Anganwadi Scam: 40 ಅವಿವಾಹಿತ ಹೆಣ್ಣುಮಕ್ಕಳನ್ನು ಗರ್ಭಿಣಿಯರು ಎಂದು ನಮೂದಿಸಿದ ಅಂಗನವಾಡಿ ಕೇಂದ್ರ

ಹಣವನ್ನು ದುರುಪಯೋಗಪಡಿಸಿಕೊಳ್ಳಲು 40 ಅವಿವಾಹಿತ ಹೆಣ್ಣುಮಕ್ಕಳನ್ನು ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರು ಎಂದು ಘೋಷಿಸಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ. ಗ್ರಾಮ ಪಂಚಾಯತ್ ರಾಮಣ್ಣನ ಮಲ್ಹಿಯಾ ಗ್ರಾಮದ ಬಾಲಕಿಯರಿಗೆ ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಪೋಷಣ್ ಅಭಿಯಾನ ಯೋಜನೆಯಡಿ ಲಭ್ಯವಿರುವ ಸೌಲಭ್ಯಗಳ ಕುರಿತು ಆಘಾತಕಾರಿ ಸಂದೇಶ ಬಂದಿದೆ.

Anganwadi Scam: 40 ಅವಿವಾಹಿತ ಹೆಣ್ಣುಮಕ್ಕಳನ್ನು ಗರ್ಭಿಣಿಯರು ಎಂದು ನಮೂದಿಸಿದ ಅಂಗನವಾಡಿ ಕೇಂದ್ರ
ಗರ್ಭಿಣಿ
Follow us
|

Updated on: Nov 08, 2024 | 12:05 PM

ಹಣವನ್ನು ದುರುಪಯೋಗಪಡಿಸಿಕೊಳ್ಳಲು 40 ಅವಿವಾಹಿತ ಹೆಣ್ಣುಮಕ್ಕಳನ್ನು ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರು ಎಂದು ನಮೂದಿಸಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ.  ಮಲ್ಹಿಯಾ  ಗ್ರಾಮದ ಹೆಣ್ಣುಮಕ್ಕಳನ್ನು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಪೋಷಣ್ ಅಭಿಯಾನ ಯೋಜನೆಯಡಿ ಲಭ್ಯವಿರುವ ಸೌಲಭ್ಯಗಳ ಕುರಿತು ಆಘಾತಕಾರಿ ಸಂದೇಶ ಬಂದಿದೆ.

ಪೋಷಣ್ ಟ್ರ್ಯಾಕರ್​ಗೆ ಸುಸ್ವಾಗತ, ಹಾಲುಣಿಸುವ ತಾಯಂದಿರು ಬಿಸಿಯೂಟ ಅಥವಾ ಪಡಿತರ, ಸಮಾಲೋಚನೆ, ಮಕ್ಕಳ ಆರೋಗ್ಯ ಮೇಲ್ವಿಚಾರಣೆ ಮತ್ತು ಸ್ತನ್ಯಪಾನಕ್ಕೆ ಸಂಬಂಧಿಸಿದ ಸಲಹೆಯನ್ನು ಪಡೆಯಬಹುದು ಎನ್ನುವ ಸಂದೇಶ ಬಂದಿದ್ದು,ಅ ದನ್ನು ನೋಡಿ ಹೆಣ್ಣುಮಕ್ಕಳ ಮನೆಯವರು ಬೆಚ್ಚಿಬಿದ್ದಿದ್ದಾರೆ.

ಅವರು ಅಂಗನವಾಡಿ ಕಾರ್ಯಕರ್ತೆ ಸುಮನಲತಾ ಅವರನ್ನು ಪ್ರಶ್ನಿಸಿದಾಗ ನುಣುಚಿಕೊಳ್ಳಲು ಪ್ರಯತ್ನಿಸಿದರು. ಸುಮನಲತಾ ಅವರು ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವ ನೆಪದಲ್ಲಿ ಹೆಣ್ಣುಮಕ್ಕಳಿಂದ ಆಧಾರ್ ನಕಲು ಪ್ರತಿಗಳನ್ನು ಸಂಗ್ರಹಿಸಿ, ನಂತರ ತಾಯಂದಿರಿಗೆ ಉದ್ದೇಶಿಸಿರುವ ಪೌಷ್ಟಿಕಾಂಶದ ವಸ್ತುಗಳನ್ನು ದುರುಪಯೋಗಪಡಿಸಿಕೊಳ್ಳಲು ಗರ್ಭಿಣಿ ಎಂದು ಸುಳ್ಳು ನೋಂದಾಯಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಮತ್ತಷ್ಟು ಓದಿ: ಅಂಗನವಾಡಿ ಕೇಂದ್ರಗಳಲ್ಲಿ ಎಲ್​ಕೆಜಿ, ಯುಕೆಜಿ ಆರಂಭ, ಇಲ್ಲಿದೆ ವಿಶೇಷತೆ

ಕುಟುಂಬದವರು ನೀಡಿದ ದೂರಿನ ಮೇರೆಗೆ ಮುಖ್ಯ ಅಭಿವೃದ್ಧಿ ಅಧಿಕಾರಿ ಹಿಮಾಂಶು ನಾಗ್ಪಾಲ್ ತನಿಖೆಗೆ ಆದೇಶಿಸಿದ್ದಾರೆ. ಈ ಹೆಣ್ಣುಮಕ್ಕಳ ಹೆಸರಿನಲ್ಲಿ ಯಾವುದೇ ವಸ್ತುಗಳನ್ನು ವಿತರಿಸಲಾಗಿದೆಯೇ ಎಂದು ಪರಿಶೀಲಿಸಲು ಬ್ಲಾಕ್ ಅಭಿವೃದ್ಧಿ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ತನಿಖೆಯ ಫಲಿತಾಂಶಗಳ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಸತಿ ಶಾಲೆ ಮತ್ತು ಹಾಸ್ಟೆಲ್​ಗಳಿಗೆ ಗಣ್ಯರು ನಿಯಮಿತವಾಗಿ ಭೇಟಿ ನೀಡಬೇಕು
ವಸತಿ ಶಾಲೆ ಮತ್ತು ಹಾಸ್ಟೆಲ್​ಗಳಿಗೆ ಗಣ್ಯರು ನಿಯಮಿತವಾಗಿ ಭೇಟಿ ನೀಡಬೇಕು
300 ರೂ. ಆಮಿಷವೊಡ್ಡಿ ಸಿದ್ದು ಸಮಾವೇಶಕ್ಕೆ ಜನ ಕರೆಸಿದ ಆರೋಪ: ವಿಡಿಯೋ ವೈರಲ್
300 ರೂ. ಆಮಿಷವೊಡ್ಡಿ ಸಿದ್ದು ಸಮಾವೇಶಕ್ಕೆ ಜನ ಕರೆಸಿದ ಆರೋಪ: ವಿಡಿಯೋ ವೈರಲ್
ಮಾಡರ್ನ್ ಯುಗದ ಕಳ್ಳರಿಗೆ ಸಿಸಿಟಿವಿಗಳ ವಿಶ್ವಾಸರ್ಹತೆ ಮೇಲೆ ನಂಬಿಕೆ ಇಲ್ಲ!
ಮಾಡರ್ನ್ ಯುಗದ ಕಳ್ಳರಿಗೆ ಸಿಸಿಟಿವಿಗಳ ವಿಶ್ವಾಸರ್ಹತೆ ಮೇಲೆ ನಂಬಿಕೆ ಇಲ್ಲ!
ಭವ್ಯಾ-ತ್ರಿವಿಕ್ರಂ ಮಧ್ಯೆ ಕ್ಯಾಪ್ಟನ್ಸಿ ಓಟ; ಟಾಸ್ಕ್ ಇಲ್ಲದೆ ನಾಯಕನ ಆಯ್ಕೆ
ಭವ್ಯಾ-ತ್ರಿವಿಕ್ರಂ ಮಧ್ಯೆ ಕ್ಯಾಪ್ಟನ್ಸಿ ಓಟ; ಟಾಸ್ಕ್ ಇಲ್ಲದೆ ನಾಯಕನ ಆಯ್ಕೆ
ದೇವಾಲಯದಲ್ಲಿ ಕಾಲಿಗೆ ಬಿದ್ದು ನಮಸ್ಕಾರ ಮಾಡಬಾರದು ಯಾಕೆ? ವಿಡಿಯೋ ನೋಡಿ
ದೇವಾಲಯದಲ್ಲಿ ಕಾಲಿಗೆ ಬಿದ್ದು ನಮಸ್ಕಾರ ಮಾಡಬಾರದು ಯಾಕೆ? ವಿಡಿಯೋ ನೋಡಿ
ಕಾರ್ತಿಕ ಮಾಸದ ಮೊದಲ ಶುಕ್ರವಾರದ ದಿನಭವಿಷ್ಯ ತಿಳಿಯಿರಿ
ಕಾರ್ತಿಕ ಮಾಸದ ಮೊದಲ ಶುಕ್ರವಾರದ ದಿನಭವಿಷ್ಯ ತಿಳಿಯಿರಿ
ತೆಲಂಗಾಣದ ದೇವಾಲಯದಲ್ಲಿ ಅಭಿಮಾನಿಗಳಿಂದ ಟ್ರಂಪ್​ಗೆ ಹಾಲಿನ ಅಭಿಷೇಕ!
ತೆಲಂಗಾಣದ ದೇವಾಲಯದಲ್ಲಿ ಅಭಿಮಾನಿಗಳಿಂದ ಟ್ರಂಪ್​ಗೆ ಹಾಲಿನ ಅಭಿಷೇಕ!
ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್
ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್
ಮಗನನ್ನು ಗೆಲ್ಲಿಸುವ ಛಲತೊಟ್ಟಿರುವ ಕುಮಾರಸ್ವಾಮಿಯಿಂದ ಭಿನ್ನ ರೀತಿಯ ಪ್ರಚಾರ
ಮಗನನ್ನು ಗೆಲ್ಲಿಸುವ ಛಲತೊಟ್ಟಿರುವ ಕುಮಾರಸ್ವಾಮಿಯಿಂದ ಭಿನ್ನ ರೀತಿಯ ಪ್ರಚಾರ
ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು
ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು