BBC Documentary: ಬಿಬಿಸಿ ಡಾಕ್ಯುಮೆಂಟರಿ ನಿಷೇಧ ನಿರ್ಧಾರ: ಪತ್ರಿಕಾ ಸ್ವಾತಂತ್ರ್ಯ ಮುಖ್ಯ ಎಂದ ಅಮೆರಿಕ

US State Department Spokesperson Comments: ಇಪ್ಪತ್ತು ವರ್ಷಗಳ ಹಿಂದಿನ ಗುಜರಾತ್ ಗಲಭೆ ಘಟನೆ ಸಂಬಂಧ ಬಿಬಿಸಿ ಬಿಡುಗಡೆ ಮಾಡಿದ ಸಾಕ್ಷ್ಯಚಿತ್ರದ ಪ್ರಸಾರವನ್ನು ಭಾರತ ಸರ್ಕಾರ ನಿಷೇಧಿಸಿದ ನಿರ್ಧಾರದ ಬಗ್ಗೆ ಅಮೆರಿಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ಭಾರತವೂ ಒಳಗೊಂಡಂತೆ ವಿಶ್ವಾದ್ಯಂತ ಪತ್ರಿಕಾ ಸ್ವಾತಂತ್ರ್ಯ ಇರಬೇಕೆಂದು ಬಯಸುತ್ತೇವೆ ಎಂದು ಅಮೆರಿಕ ಹೇಳಿದೆ.

BBC Documentary: ಬಿಬಿಸಿ ಡಾಕ್ಯುಮೆಂಟರಿ ನಿಷೇಧ ನಿರ್ಧಾರ: ಪತ್ರಿಕಾ ಸ್ವಾತಂತ್ರ್ಯ ಮುಖ್ಯ ಎಂದ ಅಮೆರಿಕ
BBC documentary on 2002 Gujarat RiotsImage Credit source: The Hindu
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Jan 26, 2023 | 10:23 AM

ನವದೆಹಲಿ: ಇಪ್ಪತ್ತು ವರ್ಷಗಳ ಹಿಂದಿನ ಗುಜರಾತ್ ಗಲಭೆ (2002 Gujarat Riots) ಘಟನೆ ಸಂಬಂಧ ಬಿಬಿಸಿ ಬಿಡುಗಡೆ ಮಾಡಿದ ಸಾಕ್ಷ್ಯಚಿತ್ರದ ಪ್ರಸಾರವನ್ನು ಭಾರತ ಸರ್ಕಾರ ನಿಷೇಧಿಸಿದ (Ban on BBC documentary) ನಿರ್ಧಾರದ ಬಗ್ಗೆ ಅಮೆರಿಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ಭಾರತವೂ ಒಳಗೊಂಡಂತೆ ವಿಶ್ವಾದ್ಯಂತ ಪತ್ರಿಕಾ ಸ್ವಾತಂತ್ರ್ಯ ಇರಬೇಕೆಂದು ಬಯಸುತ್ತೇವೆ ಎಂದು ಅಮೆರಿಕ ಹೇಳಿದೆ.

ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರೈಸ್ (US State Department Spokesperson) ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನೀ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ಬಿಬಿಸಿ ಡಾಕ್ಯುಮೆಂಟರಿಯನ್ನು ಭಾರತ ನಿಷೇಧಿಸಿದರ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತ ನಿಷೇಧಿಸಿರುವುದು ಪತ್ರಿಕಾ ಸ್ವಾತಂತ್ರ್ಯದ ವಿಚಾರವಾ ಅಥವಾ ವಾಕ್ ಸ್ವಾತಂತ್ರ್ಯದ ವಿಚಾರವಾ ಎಂದು ಪಾಕ್ ಪತ್ರಕರ್ತರು ಕೇಳಿದಾಗ, “ಈ ವಿಚಾರ ಬಂದಾಗ ಪತ್ರಿಕಾ ಸ್ವಾತಂತ್ರ್ಯದ ಮಹತ್ವಕ್ಕೆ ನಮ್ಮ ಬೆಂಬಲ ಇರಲಿದೆಎಂದು ನೆಡ್ ಪ್ರೈಸ್ ಅಭಿಪ್ರಾಯಪಟ್ಟರು.

ನಮ್ಮ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಇತ್ಯಾದಿ ಪ್ರಜಾತಂತ್ರೀಯ ಮೌಲ್ಯಗಳ ಮಹತ್ವವನ್ನು ಎತ್ತಿಹಿಡಿಯುವ ಕೆಲಸ ಮುಂದುವರಿಸುತ್ತೇವೆ. ವಿಶ್ವಾದ್ಯಂತ ನಮ್ಮ ಸಂಬಂಧಗಳಲ್ಲಿ ಇದು ಪ್ರಮುಖ ವಿಚಾರವಾಗಿರುತ್ತದೆ. ಭಾರತದೊಂದಿಗೂ ಇದೇ ವಿಚಾರವನ್ನು ಮುಂದಿಟ್ಟಿದ್ದೇವೆಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಹೇಳಿದರು.

ಏನಿದು ಸಾಕ್ಷ್ಯಚಿತ್ರ?

2002ರಲ್ಲಿ ಗೋಧ್ರಾ ರೈಲು ದುರಂತದ ನಂತರ ಗುಜರಾತ್ ರಾಜ್ಯಾದ್ಯಂತ ಸಂಭವಿಸಿದ ಭೀಕರ ಗಲಭೆ ಘಟನೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದರು. ಅಂದು ಗುಜರಾತ್​ನಲ್ಲಿ ಮುಖ್ಯಮಂತ್ರಿಯಾಗಿದ್ದವರು ನರೇಂದ್ರ ಮೋದಿ. ಅಂದಿನ ಅವರ ನೇತೃತ್ವದ ಸರ್ಕಾರವೇ ಗಲಭೆಗಳಿಗೆ ಕುಮ್ಮಕ್ಕು ಕೊಟ್ಟಿತ್ತು ಎಂಬುದು ಆರೋಪ. ಭಾರತದ ಸುಪ್ರೀಂಕೋರ್ಟ್​ನಲ್ಲಿ ಈ ಪ್ರಕರಣದ ವಿಚಾರಣೆಯಾಗಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದಾಗ್ಯೂ ಬಿಬಿಸಿ ಈ ಘಟನೆ ಬಗ್ಗೆ ಸಾಕ್ಷ್ಯ ಚಿತ್ರ ತಯಾರಿಸಿದೆ. ಅಂದಿನ ಗಲಭೆ ಘಟನೆಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾಕ್ಷ್ಯಗಳಾಗಿದ್ದವರ ಹೇಳಿಕೆಗಳನ್ನು ಆಧರಿಸಿ ಇಂಡಿಯಾ: ದಿ ಮೋದಿ ಕ್ವಸ್ಚನ್ಹೆಸರಿನಲ್ಲಿ ಡಾಕ್ಯುಮೆಂಟರಿ ಮಾಡಿದೆ.

ಈ ಸಾಕ್ಷ್ಯಚಿತ್ರವು ಪಕ್ಷಪಾತಿತನ ಮತ್ತು ವಸಾಹತುಷಾಹಿ ಮನಸ್ಥಿತಿಯ ಪ್ರತಿಬಿಂಬವಾಗಿದೆ ಎಂಬುದು ಸರ್ಕಾರದ ಅನಿಸಿಕೆ. ಈ ಕಾರಣವೊಡ್ಡಿ ಬಿಬಿಸಿಯ ಈ ಎರಡು ಕಂತುಗಳ ಸಾಕ್ಷ್ಯಚಿತ್ರದ ಪ್ರಸಾರವನ್ನು ಭಾರತ ಸರ್ಕಾರ ನಿಷೇಧಿಸಿದೆ. 2021ರ ಐಟಿ ನಿಯಮಗಳ ಆಧಾರದ ನಿಷೇಧ ಮಾಡಿದೆ. ಯೂಟ್ಯೂಬ್​ನಲ್ಲಿ ಹಾಕಲಾಗಿದ್ದ ಈ ಡಾಕ್ಯುಮೆಂಟರಿ ವಿಡಿಯೋಗಳನ್ನು ತೆಗೆದುಹಾಕಲಾಗಿದೆ.

ವಿದ್ಯಾರ್ಥಿಗಳ ಬಂಧನ

ಸರ್ಕಾರ ನಿಷೇಧಿಸಿದಾಗ್ಯೂ ಬಿಬಿಸಿ ಸಾಕ್ಷ್ಯಚಿತ್ರಗಳನ್ನು ದೇಶದ ವಿವಿಧೆಡೆ ಪ್ರಸಾರ ಮಾಡುವ ಪ್ರಯತ್ನ ನಡೆದಿದೆ. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಪಂಜಾಬ್ ಯೂನಿವರ್ಸಿಟಿ ಮೊದಲಾದೆಡೆ ಬುಧವಾರ ಡಾಕ್ಯುಮೆಂಟರಿ ಪ್ರಸಾರಕ್ಕೆ ಪ್ರಯತ್ನ ನಡೆದಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಲವು ವಿದ್ಯಾರ್ಥಿಗಳನ್ನು ಬಂಧಿಸಿದ ಘಟನೆ ನಡೆದಿದೆ.

Published On - 10:23 am, Thu, 26 January 23