AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಎಂಎಫ್​ನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಆರ್​​ಬಿಐನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ನೇಮಕ

Urjit Patel: ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭಾರತೀಯ ರಿಸರ್ವ್​​ ಬ್ಯಾಂಕ್​​ನ ಮಾಜಿ ಗವರ್ನರ್ ಊರ್ಜಿತ್ ಪಟೇಲ್​ ಅವರನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಅವರನ್ನು ಮೂರು ವರ್ಷಗಳ ಅವಧಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ.ವರು 1992 ರಿಂದ ಆರ್‌ಬಿಐ ಗವರ್ನರ್ ಆಗಿ ಕೆಲಸ ಮಾಡಿದ್ದಾರೆ. ಇದಲ್ಲದೆ, ಅವರು ನೋಟು ಅಮಾನ್ಯೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಐಎಂಎಫ್​ನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಆರ್​​ಬಿಐನ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ನೇಮಕ
ಊರ್ಜಿತ್ ಪಟೇಲ್ Image Credit source: Reuters
ನಯನಾ ರಾಜೀವ್
|

Updated on:Aug 29, 2025 | 11:01 AM

Share

ನವದೆಹಲಿ, ಆಗಸ್ಟ್​ 29: ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಭಾರತೀಯ ರಿಸರ್ವ್​​ ಬ್ಯಾಂಕ್​​ನ ಮಾಜಿ ಗವರ್ನರ್ ಊರ್ಜಿತ್ ಪಟೇಲ್​ ಅವರನ್ನು ನೇಮಕ ಮಾಡಲಾಗಿದೆ. ಅವರನ್ನು ಮೂರು ವರ್ಷಗಳ ಅವಧಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ.ವರು 1992 ರಿಂದ ಆರ್‌ಬಿಐ ಗವರ್ನರ್ ಆಗಿ ಕೆಲಸ ಮಾಡಿದ್ದಾರೆ. ಇದಲ್ಲದೆ, ಅವರು ನೋಟು ಅಮಾನ್ಯೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆರ್‌ಬಿಐನ 24ನೇ ಗವರ್ನರ್

ಊರ್ಜಿತ್ ಪಟೇಲ್ ಅವರು ಸೆಪ್ಟೆಂಬರ್ 4, 2016 ರಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನ 24 ನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. 1990 ರ ನಂತರ ತಮ್ಮ ಅಧಿಕಾರಾವಧಿ ಪೂರ್ಣಗೊಳ್ಳುವ ಮೊದಲು ರಾಜೀನಾಮೆ ನೀಡಿದ ಮೊದಲ ಕೇಂದ್ರ ಬ್ಯಾಂಕ್ ಗವರ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಟೇಲ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು. ಡಿಸೆಂಬರ್ 10, 2018 ರಂದು ಅವರು ರಾಜೀನಾಮೆ ನೀಡಿದ ಒಂದು ದಿನದ ನಂತರ ಅವರ ಅಧಿಕಾರಾವಧಿ ಕೊನೆಗೊಂಡಿತ್ತು.

ಇದಕ್ಕೂ ಮೊದಲು, ಅವರು ಆರ್‌ಬಿಐನ ಉಪ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದರು, 1996-1997ರ ಅವಧಿಯಲ್ಲಿ ಐಎಂಎಫ್‌ನಿಂದ ಕೇಂದ್ರ ಬ್ಯಾಂಕ್‌ಗೆ ನಿಯೋಜನೆಯಲ್ಲಿದ್ದರು, ಮತ್ತು ಆ ಹುದ್ದೆಯಲ್ಲಿ ಅವರು ಸಾಲ ಮಾರುಕಟ್ಟೆಯ ಅಭಿವೃದ್ಧಿ, ಬ್ಯಾಂಕಿಂಗ್ ವಲಯದ ಸುಧಾರಣೆಗಳು, ಪಿಂಚಣಿ ನಿಧಿ ಸುಧಾರಣೆಗಳು ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಯ ವಿಕಸನದ ಕುರಿತು ಸಲಹೆ ನೀಡಿದ್ದರು.

ಮತ್ತಷ್ಟು ಓದಿ: ಆರ್​ಬಿಐ ಲೆಕ್ಕಾಚಾರ ಮೀರಿಸುವಂತೆ ಭಾರತದ ಆರ್ಥಿಕತೆ ಬೆಳೆಯಲಿದೆ: ಎಸ್​ಬಿಐ ವರದಿಯ ಅನಿಸಿಕೆ

ಅವರು 1998 ರಿಂದ 2001 ರವರೆಗೆ ಹಣಕಾಸು ಸಚಿವಾಲಯದ (ಆರ್ಥಿಕ ವ್ಯವಹಾರಗಳ ಇಲಾಖೆ) ಸಲಹೆಗಾರರಾಗಿದ್ದರು. ಅವರು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಇತರ ಹುದ್ದೆಗಳನ್ನು ಸಹ ನಿರ್ವಹಿಸಿದ್ದಾರೆ.

ಜೂನ್ 21, 2017 ರಿಂದ ಜುಲೈ 25, 2019 ರವರೆಗೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರು ತಮ್ಮ ‘ವಿ ಆಲ್ಸೋ ಮೇಕ್ ಪಾಲಿಸಿ: ಆನ್ ಇನ್ಸೈಡರ್ಸ್ ಅಕೌಂಟ್ ಆಫ್ ಹೌ ದಿ ಫೈನಾನ್ಸ್ ಮಿನಿಸ್ಟ್ರಿ ಫಂಕ್ಷನ್ಸ್’ ಎಂಬ ಪುಸ್ತಕದಲ್ಲಿ ಊರ್ಜಿತ್ ಪಟೇಲ್ ಅವರನ್ನು ಉಲ್ಲೇಖಿಸಿದ್ದಾರೆ.

ಆಗಿನ ಆರ್‌ಬಿಐ ಗವರ್ನರ್ ಪಟೇಲ್ ಅವರ ಕೆಲವು ಬದಲಾವಣೆಗಳ ಉದಾಹರಣೆಗಳನ್ನು ಉಲ್ಲೇಖಿಸಿದ ಗಾರ್ಗ್, ತಮ್ಮ ಪುಸ್ತಕದಲ್ಲಿ, ಚುನಾವಣಾ ಬಾಂಡ್ ಮತ್ತು ಪಾವತಿ ನಿಯಂತ್ರಣ ಮಂಡಳಿ (ಪಿಆರ್‌ಬಿ) ಸ್ಥಾಪನೆಯ ಸಂದರ್ಭದಲ್ಲಿನ ವಿಷಯಗಳ ಕುರಿತು ಉಲ್ಲೇಖಿಸಿದ್ದರು.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಂದರೇನು? ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಇದು ಜಾಗತಿಕ ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸುತ್ತದೆ, ಅಂತಾರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ತೊಂದರೆಯಲ್ಲಿರುವ ಸದಸ್ಯ ರಾಷ್ಟ್ರಗಳಿಗೆ ಹಣಕಾಸು ಸಹಾಯ ನೀಡುತ್ತದೆ. ಇದು ಆರ್ಥಿಕ ನೀತಿಗಳ ಬಗ್ಗೆ ಸಲಹೆ ನೀಡುತ್ತದೆ, ತಾಂತ್ರಿಕ ಸಹಾಯ ಒದಗಿಸುತ್ತದೆ ಮತ್ತು ಜಾಗತಿಕ ಆರ್ಥಿಕತೆಯನ್ನು ಮೇಲ್ವಿಚಾರಣೆ ಮಾಡುತ್ತದೆ.ಇದು 190 ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆಯ ಒಂದು ವಿಶೇಷ ಸಂಸ್ಥೆಯಾಗಿದೆ. ಇದು ಅಂತಾರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:59 am, Fri, 29 August 25