ಅಲಿಘರ್ ಮುಸ್ಲಿಂ ವಿವಿಗೆ ಅಲ್ಪಸಂಖ್ಯಾತ ಸ್ಥಾನಮಾನ; 1967ರ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ಅಲ್ಪಸಂಖ್ಯಾತ ಸಂಸ್ಥೆಯೇ ಎಂಬ ವಿಷಯವನ್ನು ಪ್ರತ್ಯೇಕ ತ್ರಿಸದಸ್ಯ ಪೀಠವು ನಿರ್ಧರಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಹತ್ವದ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಸಂವಿಧಾನ ಪೀಠವು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (AMU) ಅಲ್ಪಸಂಖ್ಯಾತ ಸ್ಥಾನಮಾನವನ್ನು ಮರುಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಗಳ ಸರಣಿಯ ತೀರ್ಪು ಪ್ರಕಟಿಸಲು ಪ್ರಾರಂಭಿಸಿದೆ.
ನವದೆಹಲಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ (ಎಎಂಯು) ಅಲ್ಪಸಂಖ್ಯಾತ ಸ್ಥಾನಮಾನವನ್ನು ನಿರಾಕರಿಸಲು ಆಧಾರವಾಗಿರುವ ಅಜೀಜ್ ಬಾಷಾ ಪ್ರಕರಣದ 1967ರ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು 4-3 ಬಹುಮತದಿಂದ ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್ ನ 7 ನ್ಯಾಯಾಧೀಶರ ಪೀಠ 4:3 ಬಹುಮತದ ತೀರ್ಪನ್ನು ನೀಡಿದ್ದು, 1967ರ ಅಝೀಝ್ ಬಾಷಾ ವರ್ಸಸ್ ಯೂನಿಯನ್ ಆಫ್ ಇಂಡಿಯಾದ ತೀರ್ಪಿಗೆ ತಡೆನೀಡಿದೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ʼಅಲ್ಪಸಂಖ್ಯಾತ ಸ್ಥಾನಮಾನʼ ಯಾರು ನೀಡಿದರು ಎಂಬುದರ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ಪೀಠ ಹೇಳಿದೆ.
ಸುಪ್ರೀಂ ಕೋರ್ಟ್ 4:3 ಬಹುಮತದಿಂದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ (AMU) ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆಯಲು ಸಾಧ್ಯವಿಲ್ಲ ಎಂದು ತನ್ನ 1967ರ ತೀರ್ಪನ್ನು ತಳ್ಳಿಹಾಕಿತು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ಅಲ್ಪಸಂಖ್ಯಾತ ಸಂಸ್ಥೆಯೇ ಎಂಬ ವಿಷಯವನ್ನು ಪ್ರತ್ಯೇಕ ತ್ರಿಸದಸ್ಯ ಪೀಠವು ನಿರ್ಧರಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ದೀಪಾವಳಿಗೆ ಪಟಾಕಿ ನಿಷೇಧವೇಕೆ ಜಾರಿಯಾಗಲಿಲ್ಲ?; ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಅಜೀಜ್ ಬಾಷಾ ವರ್ಸಸ್ ಯೂನಿಯನ್ ಆಫ್ ಇಂಡಿಯಾದಲ್ಲಿ 1967ರ ಸುಪ್ರೀಂ ಕೋರ್ಟ್ ತೀರ್ಪು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಒಂದು ಶಾಸನದಿಂದ ಸ್ಥಾಪಿಸಲ್ಪಟ್ಟಿರುವುದರಿಂದ ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ, ಸರ್ಕಾರವು ಅದನ್ನು ನಿಯಂತ್ರಿಸಲು ಅಥವಾ ಆಡಳಿತ ನಡೆಸಲು ಕಾನೂನನ್ನು ತಂದ ಮಾತ್ರಕ್ಕೆ ಸಂಸ್ಥೆಯು ತನ್ನ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕಳೆದುಕೊಳ್ಳುವುದಿಲ್ಲ ಎಂದು ಇಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
SC overrules 1967 verdict holding that since AMU was central university it cannot be considered minority institution. #AligarhMuslimUniversity pic.twitter.com/9xPG8TcYz1
— Press Trust of India (@PTI_News) November 8, 2024
ಅಲಹಾಬಾದ್ ಹೈಕೋರ್ಟಿನ 2006ರ ತೀರ್ಪಿನ ನಂತರ ಎಎಂಯು ಅಲ್ಪಸಂಖ್ಯಾತ ಸಂಸ್ಥೆಯಲ್ಲ ಎಂದು ತೀರ್ಪು ನೀಡಿದ ಬಳಿಕ ಸುಪ್ರೀಂ ಕೋರ್ಟ್‌ನ ಈ ಆದೇಶ ಬಂದಿದೆ.
ತೀರ್ಪಿನ ವೇಳೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮೂರು ಭಿನ್ನಾಭಿಪ್ರಾಯದ ತೀರ್ಪುಗಳು ಸೇರಿದಂತೆ 4 ಪ್ರತ್ಯೇಕ ಅಭಿಪ್ರಾಯಗಳಿವೆ ಎಂದು ಹೇಳಿದರು. ಬಹುಮತದ ತೀರ್ಪನ್ನು ತಾನೇ ಬರೆದಿದ್ದೇನೆ ಎಂದು ಸಿಜೆಐ ಹೇಳಿದ್ದು, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರು ತಮ್ಮ ಪ್ರತ್ಯೇಕ ಅಭಿಪ್ರಾಯಗಳನ್ನು ಬರೆದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ