Crime News: 13 ವರ್ಷದ ಮಗಳ ಮೇಲೆ ಅಪ್ಪನಿಂದ ಅತ್ಯಾಚಾರ; ಉತ್ತರ ಪ್ರದೇಶದಲ್ಲೊಂದು ಶಾಕಿಂಗ್ ಘಟನೆ

|

Updated on: Aug 15, 2024 | 4:49 PM

ಉತ್ತರ ಪ್ರದೇಶದ ಅಮೇಥಿಯಲ್ಲಿ ಈ ಅಮಾನವೀಯ ಅತ್ಯಾಚಾರ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಅತ್ಯಾಚಾರದ ಒಂದು ವಾರದ ನಂತರ ತನ್ನ ತಂದೆಯ ವಿರುದ್ಧ ಆ ಹುಡುಗಿ ದೂರು ದಾಖಲಿಸಿದ್ದಾಳೆ. ತಾಯಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಕೆ ಪೊಲೀಸರಿಗೆ ದೂರು ನೀಡುವುದು ತಡವಾಯಿತು ಎನ್ನಲಾಗಿದೆ.

Crime News: 13 ವರ್ಷದ ಮಗಳ ಮೇಲೆ ಅಪ್ಪನಿಂದ ಅತ್ಯಾಚಾರ; ಉತ್ತರ ಪ್ರದೇಶದಲ್ಲೊಂದು ಶಾಕಿಂಗ್ ಘಟನೆ
ಸಾಂದರ್ಭಿಕ ಚಿತ್ರ
Follow us on

ನೊಯ್ಡಾ: ಉತ್ತರ ಪ್ರದೇಶದ ಅಮೇಥಿಯಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ 13 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಇಂದು (ಆಗಸ್ಟ್ 15) ತಿಳಿಸಿದ್ದಾರೆ. ಆಗಸ್ಟ್ 8ರಂದು (ಗುರುವಾರ) ಈ ಘಟನೆ ನಡೆದಾಗ ಮನೆಯಲ್ಲಿ ಆ ಹುಡುಗಿ ಒಬ್ಬಳೇ ಇದ್ದಳು. ಆಕೆ ಆಗಸ್ಟ್ 14ರಂದು ಸಂಜೆ (ಬುಧವಾರ) ಪೊಲೀಸರಿಗೆ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ಸರ್ಕಲ್ ಆಫೀಸರ್ ಅತುಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅತ್ಯಾಚಾರ ನಡೆಸಿದ ಆ ಹುಡುಗಿಯ ತಂದೆಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿರುವ ತನ್ನ ಸಹೋದರಿಯ ಮನೆಗೆ ಹೋಗಿದ್ದ ಆಕೆಯ ತಾಯಿ ಆಗಸ್ಟ್ 10ರಂದು (ಶನಿವಾರ) ನಿಧನರಾದರು. ಈ ಹಿನ್ನೆಲೆಯಲ್ಲಿ ಆ ಹುಡುಗಿ ದೂರು ನೀಡಲು ಬರುವುದು ತಡವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಕೊಲ್ಕತ್ತಾ ವೈದ್ಯೆ ಕೊಲೆಗೂ ಮುನ್ನ ಸಾಮೂಹಿಕ ಅತ್ಯಾಚಾರ?; ಮರಣೋತ್ತರ ಪರೀಕ್ಷೆಯಲ್ಲಿ ಶಾಕಿಂಗ್ ಅಂಶ ಬಯಲು

ತನ್ನ ತಾಯಿಯ ಮರಣದ ಕಾರಣ, ಪೊಲೀಸರನ್ನು ಸಂಪರ್ಕಿಸಿ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಆ ಹುಡುಗಿ ಹೇಳಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ