ಚಲಿಸುತ್ತಿರುವ ಕಾರುಗಳ ಮೇಲೆ ನಿಂತು ಇಬ್ಬರಿಂದ ಅಪಾಯಕಾರಿ ಸಾಹಸ, ಬಿತ್ತು 1 ಲಕ್ಷ ರೂ. ದಂಡ
ಹೆದ್ದಾರಿಯಲ್ಲಿ ಕಾರುಗಳ ಮೇಲೆ ನಿಂತು ಸಾಹಸ ಪ್ರದರ್ಶನ ಮಾಡಿದ್ದ ಇಬ್ಬರಿಗೆ ಟ್ರಾಫಿಕ್ ಪೊಲೀಸರು 1 ಲಕ್ಷ ರೂ. ದಂಡ ವಿಧಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಘಟನೆ ನಡೆದಿದೆ.
ಹೆದ್ದಾರಿಯಲ್ಲಿ ಕಾರುಗಳ ಮೇಲೆ ನಿಂತು ಸಾಹಸ ಪ್ರದರ್ಶನ ಮಾಡಿದ್ದ ಇಬ್ಬರಿಗೆ ಟ್ರಾಫಿಕ್ ಪೊಲೀಸರು 1 ಲಕ್ಷ ರೂ. ದಂಡ ವಿಧಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ಎರಡೂ ವಾಹನಗಳಿಗೆ ತಲಾ 52,000 ರೂ.ಗಳ ಚಲನ್ ವಿಧಿಸಲಾಗಿದೆ. ವಿಡಿಯೋದಲ್ಲಿ ಓರ್ವ ವ್ಯಕ್ತಿ ಚಲಿಸುತ್ತಿರುವ ಸ್ಕಾರ್ಪಿಯೋನ ಬಾನೆಟ್ ಮೇಲೆ ನಿಂತಿರುವುದನ್ನು ಕಾಣಬಹುದು, ಇನ್ನೊಬ್ಬ ಮತ್ತೊಂದು ಕಾರಿನಲ್ಲಿ ಬಾನೆಟ್ನ ಪಕ್ಕಕ್ಕೆ ನಿಂತು ಸ್ಟಂಟ್ ಪ್ರದರ್ಶಿಸುತ್ತಿದ್ದ.
ಪೊಲೀಸರಿಗೆ ವಿಡಿಯೋ ಮೂಲಕ ಸಾರ್ವಜನಿಕರು ದೂರು ನೀಡಿದ್ದರು, ಅದರಿಂದ ಕಾರಿನ ನಂಬರ್ ಅನ್ನು ಪತ್ತೆ ಹಚ್ಚಿದ್ದರು. ಹಾಗೂ ವಿಡಿಯೋದಲ್ಲಿದ್ದ ವ್ಯಕ್ತಿಯನ್ನು ಗುರುತಿಸಿದ್ದಾರೆ. ನಂತರ ಪೊಲೀಸರು ತಲಾ 52,000 ರೂ.ಗಳ ದಂಡವನ್ನು ವಿಧಿಸಿದರು ಮತ್ತು ಚಲನ್ ನಕಲು ಪ್ರತಿಗಳನ್ನು ಅಪರಾಧಿಗಳ ಮನೆಗೆ ಕಳುಹಿಸಿದ್ದಾರೆ.
ಮತ್ತಷ್ಟು ಓದಿ: Viral Video: ರೀಲ್ಸ್ಗಳಿಗಾಗಿ ನೀವು ಮಾಡುವ ಸ್ಟಂಟ್ಗಳು ರಿಯಲ್ ಆಗಿ ಜೀವಕ್ಕೆ ಅಪಾಯ ತರಬಹುದು ಎಚ್ಚರ
ಮತ್ತೊಂದು ಘಟನೆ: ಗೋವಾದ ಮಾಲ್ ಪೊರ್ವೊರಿಮ್ ಹೆದ್ದಾರಿಯಲ್ಲಿ ಎಲ್ಲಾ ಬಾಗಿಲುಗಳನ್ನು ತೆರೆದು ಕಾರು ಡ್ರೈವಿಂಗ್ ಮಾಡುವ ಮೂಲಕ ಕಾರ್ ಡ್ರೈವರ್ ಸ್ಟಂಟ್ ಮಾಡುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದರು.
ಈ ಕುರಿತು ಕಾರು ಚಾಲಕನನ್ನು ಪೊಲೀಸರು ಬಂಧಿಸಿ ದಂಡ ವಿಧಿಸಿದ್ದರು, ಈತ ಕರ್ನಾಟಕದ ಮೂಲದವನಾಗಿದ್ದು, ಈತನೊಂದಿಗೆ ಇದ್ದ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಈತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಈತನ ವಿರುದ್ಧ ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:12 am, Thu, 10 August 23