ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಎರಡು ಬಾರಿ ಕಾರು ಹತ್ತಿಸಿದ ಚಾಲಕ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಒಂದೇ ಕಾರು ಎರಡು ಬಾರಿ ಡಿಕ್ಕಿ ಹೊಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಎರಡು ಬಾರಿ ಕಾರು ಹತ್ತಿಸಿದ ಚಾಲಕ
Follow us
ನಯನಾ ರಾಜೀವ್
|

Updated on: May 24, 2024 | 11:44 AM

ಕಾರು ಚಾಲಕನೊಬ್ಬ ಎರಡೆರಡು ಬಾರಿ ಒಂದೇ ವ್ಯಕ್ತಿಯ ಮೇಲೆ ಕಾರು ಹತ್ತಿಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗುತ್ತಿದೆ. ಇದು ಅಪಘಾತ(Accident))ವೇ ಅಥವಾ ಕೊಲೆ ಯತ್ನವೇ ಎನ್ನುವ ಅನುಮಾನ ಮೂಡಿದೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಕಿರಿದಾದ ರಸ್ತೆಯೊಂದರಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಕಾರನ್ನು ಹಿಮ್ಮುಖವಾಗಿ ಚಲಾಯಿಸಿ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆಸಿದ್ದರು.

ಅದಾದ ಬಳಿಕ ಗಾಡಿ ಚಕ್ರಕ್ಕೆ ಸಿಲುಕಿದ್ದ ವ್ಯಕ್ತಿ ಸುಧಾರಿಸಿಕೊಳ್ಳುತ್ತಿದ್ದಂತೆ ಮತ್ತೆ ಕಾರು ಚಾಲಕ ಎದುರಿನಿಂದಲೇ ಅವರ ಮೇಲೆ ಕಾರು ಹತ್ತಿಸಿರುವ ಘಟನೆ ವರದಿಯಾಗಿದೆ. ಪ್ರೇಮ್‌ಗಂಜ್ ಕಾಲೋನಿ ಪ್ರದೇಶದಲ್ಲಿ ಗ್ಯಾಸ್ ಏಜೆನ್ಸಿ ನಿರ್ವಾಹಕರು ರಸ್ತೆಯ ಮೇಲೆ ಬಿದ್ದು, ನೋವಿನಿಂದ ಕಿರುಚಾಡುತ್ತಿರುವುದನ್ನು ಕಾಣಬಹುದು.

ಅಲ್ಲಿಯೇ ಹೋಗುತ್ತಿದ್ದವರು ವ್ಯಕ್ತಿಯ ಅರಚಾಟ ಕೇಳುತ್ತಿದ್ದಂತೆ ತಕ್ಷಣ ಆಗಮಿಸಿ ಅವರನ್ನು ಆಸ್ಪತ್ರೆಗೆ ಕಳೆದೊಯ್ದಿದ್ದಾರೆ. ಗಾಯಾಳು ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಈ ಘಟನೆಯು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ, ಇಂಥಾ ಘಟನೆ ಮರುಕಳಿಸದಂತೆ ಚಾಲಕನ ವಿರುದ್ಧ ತುರ್ತು ಕ್ರಮಕ್ಕೆ ಜನರು ಒತ್ತಾಯಿಸಿದ್ದಾರೆ. ಇದು ಕಣ್ತಪ್ಪಿನಿಂದ ಆದ ದೋಷವೋ ಅಥವಾ ಬೇಕಂತಲೇ ಚಾಲಕ ಅಪಘಾತ ಮಾಡಿದನೋ ಎಂಬುದು ಇನ್ನೂ ತಿಳಿದುಬರಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ