ಅಮೆರಿಕ ರಾಯಭಾರ ಕಚೇರಿಯಿಂದ ನೆಕ್ಸಸ್ ಬ್ಯುಸಿನೆಸ್ ಇನ್‌ಕ್ಯುಬೇಟರ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ
ನವದೆಹಲಿಯ ಅಮೇರಿಕನ್ ಸೆಂಟರ್‌ನಲ್ಲಿ ಆಯೋಜಿಸಲಾದ ನೆಕ್ಸಸ್ 2025ರ ಫೆಬ್ರವರಿ 2ರಂದು 9 ವಾರಗಳ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಅರ್ಜಿಗಳನ್ನು ಸ್ವೀಕರಿಸುತ್ತಿದೆ ಎಂದು ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿ ತಿಳಿಸಿದೆ. ತರಬೇತಿ ನೀಡಲು ಯುಎಸ್ ರಾಯಭಾರ ಕಚೇರಿಯು ಕನೆಕ್ಟಿಕಟ್ ವಿಶ್ವವಿದ್ಯಾನಿಲಯದಲ್ಲಿ ಜಾಗತಿಕ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ.
ನವದೆಹಲಿ: ನವದೆಹಲಿಯಲ್ಲಿನ ಯು.ಎಸ್. ರಾಯಭಾರ ಕಚೇರಿಯು ಅಲ್ಲಿನ ಅಮೆರಿಕನ್ ಸೆಂಟರ್‌ನಲ್ಲಿ ಉದ್ಯಮಿಗಳ ಮಾರ್ಗದರ್ಶನಕ್ಕಾಗಿ ಪ್ರತಿಷ್ಠಿತ ನೆಕ್ಸಸ್ ಕಾರ್ಯಕ್ರಮ ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. 9 ವಾರಗಳ ಈ ತರಬೇತಿಯು ಮುಂದಿನ ವರ್ಷ ಫೆಬ್ರವರಿ 2ರಲ್ಲಿ ಆರಂಭವಾಗಲಿದ್ದು, ನೆಕ್ಸಸ್ ಸರಣಿಯಲ್ಲಿ ಇದು 20ನೇ ಕಾರ್ಯಕ್ರಮವಾಗಿದೆ.
ನೆಕ್ಸಸ್ ಕಾರ್ಯಕ್ರಮದಲ್ಲಿ ಭಾರತದ 15 ನವೋದ್ಯಮಗಳಿಗೆ ಭಾರತೀಯ ಮತ್ತು ಅಮೆರಿಕನ್ ತಜ್ಞರಿಂದ ತರಬೇತಿ ಪಡೆಯುವ ಅವಕಾಶ ದೊರೆಯಲಿದೆ. ಈಗಿನ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸಲು ಮಾರುಕಟ್ಟೆಯ ನಾಡಿಮಿಡಿತ ಅರಿಯಲು ಮತ್ತು ಗುರಿ ನಿಗದಿ ಪಡಿಸಿಕೊಳ್ಳಲು ಈ ತಜ್ಞರು ನೆರವಾಗಲಿದ್ದಾರೆ. ನವೋದ್ಯಮಗಳ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ ಮತ್ತು ಉದ್ಯಮಿಗಳ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಚರ್ಚಿಸಲಾಗುವುದು.
ಇದನ್ನೂ ಓದಿ: Fact Check: ಚೆನ್ನೈನ ಮರೀನಾ ಬೀಚ್ ಬಳಿ ಜಲಾವೃತಗೊಂಡ ಬೀದಿಗಳು ಎಂದು ಸೌದಿ ಅರೇಬಿಯಾದ ವಿಡಿಯೋ ವೈರಲ್
ಆರಂಭಿಕ 9 ವಾರಗಳ ತರಬೇತಿ ಕಾರ್ಯಕ್ರಮದ ನಂತರ 4 ಕಂಪನಿಗಳು ನೆಕ್ಸಸ್‌ನಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಹೆಚ್ಚುವರಿ 8 ತಿಂಗಳವರೆಗೆ ಇನ್ಕ್ಯುಬೇಟರ್ ಸೌಲಭ್ಯಗಳು ಮತ್ತು ನೆಟ್‌ವರ್ಕ್‌ಗೆ ಸಂಪೂರ್ಣ ಪ್ರವೇಶವನ್ನು ನೀಡಲಾಗುತ್ತದೆ.
ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು ಜನವರಿ 5ರೊಳಗಾಗಿ ಇಲ್ಲಿ ಅರ್ಜಿ ಸಲ್ಲಿಸಬೇಕು: www.startupnexus.in ಆಯ್ಕೆಯಾದವರಿಗೆ ಜನವರಿ 17ರೊಳಗೆ ಸೂಚಿಸಲಾಗುವುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ