ಅತ್ತೆ ಜತೆ ಭಾವಿ ಅಳಿಯ ಪರಾರಿ: ಆಸ್ತಿಯಲ್ಲಿ ಬಿಡಿಗಾಸೂ ನಿನಗಿಲ್ಲ ಎಂದ ರಾಹುಲ್ ತಂದೆ

ಅತ್ತೆ ಜತೆ ಭಾವಿ ಅಳಿಯ ಓಡಿ ಹೋಗಿರುವುದು ಎರಡೂ ಕುಟುಂಬಗಳ ಜತೆ ಜತೆಗೆ ಎರಡು ಗ್ರಾಮಗಳಲ್ಲೂ ಆಕ್ರೋಶ ಮನೆ ಮಾಡಿದೆ. ಅವರು ಓಡಿ ಹೋಗಿಬಿಟ್ಟರು ಆದರೆ ಈಗ ಮನೆಯಲ್ಲಿರುವವರಿಗೆ ನೂರಾರು ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಅವರು ನಿತ್ಯ ನರಕ ಅನುಭವಿಸುವಂತಾಗಿದೆ. ಅತ್ತೆ ಜತೆ ಓಡಿ ಹೋಗಿದ್ದ ರಾಹುಲ್​ ತಂದೆ ಘೋಷಣೆಯೊಂದರಲ್ಲಿ ಮಾಡಿದ್ದು, ತನ್ನ ಆಸ್ತಿಯಲ್ಲಿ ಯಾವ ಪಾಲೂ ಮಗನಿಗೆ ಧಕ್ಕುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಇಂದಿನಿಂದ ಮಗನ ಜತೆ ಇರುವ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಘೋಷಿಸಿದ್ದಾರೆ.

ಅತ್ತೆ ಜತೆ ಭಾವಿ ಅಳಿಯ ಪರಾರಿ: ಆಸ್ತಿಯಲ್ಲಿ ಬಿಡಿಗಾಸೂ ನಿನಗಿಲ್ಲ ಎಂದ ರಾಹುಲ್ ತಂದೆ
ಮಹಿಳೆ

Updated on: Apr 17, 2025 | 12:07 PM

ಅಲಿಗಢ, ಏಪ್ರಿಲ್ 17: ಮಗಳ ಮದುವೆ(Marriage) ಇನ್ನೇನು 10 ದಿನಗಳು ಇವೆ ಎನ್ನುವಾಗ ಮಗಳನ್ನು ಮದುವೆಯಾಗಬೇಕಿದ್ದ ವರನ ಜತೆಗೇ ಅತ್ತೆ ಪರಾರಿಯಾಗಿರುವ ಘಟನೆ ಇತ್ತೀಚೆಗೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಈ ಸುದ್ದಿ ಎರಡೂ ಕುಟುಂಬಗಳಷ್ಟೇ ಅಲ್ಲದೆ ಎರಡೂ ಗ್ರಾಮಗಳಲ್ಲಿ ಆಕ್ರೋಶ ಹುಟ್ಟುಹಾಕಿತ್ತು. ಇದೀಗ ಯುವಕನ ತಂದೆ ಆತನಿಗೆ ಆಸ್ತಿಯಲ್ಲಿ ಕಿಂಚಿತ್ತೂ ಪಾಲು ಕೊಡುವುದಿಲ್ಲ ಎಂದು ಘೋಷಿಸಿದ್ದಾರೆ. ರಾಹುಲ್ ತಂದೆ ತನ್ನ ಮಗನೊಂದಿಗಿರುವ ಎಲ್ಲಾ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ.

ರಾಹುಲ್ ಕುಟುಂಬಕ್ಕೆ ಕಳಂಕ ತಂದಿದ್ದಲ್ಲದೆ, ನಗದು, ಆಭರಣಗಳೊಂದಿಗೆ ಮನೆಯಿಂದ ಹೊರಟು ಹೋಗಿದ್ದಾನೆ. ಇನ್ನುಮುಂದೆ ಆತನಿಗೆ ನಮಗೂ ಯಾವುದೇ ಸಂಬಂಧವಿಲ್ಲ. ಅವನು ನಮ್ಮ ಮರ್ಯಾದೆ ತೆಗೆದಿದ್ದಾನೆ ಎಂದರು.

ಇವರಿಬ್ಬರ ನಡುವಿನ ವಯಸ್ಸಿನ ವ್ಯತ್ಯಾಸವು ಸಾರ್ವಜನಿಕ ಕುತೂಹಲಕ್ಕೆ ಕಾರಣವಾಗಿದೆ. ರಾಹುಲ್‌ಗೆ ಈಗ 24 ವರ್ಷ ವಯಸ್ಸಾಗಿದ್ದು ಅಪ್ನಾ ದೇವಿಗೆ ಅವರಿಗೆ ಕೇವಲ 34 ವರ್ಷ ವಯಸ್ಸಾಗಿದೆ.

ಇದನ್ನೂ ಓದಿ
ಮಗಳ ಮದುವೆಗೂ ಮುನ್ನ ಭಾವಿ ಅಳಿಯನ ಜತೆ ಪರಾರಿಯಾದ ಅತ್ತೆ
ವರ್ಷದ ಈ ತಿಂಗಳಿನಲ್ಲಿ ಮದುವೆ ಮಾಡಿಕೊಳ್ಳಲ್ಲ… ಏಕೆ ಗೊತ್ತಾ?
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
ಅನ್ಯಕೋಮಿನವನೊಂದಿಗೆ ಹಿಂದೂ ಯುವತಿ ಮದುವೆ: ವಿವಾಹ ಮಾಡಿಸಿದ್ದವನಿಗೆ ಬೆದರಿಕೆ

ಎಲ್ಲವೂ ಸರಿ ಇದ್ದಿದ್ರೆ ಇಂದು ಶಿವಾನಿ ಹಾಗೂ ರಾಹುಲ್ ಮದುವೆ ನಡೆಯುತ್ತಿತ್ತು ಎಂದು ವಧುವಿನ ತಂದೆ ಕಣ್ಣೀರು ಹಾಕಿದ್ದಾರೆ. ಮದುವೆ 9 ದಿನಗಳು ಬಾಕಿ ಇರುವಾಗಲೇ ಭಾವಿ ಅಳಿಯ ತನ್ನ ಅತ್ತೆಯ ಜತೆ ಪರಾರಿಯಾಗಿದ್ದನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆ ಅಲಿಗಢದಲ್ಲಿ ನಡೆದಿತ್ತು, ಈ ಸಂದರ್ಭದಲ್ಲಿ ಮನೆಯಲ್ಲಿರುವ ಆಭರಣಗಳನ್ನೆತ್ತಿಕೊಂಡು ಅತ್ತೆ ಪರಾರಿಯಾಗಿದ್ದಳು.

ಮತ್ತಷ್ಟು ಓದಿ: ಭಾವಿ ಅಳಿಯನ ಅತ್ತೆ ಪರಾರಿ ಪ್ರಕರಣ, ಎಲ್ಲವೂ ಸರಿ ಇದ್ದಿದ್ರೆ ಇಂದು ಶಿವಾನಿ ಮದುವೆ ನಡೀತಿತ್ತು

ಅವರಿಬ್ಬರೂ ಓಡಿಹೋಗಿ 10 ದಿನಗಳು ಕಳೆದಿವೆ, ಆದರೆ ಪೊಲೀಸರಿಗೆ ಇನ್ನೂ ಅವರನ್ನು ಹಿಡಿಯಲು ಸಾಧ್ಯವಾಗಿಲ್ಲ. ನನ್ನ ಪಾಲಿಗೆ ಅವಳು ಸತ್ತಿದ್ದಾಳೆ ಎಂದು ಜಿತೇಂದ್ರ ಹೇಳಿದ್ದಾರೆ. ಏತನ್ಮಧ್ಯೆ, ಮದ್ರಾಕ್ ಪೊಲೀಸ್ ಠಾಣೆ ಪ್ರದೇಶದ ಮನೋಹರ್‌ಪುರ್ ಗ್ರಾಮದಲ್ಲಿರುವ ಜಿತೇಂದ್ರ ಕುಮಾರ್ ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ.

ಇಂದು ಈ ಮನೆಯಲ್ಲಿ ಶೆಹನಾಯಿ ನುಡಿಸಬೇಕಿತ್ತು. ಆದರೆ ಅದಕ್ಕೂ ಮುನ್ನ ವಧುವಿನ ತಾಯಿ ತನ್ನ ಭಾವಿ ಅಳಿಯನೊಂದಿಗೆ ಓಡಿಹೋಗಿದ್ದಳು. ಅತ್ತೆ ಮತ್ತು ಅಳಿಯನ ಬಗ್ಗೆ ಹಳ್ಳಿಯ ಜನರಲ್ಲಿ ತುಂಬಾ ಕೋಪವಿದೆ. ತನ್ನ ಅಳಿಯನೊಂದಿಗೆ ಓಡಿಹೋದ ಮಹಿಳೆಯ ಹೆಸರು ಅಪ್ನಾ ದೇವಿ.

ಆ ಮಹಿಳೆಯೇ ಮಗಳಿಗೆ ಆತನೊಂದಿಗೆ ನಿಶ್ಚಿತಾರ್ಥ ನೆರವೇರಿಸಿದ್ದಳು, ಹುಡುಗನನ್ನು ಆಕೆಯೇ ಹುಡುಕಿದ್ದಳು. ಮದುವೆಯ ಸಿದ್ಧತೆಗಳ ನೆಪದಲ್ಲಿ ವರನು ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದ. ಕುಟುಂಬಕ್ಕೆ ತಿಳಿಯದಂತೆ, ಅಳಿಯ ಮತ್ತು ಅತ್ತೆಯ ನಡುವೆ ಸಂಬಂಧ ಬೆಳೆಯುತ್ತಿತ್ತು. ವರ ತನ್ನ ಭಾವಿ ಅತ್ತೆಗೆ ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದ, ಅದನ್ನುಯಾರೂ ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ