ಕಾಶ್ಮೀರದಲ್ಲಿ ಪಾಕಿಸ್ತಾನದ ಅಜೆಂಡಾವನ್ನು ಪ್ರಚಾರ ಮಾಡಲು ಪ್ರಯತ್ನಿಸಬೇಡಿ: ಮೋದಿ

ಕಾಶ್ಮೀರದಲ್ಲಿ ಪಾಕಿಸ್ತಾನದ ಅಜೆಂಡಾವನ್ನು ಪ್ರಚಾರ ಮಾಡಲು ಪ್ರಯತ್ನಿಸಬೇಡಿ, ನೆನಪಿಡಿ, ನಿಮ್ಮ ಈ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಮೋದಿಯವರ ಆಶೀರ್ವಾದ ಇರುವವರೆಗೆ ಕಾಶ್ಮೀರದಲ್ಲಿ ಕಾಂಗ್ರೆಸ್ಸಿಗರೇನೂ ಮಾಡಲು ಸಾಧ್ಯವಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಮಾತ್ರ ದೇಶದಲ್ಲಿ ಕೆಲಸ ಮಾಡುತ್ತದೆ, ಇದು ಮೋದಿಯವರ ನಿರ್ಧಾರ ಎಂದು ಹೇಳಿದರು.

ಕಾಶ್ಮೀರದಲ್ಲಿ ಪಾಕಿಸ್ತಾನದ ಅಜೆಂಡಾವನ್ನು ಪ್ರಚಾರ ಮಾಡಲು ಪ್ರಯತ್ನಿಸಬೇಡಿ: ಮೋದಿ
ನರೇಂದ್ರ ಮೋದಿ Image Credit source: Hindustan Times
Follow us
ನಯನಾ ರಾಜೀವ್
|

Updated on: Nov 08, 2024 | 2:21 PM

ಕಾಶ್ಮೀರದಲ್ಲಿ ಪಾಕಿಸ್ತಾನದ ಅಜೆಂಡಾವನ್ನು ಪ್ರಚಾರ ಮಾಡಲು ಪ್ರಯತ್ನಿಸಬೇಡಿ, ನೆನಪಿಡಿ, ನಿಮ್ಮ ಈ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಮೋದಿ ಆಶೀರ್ವಾದ ಇರುವವರೆಗೆ ಕಾಶ್ಮೀರದಲ್ಲಿ ಕಾಂಗ್ರೆಸ್ಸಿಗರೇನೂ ಮಾಡಲು ಸಾಧ್ಯವಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್​​ರ ಸಂವಿಧಾನ ಮಾತ್ರ ದೇಶದಲ್ಲಿ ಕೆಲಸ ಮಾಡುತ್ತದೆ, ಇದು ಮೋದಿಯವರ ನಿರ್ಧಾರ ಎಂದು ಹೇಳಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದೆ. ಅದೇನೇ ಇರಲಿ, ರಾಜಕೀಯ ಪಡಸಾಲೆಯಲ್ಲಿ ಸಂಚಲನ ಹೆಚ್ಚಾಗುತ್ತಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಮಹಾರಾಷ್ಟ್ರದ ಧುಲೆಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಸಭೆಗೆ ಬಂದಿದ್ದ ಜನರಿಗೆ ಕೃತಜ್ಞತೆ ಸಲ್ಲಿಸಿದ ಅವರು ನಂತರ ಮಹಾವಿಕಾಸ್ ಅಘಾಡಿ (ಎಂವಿಎ) ವಿರುದ್ಧ ವಾಗ್ದಾಳಿ ನಡೆಸಿದರು.

ಮಹಾರಾಷ್ಟ್ರದಲ್ಲಿ 15 ವರ್ಷಗಳ ಸುದೀರ್ಘ ರಾಜಕೀಯ ಚಕ್ರವನ್ನು ಮುರಿದು ಬಿಜೆಪಿಯನ್ನು ಅಭೂತಪೂರ್ವ ಗೆಲುವಿನತ್ತ ಮುನ್ನಡೆಸಿದ್ದೀರಿ. ಇಂದು ನಾನು ಮತ್ತೊಮ್ಮೆ ಇಲ್ಲಿ ಧುಲೆ ಭೂಮಿಗೆ ಬಂದಿದ್ದೇನೆ. ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರವನ್ನು ಧುಲೆಯಿಂದಲೇ ಆರಂಭಿಸುತ್ತಿದ್ದೇನೆ.

ಮತ್ತಷ್ಟು ಓದಿ: ಇಡೀ ಜಗತ್ತೇ ನಿಮ್ಮನ್ನು ಪ್ರೀತಿಸುತ್ತೆ, ಪ್ರಧಾನಿ ಮೋದಿಯನ್ನು ಹೊಗಳಿದ ಟ್ರಂಪ್

ಸ್ವಾತಂತ್ರ್ಯದ ಸಂದರ್ಭದಲ್ಲಿ ಬಾಬಾ ಸಾಹೇಬರು ದಲಿತರು ಮತ್ತು ವಂಚಿತರಿಗೆ ಮೀಸಲಾತಿ ಬಯಸಿದ್ದರು, ಆದರೆ ನೆಹರೂ ಅವರು ದಲಿತರು, ಹಿಂದುಳಿದವರು ಮತ್ತು ವಂಚಿತರಿಗೆ ಮೀಸಲಾತಿ ನೀಡಬಾರದು ಎಂದು ಹಠ ಹಿಡಿದಿದ್ದರು. ಬಹಳ ಕಷ್ಟಪಟ್ಟು ಬಾಬಾಸಾಹೇಬರು ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ಮೀಸಲಾತಿ ಕಲ್ಪಿಸಲು ಸಾಧ್ಯವಾಯಿತು.

ನೆಹರೂ ನಂತರ ಇಂದಿರಾ ಗಾಂಧು ಬಂದರು ಮತ್ತು ಅವರು ಮೀಸಲಾತಿ ವಿರುದ್ಧ ಅದೇ ಧೋರಣೆ ಹೊಂದಿದ್ದರು. ಈ ಜನರು SC, ST, OBC ಯಾವಾಗಲೂ ದುರ್ಬಲರಾಗಿ ಉಳಿಯಬೇಕೆಂದು ಬಯಸಿದ್ದರು. ರಾಜೀವ್ ಗಾಂಧಿ ಕೂಡ ಒಬಿಸಿ ಮೀಸಲಾತಿಯನ್ನು ಬಹಿರಂಗವಾಗಿ ವಿರೋಧಿಸಿದ್ದರು ಎಂದರು.

ರಾಜೀವ್ ಗಾಂಧಿ ನಂತರ ಈಗ ಈ ಕುಟುಂಬದ ನಾಲ್ಕನೇ ತಲೆಮಾರಿನ ಪಟ್ಟದ ರಾಜಕುಮಾರ ಅದೇ ಅಪಾಯಕಾರಿ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ಒಬಿಸಿ ಸಮಾಜದ ಒಗ್ಗಟ್ಟನ್ನು ಯಾವುದೇ ರೀತಿಯಿಂದ ಒಡೆಯುವುದು ಕಾಂಗ್ರೆಸ್‌ನ ಏಕೈಕ ಅಜೆಂಡಾ.

ಎಸ್‌ಸಿ, ಎಸ್‌ಟಿ, ಒಬಿಸಿ ಸಮಾಜವು ವಿವಿಧ ಜಾತಿಗಳಾಗಿ ವಿಭಜನೆಯಾಗಬೇಕೆಂದು ಕಾಂಗ್ರೆಸ್ ಬಯಸುತ್ತದೆ. ಕಾಂಗ್ರೆಸ್‌ಗೆ ಬುಡಕಟ್ಟು ಸಮಾಜದ ಅಸ್ಮಿತೆ ಬೇಕು, ಎಸ್‌ಟಿ ಏಕತೆಯನ್ನು ಮುರಿಯಲು ಮುಂದಾಗಿದ್ದಾರೆ. 370 ನೇ ವಿಧಿಯ ಮೂಲಕ ಕಾಂಗ್ರೆಸ್ ಕಾಶ್ಮೀರವನ್ನು ದೇಶದ ಮುಖ್ಯವಾಹಿನಿಯಿಂದ ಪ್ರತ್ಯೇಕಿಸಿತು. ಕಾಶ್ಮೀರದಲ್ಲಿ 75 ವರ್ಷಗಳ ಕಾಲ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಜಾರಿಗೆ ತರಲು ಕಾಂಗ್ರೆಸ್ ಅವಕಾಶ ನೀಡಲಿಲ್ಲ.

ಮಹಾರಾಷ್ಟ್ರದ ಪ್ರತಿಯೊಬ್ಬ ಮಹಿಳೆಯೂ ಈ ಅಘಾಡಿ ಜನರ ಬಗ್ಗೆ ಜಾಗರೂಕರಾಗಿರಬೇಕು. ಮಹಿಳಾ ಶಕ್ತಿ ಸಬಲೀಕರಣಗೊಳ್ಳುವುದನ್ನು ಈ ಜನರು ಎಂದಿಗೂ ನೋಡಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತು ಅಘಾಡಿ ಜನರು ಈಗ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವುದನ್ನು ಇಡೀ ಮಹಾರಾಷ್ಟ್ರವೇ ನೋಡುತ್ತಿದೆ ಎಂದು ಹೇಳಿದರು.

ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 20 ರಂದು ಮತದಾನ ನಡೆಯುತ್ತಿದೆ. ಈ ಸೀಟುಗಳ ಫಲಿತಾಂಶ ನವೆಂಬರ್ 23 ರಂದು ಪ್ರಕಟವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ