Doda Encounter: ಜಮ್ಮು ಕಾಶ್ಮೀರದ ದೋಡಾದಲ್ಲಿ ಎನ್‌ಕೌಂಟರ್ ಕಾರ್ಯಾಚರಣೆ ವೇಳೆ ಸೇನಾ ಕ್ಯಾಪ್ಟನ್ ಹುತಾತ್ಮ
ಸೇನೆಯ ಅಧಿಕಾರಿಗಳ ಪ್ರಕಾರ, ಈ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿಯ ನಂತರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಈ ಕಾರ್ಯಾಚರಣೆಯ ಸಮಯದಲ್ಲಿ ಉಗ್ರರು ಗುಂಡು ಹಾರಿಸಿದರು. ಇದು ಗುಂಡಿನ ಚಕಮಕಿಗೆ ಕಾರಣವಾಯಿತು.
ಶ್ರೀನಗರ: ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ಇಂದು (ಬುಧವಾರ) ನಡೆದ ಭದ್ರತಾ ಕಾರ್ಯಾಚರಣೆಯಲ್ಲಿ ಭಾರತೀಯ ಸೇನಾ ಕ್ಯಾಪ್ಟನ್ ಹತನಾಗಿದ್ದು, ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ದಟ್ಟ ಅರಣ್ಯದ ಶಿವಗಢ-ಅಸ್ಸಾರ್ ಬೆಲ್ಟ್‌ನಲ್ಲಿ ಭುಗಿಲೆದ್ದ ಎನ್‌ಕೌಂಟರ್, ಈ ಪ್ರದೇಶದಲ್ಲಿ ಅಡಗಿರುವ ವಿದೇಶಿ ಉಗ್ರರನ್ನು ಹೊರಹಾಕುವ ಪ್ರಯತ್ನದ ಭಾಗವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಗೂ ಕೇವಲ ಒಂದು ದಿನ ಮೊದಲು ಪ್ರಾರಂಭವಾದ ಎನ್‌ಕೌಂಟರ್ ಕಾರ್ಯಾಚರಣೆಯು ಈ ಪ್ರದೇಶದಲ್ಲಿ ಇತ್ತೀಚಿನ ಹಿಂಸಾಚಾರವನ್ನು ಹೆಚ್ಚಿಸಿತು. ತೀವ್ರ ಗುಂಡಿನ ಚಕಮಕಿಯಲ್ಲಿ ಒಬ್ಬ ನಾಗರಿಕನಿಗೂ ಗಾಯಗಳಾಗಿವೆ.
The Arms, ammunitions and logistics recovered from the encounter site in Doda are clearly indicating highly trained terrorists (SSG commandos of Pakistan Army) are infiltrated for long stays.
Trust our armed forces, terrorists will be sent there where they deserve. pic.twitter.com/HVnHxnLxX5
— Baba Banaras™ (@RealBababanaras) August 14, 2024
ಇದನ್ನೂ ಓದಿ: ಛತ್ತೀಸ್ಗಢ-ಮಹಾರಾಷ್ಟ್ರ ಗಡಿಯಲ್ಲಿ ಪೊಲೀಸರಿಂದ ಎನ್‌ಕೌಂಟರ್, 12 ನಕ್ಸಲರ ಹತ್ಯೆ
ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆ (CASO) ನೇತೃತ್ವ ವಹಿಸಿದ್ದ ಯುವ ಕ್ಯಾಪ್ಟನ್ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಭಾರೀ ಗುಂಡಿನ ಚಕಮಕಿಯ ನಡುವೆಯೂ ಭಯೋತ್ಪಾದಕರು ಅಸ್ಸಾರ್ ಪ್ರದೇಶದ ನದಿಯೊಂದರ ಬಳಿ ಅಡಗಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Wed, 14 August 24