ನೀವು ಟೊಮೆಟೊ ತಿನ್ನುವುದನ್ನು ನಿಲ್ಲಿಸಿದರೆ ಬೆಲೆ ತಾನಾಗಿಯೇ ಕಡಿಮೆ ಆಗುತ್ತೆ: ಸಚಿವೆ ಪ್ರತಿಭಾ ಶುಕ್ಲಾ

‘‘ಟೊಮೆಟೊ(Tomato) ದುಬಾರಿಯಾದರೆ ಅವುಗಳನ್ನು ಮನೆಯಲ್ಲೇ ಬೆಳೆಯಿರಿ ಅಥವಾ ತಿನ್ನುವುದನ್ನು ನಿಲ್ಲಿಸಿ, ಆಗ ತಾನಾಗಿಯೇ ಬೆಲೆ ಕಡಿಮೆಯಾಗುವುದು’’ ಎಂದು ಉತ್ತರ ಪ್ರದೇಶದ ಸಚಿವೆ ಪ್ರತಿಭಾ ಶುಕ್ಲಾ ಹೇಳಿದ್ದಾರೆ.

ನೀವು ಟೊಮೆಟೊ ತಿನ್ನುವುದನ್ನು ನಿಲ್ಲಿಸಿದರೆ ಬೆಲೆ ತಾನಾಗಿಯೇ ಕಡಿಮೆ ಆಗುತ್ತೆ: ಸಚಿವೆ ಪ್ರತಿಭಾ ಶುಕ್ಲಾ
ಪ್ರತಿಭಾ ಶುಕ್ಲಾ
Image Credit source: India Today

Updated on: Jul 24, 2023 | 11:44 AM

‘‘ಟೊಮೆಟೊ(Tomato) ದುಬಾರಿಯಾದರೆ ಅವುಗಳನ್ನು ಮನೆಯಲ್ಲೇ ಬೆಳೆಯಿರಿ ಅಥವಾ ತಿನ್ನುವುದನ್ನು ನಿಲ್ಲಿಸಿ, ಆಗ ತಾನಾಗಿಯೇ ಬೆಲೆ ಕಡಿಮೆಯಾಗುವುದು’’ ಎಂದು ಉತ್ತರ ಪ್ರದೇಶದ ಸಚಿವೆ ಪ್ರತಿಭಾ ಶುಕ್ಲಾ ಹೇಳಿದ್ದಾರೆ. ದೇಶಾದ್ಯಂತ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈ ನಡುವೆ ಪ್ರತಿಭಾ ಅವರ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಗಿಡ ನೆಡುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಟೊಮೆಟೊ ದುಬಾರಿ ಅನಿಸಿದರೆ ಅದನ್ನು ಮನೆಯಲ್ಲಿಯೇ ಬೆಳೆದುಕೊಳ್ಳಿ, ಅಥವಾ ತಿನ್ನುವುದನ್ನು ನಿಲ್ಲಿಸಿ ಆಗ ಬೆಲೆ ಇಲಿಯುತ್ತದೆ, ಟೊಮೆಟೊ ಬದಲಿಗೆ ನಿಂಬೆ ಹಣ್ಣು ಬಳಕೆ ಮಾಡಬಹುದು ಎಂದಿದ್ದಾರೆ.

ಪ್ರಸ್ತುತ ಹೆಚ್ಚುತ್ತಿರುವ ಟೊಮೆಟೊ ಬೆಲೆಯನ್ನು ಪರಿಶೀಲಿಸಿ ಮತ್ತು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು, ಸರ್ಕಾರವು ಬೆಲೆ ಸ್ಥಿರೀಕರಣ ನಿಧಿಯ ಅಡಿಯಲ್ಲಿ ಟೊಮೆಟೊ ಖರೀದಿಯನ್ನು ಪ್ರಾರಂಭಿಸಿದೆ ಮತ್ತು ಗ್ರಾಹಕರಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ ಎಂದರು.

ಮತ್ತಷ್ಟು ಓದಿ: Tomato Price: ಸರ್ಕಾರದಿಂದ ಟೊಮೆಟೋಗೆ ಸಬ್ಸಿಡಿ ಇನ್ನಷ್ಟು ಹೆಚ್ಚಳ; ಕಿಲೋಗೆ 70 ರೂನಂತೆ ಮಾರಾಟ

ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಒಕ್ಕೂಟ (ಎನ್‌ಎಎಫ್‌ಇಡಿ) ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ನಿರಂತರವಾಗಿ ಟೊಮೆಟೊಗಳನ್ನು ಖರೀದಿಸುತ್ತಿದೆ ಮತ್ತು ಗ್ರಾಹಕರಿಗೆ ಸಬ್ಸಿಡಿ ನೀಡಿದ ನಂತರ ದೆಹಲಿ-ಎನ್‌ಸಿಆರ್, ಬಿಹಾರ ಮತ್ತು ರಾಜಸ್ಥಾನದ ಪ್ರಮುಖ ಗ್ರಾಹಕ ಕೇಂದ್ರಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ ಎಂದು ಸಚಿವ ಅಶ್ವಿನಿ ಚೌಬೆ ಹೇಳಿದರು.

ಟೊಮ್ಯಾಟೊವನ್ನು ಚಿಲ್ಲರೆ ದರದಲ್ಲಿ 90 ರೂ. ನಂತೆ ವಿಲೇವಾರಿ ಮಾಡಲಾಗಿದ್ದು, ಜುಲೈ 16 ರಿಂದ 80 ರೂ,ಗೆ ಇಳಿಸಲಾಗಿದೆ ಮತ್ತು ಜುಲೈ 20 ರಿಂದ 70 ರೂ. ಇಳಿಸಲಾಗಿದೆ, ಟೊಮೆಟೊ ಬೆಲೆಯನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ