ಕೊಲ್ಕತ್ತಾ ವೈದ್ಯೆ ಕೊಲೆಗೂ ಮುನ್ನ ಸಾಮೂಹಿಕ ಅತ್ಯಾಚಾರ?; ಮರಣೋತ್ತರ ಪರೀಕ್ಷೆಯಲ್ಲಿ ಶಾಕಿಂಗ್ ಅಂಶ ಬಯಲು
Kolkata Doctor Rape- Murder: ಕಳೆದ ವಾರ ಕೊಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ 32 ವರ್ಷದ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಮೇಲೆ ಕೊಲೆಗೂ ಮುನ್ನ ಸಾಮೂಹಿಕ ಅತ್ಯಾಚಾರ ನಡೆದಿರಬಹುದು ಎಂದು ಮರಣೋತ್ತರ ಪರೀಕ್ಷೆಯ ವರದಿಯು ಸುಳಿವು ನೀಡಿದೆ.
ಕೊಲ್ಕತ್ತಾ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊಲ್ಕತ್ತಾ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ವೇಳೆ ಮತ್ತೊಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಕಳೆದ ವಾರ ಕೊಲ್ಕತ್ತಾದ ಸರ್ಕಾರಿ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಕ್ರೂರವಾಗಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಟ್ರೈನಿ ವೈದ್ಯೆಯ ಮರಣೋತ್ತರ ಪರೀಕ್ಷೆಯ ಪರೀಕ್ಷೆಯು 32 ವರ್ಷದ ವೈದ್ಯೆಯ ಮೇಲೆ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿಂದ ಅತ್ಯಾಚಾರ ನಡೆದಿರುವುದನ್ನು ಸೂಚಿಸುತ್ತದೆ.
ಮೃತ ವೈದ್ಯೆಯ ಮೇಲೆ ಉಂಟಾದ ಗಾಯಗಳ ಪ್ರಕಾರ ಇದು ಒಬ್ಬ ವ್ಯಕ್ತಿಯಿಂದ ನಡೆದಿರುವ ಕೃತ್ಯವಲ್ಲ. ಹಾಗೇ, ಯೋನಿ ಸ್ವ್ಯಾಬ್‌ನಿಂದ ದ್ರವದ ಪ್ರಮಾಣವು ಗ್ಯಾಂಗ್‌ರೇಪ್‌ನ ಸುಳಿವು ನೀಡುತ್ತದೆ ಎಂದು ಹಿರಿಯ ವೈದ್ಯರನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ. ಶವಪರೀಕ್ಷೆ ವರದಿಯು ಯೋನಿ ಸ್ವ್ಯಾಬ್‌ನಿಂದ 151 ಗ್ರಾಂ ದ್ರವವನ್ನು ಉಲ್ಲೇಖಿಸಿದೆ. ಇಷ್ಟು ದೊಡ್ಡ ಮೊತ್ತವು ಒಬ್ಬ ವ್ಯಕ್ತಿಯಿಂದ ಬರಲು ಸಾಧ್ಯವಿಲ್ಲ ಮತ್ತು ಅನೇಕ ಜನರು ಈ ಅತ್ಯಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಸೂಚಿಸುತ್ತದೆ ಎಂದು ಅಖಿಲ ಭಾರತ ಸರ್ಕಾರಿ ವೈದ್ಯರ ಸಂಘದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಡಾ. ಸುವರ್ಣ ಗೋಸ್ವಾಮಿ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನೂ ಓದಿ: Crime News: ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಮಹಿಳಾ ರೋಗಿಗಳ ಮೇಲೆ ವೈದ್ಯನಿಂದ ಅತ್ಯಾಚಾರ
ಕಳೆದ ಶುಕ್ರವಾರ ಕೊಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಅರೆ ನಗ್ನ ಶವ ಪತ್ತೆಯಾಗಿತ್ತು. ರಾತ್ರಿ ಡ್ಯೂಟಿಯಲ್ಲಿದ್ದ ಆ ವೈದ್ಯೆ ತನ್ನ ಸಹೋದ್ಯೋಗಿಗಳ ಜೊತೆ ಊಟ ಮುಗಿಸಿ, ವಿಶ್ರಾಂತಿಗೆಂದು ಸೆಮಿನಾರ್ ಹಾಲ್ಗೆ ಹೋಗಿದ್ದರು. ಏಕಾಂಗಿಯಾಗಿದ್ದ ಅವರ ಮೇಲೆ ಆಗ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ.
ಆಕೆಯ ಖಾಸಗಿ ಭಾಗಗಳಿಂದ ರಕ್ತಸ್ರಾವವಾಗಿತ್ತು ಮತ್ತು ಆಕೆಯ ದೇಹದ ಇತರ ಭಾಗಗಳಲ್ಲಿ ಗಾಯದ ಗುರುತುಗಳಿತ್ತು. ಅವರ ಕಣ್ಣು ಮತ್ತು ಬಾಯಿ ಎರಡರಿಂದಲೂ ರಕ್ತಸ್ರಾವವಾಗಿತ್ತು, ಮುಖ ಮತ್ತು ಉಗುರಿನ ಮೇಲೆ ಗಾಯಗಳಾಗಿತ್ತು. ವೈದ್ಯೆಯ ಖಾಸಗಿ ಭಾಗಗಳಿಂದ ರಕ್ತಸ್ರಾವವೂ ಆಗಿತ್ತು. ಆಕೆಯ ಹೊಟ್ಟೆ, ಎಡಗಾಲು, ಕುತ್ತಿಗೆ, ಬಲಗೈ, ಉಂಗುರದ ಬೆರಳು ಮತ್ತು ತುಟಿಗಳಲ್ಲಿ ಗಾಯಗಳಾಗಿವೆ ಎಂದು ಶವಪರೀಕ್ಷೆ ವರದಿ ಬಹಿರಂಗಪಡಿಸಿದೆ.
ಇದನ್ನೂ ಓದಿ: Crime News: 6 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದರೂ ತೃಪ್ತನಾಗದ ವ್ಯಕ್ತಿಯಿಂದ ಮೇಕೆಯ ಮೇಲೆ ಅತ್ಯಾಚಾರ
ಈ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಸಂಜೋಯ್ ರಾಯ್ ಎಂಬಾತನನ್ನು ಬಂಧಿಸಿದ್ದಾರೆ. ಮಂಗಳವಾರ ಕೊಲ್ಕತ್ತಾ ಹೈಕೋರ್ಟ್ ಈ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಲು ಆದೇಶಿಸಿತು. ನಂತರ ಕೇಂದ್ರೀಯ ಸಂಸ್ಥೆಯ ಇಬ್ಬರು ಅಧಿಕಾರಿಗಳು ಸಂಜೆ ತಾಲಾ ಪೊಲೀಸ್ ಠಾಣೆಗೆ ತೆರಳಿ ಕೋಲ್ಕತ್ತಾ ಪೊಲೀಸರ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ತೆಗೆದುಕೊಂಡರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ