪಾಠಿ, ಕೊತ್ವಾಲ್ ಶಿವಕುಮಾರ್ ರಾಥೋಡ್, ಕಾನ್‌ಸ್ಟೆಬಲ್ ಅಮಿತ್ ದುಬೆ ಹಾಗು ಇತರ ಸದಸ್ಯರು ಹಾಜರಿದ್ದರು. ವಿವಾಹ ಸಮಾರಂಭದಲ್ಲಿ ಊಟ-ಪಾನೀಯಗಳ ಎಲ್ಲಾ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಸಂಪ್ರದಾಯದ ಪ್ರಕಾರ, ಪೊಲೀಸರು ವರನ ಕಡೆಯವರಿಗೆ ಮೋಟಾರ್ ಸೈಕಲ್, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಟಿವಿ, ಕೂಲರ್, ಬೀರು, ಸೋಫಾ, ಬೆಡ್, ಬೀರು, ಗ್ಯಾಸ್ ಸ್ಟೌ, 51 ಪಾತ್ರೆಗಳು, ಮೊಬೈಲ್ ಮತ್ತು ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷ.

ಪೊಲೀಸರ ಈ ಔದಾರ್ಯ ಮತ್ತು ಮಾನವೀಯತೆಯು ರಮೇಶ್ ಕುಟುಂಬದವರಿಗೆ ಖುಷಿ ತಂದಿದೆ. ತನ್ನ ತಂದೆ ಮಾಡಿದ ತಪ್ಪಿಗೆ ಅವರಿಗೆ ಶಿಕ್ಷೆಯಾಗಿದೆ. ತಂದೆಯ ಅನುಪಸ್ಥಿತಿ ನಮಗೆ ಕಾಡದಂತೆ ಪೊಲೀಸರು ಎಲ್ಲವನ್ನೂ ವಹಿಸಿ ಈ ಮದುವೆ ಮಾಡಿಸಿದ್ದಾರೆ. ಅಪ್ಪ ಇಲ್ಲ ಎಂದು ಯೋಚನೆ ಬರದಂತೆ ನೋಡಿಕೊಂಡಿದ್ದಾರೆ ಎಂದು ರಮೇಶ್​ನ ಪತ್ನಿ ತಾರಾ ಮತ್ತು ಎರಡನೆ ಮಗಳು ಶಿವಾಂಗಿ ರಾಯ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ