ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಯುಪಿಯಲ್ಲಿ 300ಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ: ಅಖಿಲೇಶ್ ಯಾದವ್

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಯುಪಿಯಲ್ಲಿ 300ಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ: ಅಖಿಲೇಶ್ ಯಾದವ್
ಅಖಿಲೇಶ್ ಯಾದವ್

ಎಸ್‌ಪಿ ನೇತೃತ್ವದ ಮೈತ್ರಿಕೂಟವು ಉತ್ತರ ಪ್ರದೇಶದಲ್ಲಿ 300 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮುಂದಿನ ಸರ್ಕಾರವನ್ನು ರಚಿಸಲಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. 

TV9kannada Web Team

| Edited By: Rashmi Kallakatta

Mar 07, 2022 | 10:09 PM

ಲಖನೌ:  ಉತ್ತರ ಪ್ರದೇಶ ಚುನಾವಣೆಯಲ್ಲಿ (UP Assembly Election) ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ತೋರಿಸುವ ಚುನಾವಣೋತ್ತರ ಸಮೀಕ್ಷೆಗಳನ್ನು ತಳ್ಳಿಹಾಕಿರುವ ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) , ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾದಾಗ ರಾಜ್ಯದಿಂದ ಆಡಳಿತ ಪಕ್ಷವನ್ನು ಹೊರಹಾಕಲಾಗುವುದು ಎಂದು ಸೋಮವಾರ ಹೇಳಿದ್ದಾರೆ. ಅವರು ಸಿಕ್ಕಿದ್ದನ್ನೆಲ್ಲಾ ತೋರಿಸಲಿ. ನಾವು ಬಹುಮತದಿಂದ ಗೆಲ್ಲುತ್ತೇವೆ ಎಂದು ಅಖಿಲೇಶ್ ಹೇಳಿದ್ದಾರೆ.  ರಾಜ್ಯ ವಿಧಾನಸಭೆಯ ಅಂತಿಮ ಸುತ್ತಿನ ಮತದಾನದ ಕೊನೆಯಲ್ಲಿ ಸೋಮವಾರ ಸಂಜೆ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗುವುದಕ್ಕಿಂತ ಮುನ್ನ ಅಖಿಲೇಶ್ ಯಾದವ್ ಪಿಟಿಐ ಜೊತೆ ಮಾತನಾಡಿದ್ದಾರೆ. ಎಸ್‌ಪಿ ನೇತೃತ್ವದ ಮೈತ್ರಿಕೂಟವು ಉತ್ತರ ಪ್ರದೇಶದಲ್ಲಿ 300 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮುಂದಿನ ಸರ್ಕಾರವನ್ನು ರಚಿಸಲಿದೆ ಎಂದು ಅವರು ಹೇಳಿದ್ದಾರೆ.  ಪ್ರಚಾರದ ಸಮಯದಲ್ಲಿ ಸುಳ್ಳು ಮತ್ತು ನಕಲಿ ಡೇಟಾವನ್ನು ಪ್ರಸ್ತುತಪಡಿಸಿದ್ದಕ್ಕಾಗಿ ಆಡಳಿತಾರೂಢ ಬಿಜೆಪಿಯನ್ನು ಅಖಿಲೇಶ್ ಟೀಕಿಸಿದ್ದು ಜನರು ಇದನ್ನು ಅರಿತುಕೊಂಡಿದ್ದಾರೆ. ಜನರು ಇದೀಗ ತಮ್ಮ ಭವಿಷ್ಯಕ್ಕಾಗಿ ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ಮತ್ತು ಬೆಳವಣಿಗೆಗೆ ಮತ ಹಾಕಿದ್ದಾರೆ ಎಂದು ಹೇಳಿದರು. ಚುನಾವಣೆಯುದ್ದಕ್ಕೂ “ಪರಿವಾರ್ ವಾದ್ (ವಂಶಾಡಳಿತ)” ಮೇಲೆ ಬಿಜೆಪಿ ದಾಳಿ ನಡೆಸಿರುವುದಕ್ಕೆ ಪ್ರತಿಕ್ರಿಯಿಸಿದ ಅಖಿಲೇಶ್ ಅತೀ ಹೆಚ್ಚು ವಂಶಾಡಳಿತ ಬಿಜೆಪಿಯಲ್ಲೇ ಕಂಡುಬಂದಿದೆ ಎಂದಿದ್ದಾರೆ.

ಏಳನೇ ಮತ್ತು ಅಂತಿಮ ಹಂತದ ಮತದಾನದ ನಂತರ ಬಿಜೆಪಿ ರಾಜ್ಯದಿಂದ ನಿರ್ನಾಮವಾಗಲಿದೆ. ಸಮಾಜವಾದಿ ಪಕ್ಷ ಮೈತ್ರಿಕೂಟವು ಮಾರ್ಚ್ 10 ರ ನಂತರ 300 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಬಹುಮತದ ಸರ್ಕಾರವನ್ನು ರಚಿಸುತ್ತಿದೆ ಎಂದು ಅಖಿಲೇಶ್ ತಮ್ಮ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ಪಿಟಿಐಗೆ ತಿಳಿಸಿದರು.

ಮಾರ್ಚ್ 10 ರಂದು ಪಂಜಾಬ್, ಉತ್ತರಾಖಂಡ್, ಗೋವಾ ಮತ್ತು ಮಣಿಪುರದ ಫಲಿತಾಂಶಗಳೊಂದಿಗೆ ಉತ್ತರಪ್ರದೇಶ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಲಿದೆ.

ಪಕ್ಷದ ಏಕೈಕ ಮುಖ ಮತ್ತು ಎಸ್‌ಪಿ ಪ್ರಚಾರದ ನೇತೃತ್ವ ವಹಿಸಿದ್ದ ಅವರಿಗೆ 2022 ರ ಚುನಾವಣೆಗಳು ಹೇಗೆ ವಿಭಿನ್ನವಾಗಿವೆ ಎಂಬ ಪ್ರಶ್ನೆಗೆ ಯಾದವ್, “ಚುನಾವಣೆಗಳನ್ನು ಪಕ್ಷ ಮತ್ತು ಅದರ ಕಾರ್ಯಕರ್ತರಿಂದ ಹೋರಾಡಲಾಗಿದೆ” ಎಂದು ಹೇಳಿದರು.

“ನಾನು ಅವರೊಂದಿಗೆ ಇದ್ದೆ. ನಾವು ಮುಂಚಿತವಾಗಿಯೇ ಸಿದ್ಧರಾಗಿದ್ದೆವು. ನಾವು ತರಬೇತಿ ಶಿಬಿರಗಳನ್ನು ನಡೆಸಿದ್ದೇವೆ, ರಥಯಾತ್ರೆಗಳನ್ನು ನಡೆಸಿದ್ದೇವೆ, ಅದಕ್ಕೆ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿತು. ಇದು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿತು, ಅವರು ವಿಜಯವನ್ನು ಖಚಿತಪಡಿಸಿಕೊಳ್ಳಲು ಪೂರ್ಣ ಹೃದಯದಿಂದ ಕೆಲಸ ಮಾಡಿದರು.” ಇದು ಮತದಾರರ ಗೆಲುವಾಗಲಿದೆ ಎಂದು ಅಖಿಲೇಶ್ ಹೇಳಿದ್ದಾರೆ.

ಇದನ್ನೂ ಓದಿ: TV9 Exit Poll Results 2022: ಐದು ರಾಜ್ಯಗಳಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆ? ಇಲ್ಲಿದೆ ಚುನಾವಣೋತ್ತರ ಸಮೀಕ್ಷೆ

Follow us on

Related Stories

Most Read Stories

Click on your DTH Provider to Add TV9 Kannada