ಹೊಸ ವರ್ಷದಂದು ಅಯೋಧ್ಯೆಯಲ್ಲಿ ರಾಮ್ ಲಲ್ಲಾಗೆ 56 ನೈವೇದ್ಯ ಅರ್ಪಣೆ

ರಾಮಲಲ್ಲಾ ಮಂದಿರ ನಿರ್ಮಾಣವಾಗುವಾಗ 56 ಬಗೆಯ ನೈವೇದ್ಯಗಳನ್ನು ಅರ್ಪಿಸುವುದು ನಮ್ಮ ಸಂಕಲ್ಪವಾಗಿತ್ತು. 4 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇವೆ, ಜನವರಿ 22 ರಂದು ರಾಮಲಲ್ಲಾಗಾಗಿ ಮತ್ತೆ 56 ಬಗೆಯ ನೈವೇದ್ಯವನ್ನು ತರಲಾಗುವುದು ಎಂದು ಮಧುರಿಮಾ ಸ್ವೀಟ್ ಅಂಗಡಿಯ ಮಾಲೀಕ ಸಜಲ್ ಗುಪ್ತಾ ಹೇಳಿದ್ದಾರೆ.

ಹೊಸ ವರ್ಷದಂದು ಅಯೋಧ್ಯೆಯಲ್ಲಿ ರಾಮ್ ಲಲ್ಲಾಗೆ 56 ನೈವೇದ್ಯ ಅರ್ಪಣೆ
ನೈವೇದ್ಯ
ರಶ್ಮಿ ಕಲ್ಲಕಟ್ಟ

Updated on: Jan 01, 2024 | 3:21 PM

ಅಯೋಧ್ಯೆ ಜನವರಿ 01: ಹೊಸ ವರ್ಷದ 2024 ರ ಮೊದಲ ದಿನದಂದು, ಉತ್ತರ ಪ್ರದೇಶದ (Uttar Pradesh) ಪವಿತ್ರ ಪಟ್ಟಣವಾದ ಅಯೋಧ್ಯೆಯಲ್ಲಿ (Ayodhya) ‘ರಾಮ್ ಲಲ್ಲಾ’ಗೆ 56 ನೈವೇದ್ಯ ಅರ್ಪಿಸಲಾಗುವುದು. ರಾಮಮಂದಿರದ (Ram mandir) ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ’56 ಭೋಗ್ ಪ್ರಸಾದ’ವನ್ನು ದೇವರಿಗೆ ಅರ್ಪಿಸಲಿದ್ದಾರೆ. ಈ ನೈವೇದ್ಯವು ರಸಗುಲ್ಲಾ, ಲಡ್ಡು, ಬರ್ಫಿ ಹೀಗೆ ವಿವಿಧ ರೀತಿಯ ಸಿಹಿಭಕ್ಷ್ಯಗಳನ್ನು ಒಳಗೊಂಡಿದೆ. ಹೊಸ ವರ್ಷದ ಸಂದರ್ಭದಲ್ಲಿ ದೇವರಿಗೆ 56 ನೈವೇದ್ಯ ಅರ್ಪಿಸುವುದು ಹಳೆಯ ಸಂಪ್ರದಾಯವಾಗಿದೆ. ಲಕ್ನೋದ ಪ್ರಸಿದ್ಧ ಅಂಗಡಿಯಾದ ‘ಮಧುರಿಮಾ’ದಿಂದ ಪ್ರಸಾದಕ್ಕಾಗಿ ಸಿಹಿ ಆರ್ಡರ್ ಮಾಡಲಾಗಿದೆ.

ರಾಮಲಲ್ಲಾ ಮಂದಿರ ನಿರ್ಮಾಣವಾಗುವಾಗ 56 ಬಗೆಯ ನೈವೇದ್ಯಗಳನ್ನು ಅರ್ಪಿಸುವುದು ನಮ್ಮ ಸಂಕಲ್ಪವಾಗಿತ್ತು. 4 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇವೆ, ಜನವರಿ 22 ರಂದು ರಾಮಲಲ್ಲಾಗಾಗಿ ಮತ್ತೆ 56 ಬಗೆಯ ಭೋಗ್ ಪ್ರಸಾದವನ್ನು ತರಲಾಗುವುದು ಎಂದು ಮಧುರಿಮಾ ಸ್ವೀಟ್ ಅಂಗಡಿಯ ಮಾಲೀಕ ಸಜಲ್ ಗುಪ್ತಾ ಹೇಳಿದರು.

ಇದೇ ವೇಳೆ ವಿಶ್ವ ಹಿಂದೂ ಪರಿಷತ್ ಮುಖಂಡ ವಿನೋದ್ ಬನ್ಸಾಲ್ ಅವರು ರಾಮ ಮಂದಿರದ ಶಂಕುಸ್ಥಾಪನೆಗಾಗಿ ಯಾಗ ನಡೆಸಿದರು.
ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಗಣ್ಯರು ಹಾಗೂ ಸಮಾಜದ ಎಲ್ಲ ವರ್ಗದ ಜನರು ಆಗಮಿಸಲಿದ್ದಾರೆ.

ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆಯ ಹೆಸರಿನಲ್ಲಿ ವಂಚನೆ ಬಗ್ಗೆ ಎಚ್ಚರವಹಿಸಿ: ವಿಎಚ್​​ಪಿ

ದೇವಾಲಯದ ಟ್ರಸ್ಟ್ ಪ್ರಕಾರ, ಜನವರಿ 16 ರಿಂದ ಏಳು ದಿನಗಳ ಕಾಲ ಪ್ರಾಣಪ್ರತಿಷ್ಠೆಗೆ ಕಾರ್ಯಕ್ರಮಗಳು ನಡೆಯಲಿದೆ.

ಜನವರಿ 22 ರಂದು ಮಧ್ಯಾಹ್ನ ಮತ್ತು 12.45 ರ ನಡುವೆ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಟ್ರಸ್ಟ್ ನಿರ್ಧರಿಸಿದೆ. ವೈದಿಕ ಅರ್ಚಕರಾದ ಲಕ್ಷ್ಮೀಕಾಂತ ದೀಕ್ಷಿತ್ ಅವರು ಆ ದಿನದಂದು ಪ್ರಾಣ ಪ್ರತಿಷ್ಠೆಯಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Mon, 1 January 24

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us