AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: ಸಾವಿಗೀಡಾಗುವ ಗಂಟೆಗಳ ಮೊದಲು ಆಕೆ ಡೈರಿಯಲ್ಲಿ ಹೀಗೆ ಬರೆದಿದ್ದರು

ತಮ್ಮ ಮಗಳು ಕಷ್ಟಪಟ್ಟು ದುಡಿಯುವ ವಿದ್ಯಾರ್ಥಿನಿ. ವೈದ್ಯೆಯಾಗುವ ಗುರಿಯನ್ನು ಸಾಧಿಸಲು ಅವಳು ಸಾಕಷ್ಟು ಪರಿಶ್ರಮ ಪಟ್ಟಿದ್ದಾಳೆ. ಆಕೆಯನ್ನು ಬೆಳೆಸಲು ಕುಟುಂಬವು ಹಲವಾರು ತ್ಯಾಗ ಮಾಡಿದೆ. ನ್ಯಾಯ ಸಿಗುವ ಭರವಸೆ ಇದೆ. ಆದರೆ ಆಕೆ ಬಿಟ್ಟು ಹೋದ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಸ್ವಲ್ಪ ಸಮಾಧಾನ ಸಿಗುತ್ತದೆ ಎಂದು ವೈದ್ಯೆಯ ಅಪ್ಪ ಹೇಳಿದ್ದಾರೆ.

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: ಸಾವಿಗೀಡಾಗುವ ಗಂಟೆಗಳ ಮೊದಲು ಆಕೆ ಡೈರಿಯಲ್ಲಿ ಹೀಗೆ ಬರೆದಿದ್ದರು
ಕೊಲ್ಕತ್ತಾದಲ್ಲಿ ಪ್ರತಿಭಟನೆ
ರಶ್ಮಿ ಕಲ್ಲಕಟ್ಟ
|

Updated on: Aug 15, 2024 | 3:11 PM

Share

ಕೊಲ್ಕತ್ತಾ ಆಗಸ್ಟ್ 15: ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಮೃತ ಟ್ರೈನಿ ವೈದ್ಯೆಯ (Kolkata doctor death) ತಂದೆ ತನ್ನ ಮಗಳು ಕೊನೆಯದಾಗಿ ಡೈರಿಯಲ್ಲಿ ಬರೆದಿದ್ದನ್ನು ಬಹಿರಂಗಪಡಿಸಿದ್ದಾರೆ. ತನ್ನ ಮಗಳು ತನ್ನ ಕನಸುಗಳನ್ನು ನನಸಾಗಿಸಲು ಪ್ರತಿದಿನ 10-12 ಗಂಟೆಗಳ ಕಾಲ ಅಧ್ಯಯನ ಮಾಡುವ ಅಧ್ಯಯನಶೀಲ ವ್ಯಕ್ತಿ ಎಂದು ಅವರು ವಾಹಿನಿಯೊಂದಕ್ಕೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತನ್ನ ಕೊನೆಯ ಡೈರಿ ಪುಟದಲ್ಲಿ ಆಕೆ ತನ್ನ ಜೀವನದಲ್ಲಿ ಏನು ಮಾಡಬೇಕೆಂದು ಬಯಸಿದ್ದಳೆಂದು ಬರೆದಿದ್ದಾಳೆ ಎಂದು ಆಕೆಯ ಅಪ್ಪ ಹೇಳಿದ್ದಾರೆ.

ಆಕೆಯ ತಂದೆಯ ಪ್ರಕಾರ, ಸಂತ್ರಸ್ತೆ ತನ್ನ ಕೊನೆಯ ದಿನಚರಿಯಲ್ಲಿ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ತನ್ನ ಎಂಡಿ ಕೋರ್ಸ್‌ನಲ್ಲಿ ಚಿನ್ನದ ಪದಕ ವಿಜೇತೆಯಾಗಬೇಕೆಂದು ಬರೆದಿದ್ದಾಳೆ. ಇದು ಜೀವನದಲ್ಲಿ ಆಕೆಯ ಗುರಿಗಳ ಕಡೆಗೆ ಮತ್ತು ವೈದ್ಯಕೀಯ ವೃತ್ತಿಯ ಕಡೆಗೆ ತನ್ನ ಸಮರ್ಪಣೆಯನ್ನು ತೋರಿಸುತ್ತದೆ. ಕೊಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಗೆ ಹೊರಡುವ ಮೊದಲು  ಅವಳು ಡೈರಿ ಬರೆದಿದ್ದಳು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ತಮ್ಮ ಮಗಳು ಕಷ್ಟಪಟ್ಟು ದುಡಿಯುವ ವಿದ್ಯಾರ್ಥಿನಿ. ವೈದ್ಯೆಯಾಗುವ ಗುರಿಯನ್ನು ಸಾಧಿಸಲು ಅವಳು ಸಾಕಷ್ಟು ಪರಿಶ್ರಮ ಪಟ್ಟಿದ್ದಾಳೆ. ಆಕೆಯನ್ನು ಬೆಳೆಸಲು ಕುಟುಂಬವು ಹಲವಾರು ತ್ಯಾಗ ಮಾಡಿದೆ. ನ್ಯಾಯ ಸಿಗುವ ಭರವಸೆ ಇದೆ. ಆದರೆ ಆಕೆ ಬಿಟ್ಟು ಹೋದ ಶೂನ್ಯವನ್ನು ತುಂಬಲು ಸಾಧ್ಯವಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಸ್ವಲ್ಪ ಸಮಾಧಾನ ಸಿಗುತ್ತದೆ ಎಂದು ವೈದ್ಯೆಯ ಅಪ್ಪ ಹೇಳಿದ್ದಾರೆ.

ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮನೆಯವರಿಗೆ ಮೊದಲು ತಿಳಿಸಲಾಗಿತ್ತು. ಆದರೆ, ಕೊಲೆಗೆ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ. ಮಹಿಳೆ ತನ್ನ ಸಹೋದ್ಯೋಗಿಗಳೊಂದಿಗೆ ಊಟ ಮಾಡಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಳು. ಶವ ಪರೀಕ್ಷೆಯ ಪ್ರಕಾರ ಮುಂಜಾನೆ 3 ರಿಂದ 5 ಗಂಟೆಯ ನಡುವೆ ಈ ಘಟನೆ ನಡೆದಿದೆ.

ಇದನ್ನೂ ಓದಿ: ಕೇರಳ: ಭೂಕುಸಿತ ಪೀಡಿತ ವಯನಾಡ್‌ಗೆ ‘ಭಾರೀ ಮಳೆ’ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಆಕೆಯ ಬಾಯಿ, ಕಣ್ಣು ಮತ್ತು ಖಾಸಗಿ ಭಾಗಗಳಿಂದ ರಕ್ತಸ್ರಾವವಾಗಿದೆ ಎಂದು ವರದಿ ತಿಳಿಸಿದೆ. ಜನನಾಂಗದ ಚಿತ್ರಹಿಂಸೆಯನ್ನು ಸೂಚಿಸುವ ಆಕೆಯ ಖಾಸಗಿ ಭಾಗಗಳಲ್ಲಿ ಆಳವಾದ ಗಾಯವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆಕೆಯ ಗಂಟಲಿನ ಕಾರ್ಟಿಲೆಜ್ ಮುರಿದುಹೋಗಿತ್ತು. ಆಕೆಯ ದೇಹದ ಮೇಲೆ ಇನ್ನೂ ಅನೇಕ ಗಾಯಗಳು ಕಂಡುಬಂದಿವೆ. ಈ ಪ್ರಕರಣದಲ್ಲಿ ನಾಗರಿಕ ಸ್ವಯಂಸೇವಕನನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರೀಯ ತನಿಖಾ ದಳವು ತನಿಖೆಯನ್ನು ನಡೆಸುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ