ನಾನು ನಿನ್ನ ಗಂಡನ ಎರಡನೇ ಹೆಂಡತಿ ಎಂದು ಫೋನ್ನಲ್ಲಿ ಹೇಳುತ್ತಿದ್ದಂತೆ ಕುಸಿದು ಬಿದ್ದು ಪ್ರಾಣಬಿಟ್ಟ ಮಹಿಳೆ
ಗಂಡನ ಮೊಬೈಲ್ನಿಂದ ಬಂದ ಕರೆಸ್ವೀಕರಿಸಿದ ಬಳಿಕ ಮಹಿಳೆಯೊಬ್ಬಳು ಅಸ್ವಸ್ಥಳಾಗಿ ಪ್ರಾಣಬಿಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಗಂಡನ ಮೊಬೈಲ್ನಿಂದ ಬಂದ ಕಾಲ್ನಲ್ಲಿ ಅತ್ತ ಮತ್ತೊಬ್ಬ ಮಹಿಳೆ ತಾನು ಆಕೆಯ ಗಂಡನ ಎರಡನೇ ಹೆಂಡತಿ ಎಂದು ಹೇಳಿಕೊಂಡಿದ್ದಾಳೆ. ಮಹಿಳೆ ಗೆ ದುಃಖ ಉಮ್ಮಳಿಸಿ ಬಂದಿದೆ. ಕೂಡಲೇ ತನ್ನ ಸಹೋದರ ಹಾಗೂ ತಾಯಿಯನ್ನು ಕರೆದುಕೊಂಡು ಬಸ್ಸಿನಲ್ಲಿ ಗಂಡನ ಮನೆಯತ್ತ ಪ್ರಯಾಣ ಬೆಳೆಸಿದ್ದಳು. ಮಾರ್ಗಮಧ್ಯದಲ್ಲಿ ಬಸ್ಸಿನಲ್ಲಿ ಕುಸಿದುಬಿದ್ದು ಪ್ರಾಣಬಿಟ್ಟಿದ್ದಾರೆ.

ಉತ್ತರ ಪ್ರದೇಶ, ಆಗಸ್ಟ್ 28: ಯಾರೋ ಕರೆ ಮಾಡಿ ನಾನು ನಿನ್ನ ಪತಿಯ ಎರಡನೇ ಹೆಂಡತಿ ಎಂದು ಹೇಳುತ್ತಿದ್ದಂತೆ, ಮಹಿಳೆ(Woman)ಯೊಬ್ಬಳು ಕುಸಿದು ಪ್ರಾಣ ಬಿಟ್ಟಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಲಾಲ್ಪುರ್ ಗ್ರಾಮದ ರೀಟಾ ಎಂದು ಗುರುತಿಸಲಾದ ಮಹಿಳೆ ಘಟನೆ ನಡೆದ ಸಮಯದಲ್ಲಿ ತನ್ನ ತಾಯಿ ಮತ್ತು ಸಹೋದರನೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದರು.
ರೀಟಾಗೆ ತನ್ನ ಪತಿಯ ಮೊಬೈಲ್ ಸಂಖ್ಯೆಯಿಂದ ಒಂದು ಕರೆ ಬಂದಿತ್ತು, ಮಹಿಳೆಯೊಬ್ಬಳು ಮಾತನಾಡಿ ಆಕೆಯನ್ನು ಆಕೆಯ ಗಂಡನ ಎರಡನೇ ಪತ್ನಿಯೆಂದು ಪರಿಚಯಿಸಿಕೊಂಡಿದ್ದಳು. ಈ ಕರೆಯು ರೀಟಾಗೆ ಭಾವನಾತ್ಮಕ ಯಾತನೆಯನ್ನುಂಟು ಮಾಡಿತ್ತು.
ಉತ್ತರ ಪ್ರದೇಶದ ಹಾರ್ದೋಯ್‌ನಲ್ಲಿರುವ ತನ್ನ ಮನೆಗೆ ಮರಳುವ ಉದ್ದೇಶದಿಂದ ಅವಳು ತಕ್ಷಣ ತನ್ನ ತಾಯಿ ಮತ್ತು ಸಹೋದರನೊಂದಿಗೆ ದೆಹಲಿಯಿಂದ ಬಸ್‌ನಲ್ಲಿ ಹೊರಟಳು. ಪ್ರಯಾಣದ ಸಮಯದಲ್ಲಿ ಆಕೆಗೆ ತುಂಬಾ ಸುಸ್ತಾದ ಅನುಭವವಾಗಿತ್ತು. ದುಃಖಿತಳಾಗಿದ್ದಳು, ತಾಯಿಯ ಮಡಿಲಲ್ಲಿ ಅಳುತ್ತಿದ್ದಳು, ಅವಳು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಳು. ಅಲ್ಲೇ ಉಸಿರು ಚೆಲ್ಲಿದ್ದಳು. ಅಟರೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಧಿಕುನ್ನಿ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಮತ್ತಷ್ಟು ಓದಿ: ಅಮ್ಮಾ ನಾನು ಸಾಯ್ತೀನಿ, ಇಲ್ದಿದ್ರೆ ಅವ್ರೇ ಸಾಯಿಸ್ತಾರೆ, ತಾಯಿಗೆ ಮೆಸೇಜ್ ಕಳುಹಿಸಿ ಗರ್ಭಿಣಿ ಆತ್ಮಹತ್ಯೆ
ಸೀತಾಪುರ ಜಿಲ್ಲೆಯ ಬನಿಯಾ ಮೌ ಗ್ರಾಮದ ನಿವಾಸಿ ಶೈಲೇಂದ್ರ ಅವರನ್ನು ರೀಟಾ ಸುಮಾರು ಎರಡೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದರು. ಸ್ವಲ್ಪ ಸಮಯದ ನಂತರ, ಅವರಿಗೆ ಕ್ಷಯರೋಗ ಇರುವುದು ಪತ್ತೆಯಾಯಿತು ಮತ್ತು ಚಿಕಿತ್ಸೆಗಾಗಿ ಅವರ ತಾಯಿಯ ಮನೆಗೆ ಮರಳಿದ್ದರು.
ಚೇತರಿಸಿಕೊಂಡ ನಂತರ, ಅವರು ತಮ್ಮ ಅತ್ತೆಯ ಮನೆಗೆ ಮರಳಿದ್ದರು, ಮೇ ತಿಂಗಳಲ್ಲಿ, ಅವರ ತಂದೆಯ ಮರಣದ ನಂತರ, ಅವರು ತಮ್ಮ ಹುಟ್ಟೂರು ಜಲಾಲ್ಪುರಕ್ಕೆ ಬಂದಿದ್ದರು. ಈ ಅವಧಿಯಲ್ಲಿ, ಅವರ ಪತಿಯೊಂದಿಗಿನ ಭಿನ್ನಾಭಿಪ್ರಾಯವು ಅವರನ್ನು ತನ್ನ ತಾಯಿ ಮತ್ತು ಸಹೋದರನೊಂದಿಗೆ ದೆಹಲಿಗೆ ಹೋಗಲು ಕಾರಣವಾಗಿತ್ತು.
ಆಕೆಯ ಸಾವಿನ ನಂತರ, ರೀಟಾಳ ಸಹೋದರ ಅಟರೌಲಿ ಪೊಲೀಸ್ ಠಾಣೆಗೆ ಘಟನೆಯ ಬಗ್ಗೆ ವರದಿ ಮಾಡಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಶವಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಉಸ್ತುವಾರಿ ಇನ್ಸ್‌ಪೆಕ್ಟರ್ ಮಾರ್ಕಂಡೇಯ ಸಿಂಗ್ ದೃಢಪಡಿಸಿದರು. ನಿಜವಾಗಿಯೂ ಕರೆ ಮಾಡಿದ್ದು ಆಕೆಯ ಪತಿಯ ಎರಡನೇ ಹೆಂಡತಿಯೇ ಹೌದೋ, ಇಲ್ಲವೋ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




