ಟಿವಿ9 ಭಾರತ್‌ವರ್ಷ್- ಪೋಲ್‌ಸ್ಟ್ರ್ಯಾಟ್ (TV9-Polstrat)ನ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಪಂಜಾಬ್, ಉತ್ತರಾಖಂಡ, ಉತ್ತರಪ್ರದೇಶ, ಮಣಿಪುರ ಮತ್ತು ಗೋವಾದಲ್ಲಿ ಯಾವ ಪಕ್ಷ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ? ಯಾವ ರಾಜ್ಯದಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆ? ಎಂಬುದರ ಬಗ್ಗೆ ಚುನಾವಣೋತ್ತರ ಸಮೀಕ್ಷೆಯ ಅಂಕಿ ಅಂಶಗಳು ಹೇಳುತ್ತಿವೆ. ಈ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇರುವ ಉತ್ತರಾಖಂಡ್ನಲ್ಲಿ ಫಲಿತಾಂಶ ಅತಂತ್ರವಾಗಿರುವ ಸಾಧ್ಯತೆ ಇದೆ. ಅದೇ ವೇಳೆ ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಯೋಗಿ ಆಗಿತ್ಯನಾಥ ಸರ್ಕಾರ ಮತ್ತೊಮ್ಮೆ ಗದ್ದುಗೆಗೇರುವ ನಿರೀಕ್ಷೆ ಕಾಣುತ್ತದೆ. ಗೋವಾದಲ್ಲಿ ಅತಂತ್ರ ಫಲಿತಾಂಶ ಸಾಧ್ಯತೆ ಇದ್ದು, ಇಲ್ಲಿ ಬಿಜೆಪಿ 17-19 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸುವ ಸಾಧ್ಯತೆಗಳು ಇವೆ ಎಂದು ಸಮೀಕ್ಷೆ ತೋರಿಸುತ್ತದೆ.
ಉತ್ತರಾಖಂಡ್ನಲ್ಲಿ ಅತಂತ್ರ ಫಲಿತಾಂಶ
ಸಮೀಕ್ಷೆ ಪ್ರಕಾರ ಉತ್ತರಾಖಂಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇದೆ. ಆದರೆ ಈ ಸ್ಪರ್ಧೆಯಲ್ಲಿ ಕಾಂಗ್ರೆಸ್ ಮಾತ್ರ ಮುನ್ನಡೆ ಕಾಣುತ್ತಿದೆ. ಕಾಂಗ್ರೆಸ್ 33-35 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು.ಅಂದರೆ ಬಹುಮತಕ್ಕಿಂತ ಒಂದು ಸ್ಥಾನ ಕಡಿಮೆ. ಕಾಂಗ್ರೆಸ್ ಸುಮಾರು 41.8 ರಷ್ಟು ಮತಗಳನ್ನು ಪಡೆಯಬಹುದು. ಅದೇ ವೇಳೆ ಸಮೀಕ್ಷೆಗಳ ಪ್ರಕಾರ, ಆಡಳಿತಾರೂಢ ಬಿಜೆಪಿಯು ಎರಡನೇ ಸ್ಥಾನದಲ್ಲಿರಬಹುದು, ಅದು 31-33 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಜೆಪಿಯ ಮತಗಳಿಕೆ ಶೇ.39.9 ಆಗಬಹುದು. ಇಲ್ಲಿ ಆಮ್ ಆದ್ಮಿ ಪಕ್ಷ 0-3 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಮತದಾನದ ಶೇಕಡಾವಾರು ಬಗ್ಗೆ ಹೇಳುವುದಾದರೆ ಆಮ್ ಆದ್ಮಿ ಪಕ್ಷವು ಶೇಕಡಾ 5.3 ರಷ್ಟು ಮತಗಳನ್ನು ಪಡೆಯಬಹುದು. ಅದರಂತೆ ಉತ್ತರಾಖಂಡದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಪಕ್ಷೇತರರು 0-2 ಸ್ಥಾನಗಳನ್ನು ಪಡೆಯಬಹುದು ಅಂತಿದೆ ಈ ಚುನಾವಣೋತ್ತರ ಸಮೀಕ್ಷೆ. ಫೆ.14ರಂದು ಉತ್ತರಾಖಂಡದ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.
ಪಕ್ಷ | ಬಿಜೆಪಿ | ಕಾಂಗ್ರೆಸ್ | ಎಎಪಿ | ಪಕ್ಷೇತರರು | ಒಟ್ಟು |
ಸೀಟು ಹಂಚಿಕೆ | 31-33 | 33-35 | 0-3 | 0-2 | 70 |
ಮತ ಹಂಚಿಕೆ | 39.9% | 41.8% | 5.3% | 13.0% | 100% |
ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಯೋಗಿ ಸರ್ಕಾರ ಸಾಧ್ಯತೆ
TV9 Bharatvarsh-Polstrat ನ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಬಿಜೆಪಿ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಸಮಾಜವಾದಿ ಪಕ್ಷವು ಎರಡನೇ ಸ್ಥಾನದಲ್ಲಿದೆ ಮತ್ತು ಬಹುಜನ ಸಮಾಜವಾದಿ ಪಾರ್ಟಿ ಮೂರನೇ ಸ್ಥಾನದಲ್ಲಿದೆ. ಕಾಂಗ್ರೆಸ್ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಬಿಜೆಪಿ ಸಾಕಷ್ಟು ಸ್ಥಾನಗಳನ್ನು ಕಳೆದುಕೊಳ್ಳುತ್ತಿದ್ದು, ಸಮಾಜವಾದಿ ಪಕ್ಷ 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.
ಸಮೀಕ್ಷೆ ಪ್ರಕಾರ, ಬಿಜೆಪಿ ಉತ್ತರ ಪ್ರದೇಶದಲ್ಲಿ 211 ರಿಂದ 225 ಸ್ಥಾನಗಳನ್ನು, ಸಮಾಜವಾದಿ ಪಕ್ಷ 146 ರಿಂದ 160, ಬಿಎಸ್‌ಪಿ 14 ರಿಂದ 24, ಕಾಂಗ್ರೆಸ್ 4 ರಿಂದ 6 ಸ್ಥಾನಗಳನ್ನು ಪಡೆಯಬಹುದು. ಉತ್ತರ ಪ್ರದೇಶ ಚುನಾವಣೆಯ ಸಮಯದಲ್ಲಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷವು 400 ರ ಅಂಕಿಅಂಶವನ್ನು ಮುಟ್ಟಬಹುದು ಎಂದು ಹೇಳುತ್ತಿದ್ದರು, ಆದರೆ ಅದು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಗೋಚರಿಸುವುದಿಲ್ಲ. ಆದರೆ, ಕಳೆದ ಚುನಾವಣೆಗೆ ಹೋಲಿಸಿದರೆ ಸೀಟುಗಳು ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಪಕ್ಷವು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ.
ಮತ ಹಂಚಿಕೆಯ ಬಗ್ಗೆ ಹೇಳುವುದಾದರೆ, ಬಿಜೆಪಿ ಶೇ.40.1, ಸಮಾಜವಾದಿ ಪಕ್ಷ ಶೇ.34.93, ಶೇ.14 ಬಿಎಸ್‌ಪಿ, ಕಾಂಗ್ರೆಸ್ ಗೆ ಶೇ.7.4 ಮತ್ತು ಪಕ್ಷೇತರರು ಶೇ.3.6 ಮತಗಳನ್ನು ಪಡೆಯಲಿದ್ದಾರೆ. ಯುಪಿ ವಿಧಾನಸಭೆಯಲ್ಲಿ ಒಟ್ಟು 403 ಸ್ಥಾನಗಳಿದ್ದು ಬಹುಮತಕ್ಕೆ 202 ಸ್ಥಾನಗಳ ಅಗತ್ಯವಿದೆ. ಬಿಜೆಪಿ ಸರಳ ಬಹುಮತ ಪಡೆಯುವಂತಿದೆ, ಆದರೆ ಕನಿಷ್ಠ 100 ಸ್ಥಾನಗಳ ನಷ್ಟವನ್ನು ಎದುರಿಸುತ್ತಿದೆ. ಆದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ಅವರ ಪಕ್ಷವು 300 ರ ಗಡಿ ದಾಟಲಿದೆ ಎಂದು ಹೇಳುತ್ತಿದೆ.
ಪಕ್ಷ | ಬಿಜೆಪಿ | ಸಮಾಜವಾದಿ ಪಾರ್ಟಿ | ಬಿಎಸ್‌ಪಿ | ಕಾಂಗ್ರೆಸ್ | ಒಟ್ಟು |
ಸೀಟು ಹಂಚಿಕೆ | 211- 225 | 146-160 | 14-24 | 4-6 | 403 |
ಮತ ಹಂಚಿಕೆ (ಶೇಕಡಾವಾರು) | 40.1 | 34.93 | 14 | 7.4 | 100% |
ಗೋವಾದಲ್ಲಿ ಅತಂತ್ರ ಫಲಿತಾಂಶ ಸಾಧ್ಯತೆ
ಚುನಾವಣೋತ್ತರ ಸಮೀಕ್ಷೆ ಪ್ರಕಾರ ಗೋವಾದಲ್ಲಿ ಬಿಜೆಪಿ ಬಹುಮತವನ್ನು ಪಡೆಯುವ ಸಾಧ್ಯತೆ ಇದೆ.ಅಂದರೆ ಬಿಜೆಪಿ ಗೋವಾದಲ್ಲಿ 17-19 ಸ್ಥಾನಗಳನ್ನು ಪಡೆಯಲಿದೆ. ಅದೇ ವೇಳೆ, ಕಾಂಗ್ರೆಸ್ ಸ್ಥಾನದಲ್ಲಿರಲಿದ್ದು 11-13 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ., 2017 ರ ಚುನಾವಣೆಯಲ್ಲಿ ಕಾಂಗ್ರೆಸ್ ಗರಿಷ್ಠ 17 ಸ್ಥಾನಗಳನ್ನು ಪಡೆದಿತ್ತು. ಆಮ್ ಆದ್ಮಿ ಪಕ್ಷವು 1-4 ಸ್ಥಾನಗಳನ್ನು ಪಡೆಯುತ್ತದೆ. ಗೋವಾದಲ್ಲಿ ಇತರೆ ಪಕ್ಷಗಳು 2-4 ಸ್ಥಾನಗಳನ್ನು ಪಡೆಯಲಿವೆ. ಮತಗಳ ಶೇಕಡಾವಾರು ಬಗ್ಗೆ ಹೇಳುವುದಾದರೆ ಬಿಜೆಪಿ 36.6 ಶೇಕಡಾ, ಕಾಂಗ್ರೆಸ್ 28.4 ಶೇಕಡಾ, ಆಮ್ ಆದ್ಮಿ ಪಕ್ಷ 7.2 ಶೇಕಡಾ ಮತ್ತು ಇತರ ಪಕ್ಷಗಳು ಶೇಕಡಾ 27.8 ರಷ್ಟು ಮತಗಳನ್ನು ಗಳಿಸುವ ಸಾಧ್ಯತೆಯಿದೆ. ಅದು ಗೋವಾದಲ್ಲಿ ಏಕೈಕ ದೊಡ್ಡ ಪಕ್ಷವಾಗಲಿದೆ 40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಮತದಾನ ನಡೆದಿತ್ತು.
ಪಕ್ಷ | ಬಿಜೆಪಿ | ಕಾಂಗ್ರೆಸ್ | ಆಮ್ ಆದ್ಮಿ ಪಕ್ಷ | ಪಕ್ಷೇತರರು | ಒಟ್ಟು |
ಸೀಟು ಹಂಚಿಕೆ | 17-19 | 11-13 | 1-4 | 2-7 | 40 |
ಮತ ಹಂಚಿಕೆ | 36.6% | 28-4% | 7.2% | 27.8% | 100.0% |
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸರಳ ಬಹುಮತ ಸಾಧ್ಯತೆ
ಪಂಜಾಬ್ ವಿಧಾನಸಭಾ ಚುನಾವಣೆಗೆ (Punjab Assembly Election( ಸಂಬಂಧಿಸಿದಂತೆ ಟಿವಿ9 ಭಾರತ್ ವರ್ಷ್/ಪೋಲ್‌ಸ್ಟ್ರಾಟ್ ಚುನಾವಣೋತ್ತರ ಸಮೀಕ್ಷೆ ಫಲಿತಾಂಶಗಳು ಹೊರಬಿದ್ದಿವೆ. ಈ ಬಾರಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ (AAP) ಸರ್ಕಾರ ರಚಿಸಬಹುದು. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರಳ ಬಹುಮತವನ್ನು ಪಡೆಯುವ ಸಾಧ್ಯತೆ ಇದೆ . ಹಾಗಾಗಿ ದೆಹಲಿಯ ನಂತರ, ಪಂಜಾಬ್‌ನಲ್ಲಿಯೂ ಅರವಿಂದ ಕೇಜ್ರಿವಾಲ್ ಅವರ ಪಕ್ಷವು ಸರ್ಕಾರವನ್ನು ರಚಿಸುವ ಸಾಧ್ಯತೆ ಇದೆ. TV9 Bharatvarsh / Pollstart ನ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಆಮ್ ಆದ್ಮಿ ಪಕ್ಷ (AAP) 56-61 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಅದೇ ವೇಳೆ ಆಡಳಿತರೂಢ ಕಾಂಗ್ರೆಸ್ 24-29 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಮತ್ತೊಂದೆಡೆ, ಅಕಾಲಿದಳ 22-26 ಸ್ಥಾನಗಳನ್ನು ಪಡೆಯಬಹುದು ಮತ್ತು ಬಿಜೆಪಿ ಮೈತ್ರಿಕೂಟವು 1-6 ಸ್ಥಾನಗಳನ್ನು ಮಾತ್ರ ಪಡೆಯುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, 0-3 ಸ್ಥಾನಗಳು ಪಕ್ಷೇತರರ ಖಾತೆಗೆ ಹೋಗಬಹುದು. ಒಟ್ಟು ಮತ ಹಂಚಿಕೆಯ ಬಗ್ಗೆ ಮಾತನಾಡುವುದಾದರೆ, ಎಎಪಿ 41.2 ಪ್ರತಿಶತ, ಕಾಂಗ್ರೆಸ್ ಶೇ 23.2, ಅಕಾಲಿದಳ ಶೇ 22.5 , ಬಿಜೆಪಿ ಮೈತ್ರಿಕೂಟವು ಶೇ 7.2 ಪ್ರತಿಶತ ಮತ್ತು ಪಕ್ಷೇತರರು ಶೇ 5.9 ರಷ್ಟು ಮತಗಳನ್ನು ಪಡೆಯುತ್ತಾರೆ
ಆಮ್ ಆದ್ಮಿ ಪಕ್ಷ (AAP) | ಕಾಂಗ್ರೆಸ್ | ಅಕಾಲಿ ದಳ | ಬಿಜೆಪಿ ಮೈತ್ರಿಕೂಟ | ಇತರೆ | ಒಟ್ಟು | |
ಒಟ್ಟು ಸೀಟು ಹಂಚಿಕೆ | 56-61 | 24-29 | 22-26 | 1-6 | 0-3 | 117 |
ಒಟ್ಟು ಮತ ಹಂಚಿಕೆ (%) | ಶೇ 41.2 | ಶೇ 23.2 | ಶೇ 22.5 | ಶೇ 7.2 | ಶೇ 5.9 | ಶೇ 100.0 |
ಇದನ್ನೂ ಓದಿ:Punjab Election Exit Poll Result 2022: ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸರಳ ಬಹುಮತ ಸಾಧ್ಯತೆ