ಲಕ್ನೋ: ಉತ್ತರ ಪ್ರದೇಶದಾದ್ಯಂತ (Uttar Pradesh Rain) ಭಾನುವಾರ ತಡರಾತ್ರಿಯವರೆಗೆ ಸುರಿದ ಮಳೆಯಿಂದ (Rainfall) 25 ಜನರು ಸಾವನ್ನಪ್ಪಿದ್ದಾರೆ. ಮನೆ ಕುಸಿದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಕಳೆದ 48 ಗಂಟೆಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದ ಎಲ್ಲಾ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಉತ್ತರ ಪ್ರದೇಶದ ಪೂರ್ವ, ಮಧ್ಯ ಭಾಗಗಳು, ಬುಂದೇಲ್‌ಖಂಡ್, ತೇರಾಯ್ ಬೆಲ್ಟ್ ಮತ್ತು ರೋಹಿಲ್‌ಖಂಡ್ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ರಾಜ್ಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಲಕ್ನೋ, ನೊಯ್ಡಾ, ಗಾಜಿಯಾಬಾದ್, ಕಾನ್ಪುರ್, ರಾಂಪುರ ಮತ್ತು ಮೀರತ್‌ನಲ್ಲಿ ಜಿಲ್ಲಾಧಿಕಾರಿಗಳು ಇಂದು 12ನೇ ತರಗತಿಯವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ. ಆಗ್ರಾ ಮತ್ತು ಅಲಿಗಢ ಆಡಳಿತಗಳು ಇಂದು ಮತ್ತು ಮಂಗಳವಾರ ಶಾಲೆಗಳಿಗೆ ರಜೆ ಘೋಷಿಸಿವೆ. ಬಲ್ರಾಮ್‌ಪುರ ಜಿಲ್ಲೆಯ ಸುಮಾರು 400 ಹಳ್ಳಿಗಳು ಜಲಾವೃತವಾಗಿದ್ದು, ಗೋರಖ್‌ಪುರದ ಬರ್ಹಲ್‌ಗಂಜ್‌ನಲ್ಲಿ ದೋಣಿಯೊಂದು ಮುಳುಗಿದ ಪರಿಣಾಮ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
A woman breaks down watching her house getting washed away by heavy current of water. The entire state of Uttar Pradesh is witnessing heavy downpour since the last one week. Climate Change is real. VIDEO OUTSOURCES pic.twitter.com/y65W8cPbzg
— Saurabh Sharma (@saurabhsherry) October 10, 2022
ಇದನ್ನೂ ಓದಿ: Karnataka Rain: ಕರಾವಳಿಯಲ್ಲಿ ತಗ್ಗಿದ ಮಳೆ; ಬೆಂಗಳೂರು, ಶಿವಮೊಗ್ಗ ಸೇರಿ 20 ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಣೆ
ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ ಜನರು ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಜನದಟ್ಟಣೆಯ ಸ್ಥಳಗಳು ಮತ್ತು ಶಿಥಿಲಗೊಂಡ ಕಟ್ಟಡಗಳತ್ತ ಹೋಗದಂತೆ ಜನರಿಗೆ ಸಲಹೆ ನೀಡಿದೆ. ಮಳೆಗೆ ಸಂಬಂಧಿತ ಸಮಸ್ಯೆಗಳಿಗೆ ಸಿಲುಕಿರುವ ಜನರಿಗಾಗಿ ಹಲವಾರು ಜಿಲ್ಲೆಗಳಲ್ಲಿ ಸಹಾಯವಾಣಿಗಳನ್ನು ತೆರೆಯಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಲಕ್ನೋ, ಅಲಿಗಢ, ಮೀರತ್, ಗೌತಮ್ ಬುದ್ಧ ನಗರ ಮತ್ತು ಘಜಿಯಾಬಾದ್ ಸೇರಿದಂತೆ 12 ಜಿಲ್ಲೆಗಳ ಅಧಿಕಾರಿಗಳು ಇಂದು ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದಾರೆ.
Uttar Pradesh | Residents of various colonies in Agra renamed their colonies as ‘Narak Puri’, Keechad Nagar’, Ghinona Nagar, Nala Sarovar’ in order to protest against various issues including bad conditions of roads, waterlogging pic.twitter.com/CrEZiu3gkV
— ANI UP/Uttarakhand (@ANINewsUP) October 10, 2022
ಅಲಿಘಢದಲ್ಲಿ 12ನೇ ತರಗತಿಯವರೆಗಿನ ಎಲ್ಲಾ ಶಾಲೆಗಳು ಅಕ್ಟೋಬರ್ 12ರವರೆಗೆ ಮುಚ್ಚಲ್ಪಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೊಯ್ಡಾ, ಆಗ್ರಾ, ಮಥುರಾ, ಕಾನ್ಪುರ, ಇಟಾಹ್, ಮೈನ್‌ಪುರಿ ಮತ್ತು ಫಿರೋಜಾಬಾದ್‌ನ ಜಿಲ್ಲಾ ಅಧಿಕಾರಿಗಳು ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ.