ಮಹಿಳಾ ರೋಗಿಯ ಕೂದಲು ಹಿಡಿದೆಳೆದು ಕೆಳಗೆ ತಳ್ಳಿದ ನರ್ಸ್​; ವೈರಲ್ ಆಯ್ತು ವಿಡಿಯೋ

| Updated By: ಸುಷ್ಮಾ ಚಕ್ರೆ

Updated on: Oct 28, 2022 | 5:22 PM

ಸೀತಾಪುರ ಜಿಲ್ಲಾ ಆಸ್ಪತ್ರೆಯ ಮಹಿಳಾ ವಾರ್ಡ್‌ನಲ್ಲಿ ನಡೆದ ಗಲಾಟೆಯ ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬಳು ನರ್ಸ್ ಮಹಿಳಾ ರೋಗಿಯ ಕೂದಲನ್ನು ಹಿಡಿದುಕೊಂಡು ಹಾಸಿಗೆಯ ಕಡೆಗೆ ತಳ್ಳುವುದನ್ನು ಕಾಣಬಹುದು.

ಮಹಿಳಾ ರೋಗಿಯ ಕೂದಲು ಹಿಡಿದೆಳೆದು ಕೆಳಗೆ ತಳ್ಳಿದ ನರ್ಸ್​; ವೈರಲ್ ಆಯ್ತು ವಿಡಿಯೋ
ರೋಗಿಯ ಕೂದಲು ಹಿಡಿದೆಳೆದ ನರ್ಸ್
Follow us on

ನವದೆಹಲಿ: ಉತ್ತರ ಪ್ರದೇಶದ (Uttar Pradesh) ಜಿಲ್ಲಾ ಆಸ್ಪತ್ರೆಯೊಂದರಲ್ಲಿ ನರ್ಸ್​ ಮಹಿಳೆಯೊಬ್ಬರ ಕೂದಲನ್ನು ಹಿಡಿದು ಹಾಸಿಗೆಯ ಮೇಲೆ ತಳ್ಳಿದ್ದಾರೆ. ಈ ಘಟನೆಯ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆದ ನಂತರ, ಆಸ್ಪತ್ರೆಯ ಅಧಿಕಾರಿಗಳು ಆ ನರ್ಸ್​ ಮಾಡಿರುವ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ಆ ನರ್ಸ್​ ಆ ರೋಗಿಯ ಜೊತೆ ಯಾವುದೇ ರೀತಿ ಕೆಟ್ಟದಾಗಿ ವರ್ತಿಸಿಲ್ಲ ಎಂದಿದ್ದಾರೆ.

ಸೀತಾಪುರ ಜಿಲ್ಲಾ ಆಸ್ಪತ್ರೆಯ ಮಹಿಳಾ ವಾರ್ಡ್‌ನಲ್ಲಿ ನಡೆದ ಗಲಾಟೆಯ ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬಳು ನರ್ಸ್ ಮಹಿಳಾ ರೋಗಿಯ ಕೂದಲನ್ನು ಹಿಡಿದುಕೊಂಡು ಹಾಸಿಗೆಯ ಕಡೆಗೆ ತಳ್ಳುವುದನ್ನು ಕಾಣಬಹುದು. ಅವಳ ಕೂದಲನ್ನು ಹಿಡಿದೆಳೆದ ನರ್ಸ್​ ಆಕೆಯನ್ನು ಹಾಸಿಗೆ ಮೇಲೆ ತಳ್ಳಿದ್ದಷ್ಟೇ ಅಲ್ಲದೆ ಹಾಸಿಗೆಯ ಇನ್ನೊಂದು ಬದಿಯಲ್ಲಿ ನಿಂತಿರುವ ವ್ಯಕ್ತಿಯ ಸಹಾಯದಿಂದ ಅವಳನ್ನು ಕೆಳಗೆ ಬೀಳಿಸುತ್ತಾರೆ.

ಇದನ್ನೂ ಓದಿ: Marta Temido: ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಭಾರತ ಮೂಲದ ಗರ್ಭಿಣಿ ಸಾವು: ಪೋರ್ಚುಗಲ್ ಆರೋಗ್ಯ ಸಚಿವೆ ರಾಜೀನಾಮೆ

ಈ ವೈರಲ್ ವಿಡಿಯೋ ಕ್ಲಿಪ್ ಬಗ್ಗೆ ಪ್ರತಿಕ್ರಿಯಿಸಿದ ಸೀತಾಪುರದ ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಕೆ. ಸಿಂಗ್, ಆ ರೋಗಿಯನ್ನು ಅಕ್ಟೋಬರ್ 18ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ರಾತ್ರಿ ಆಕೆಯ ಕುಟುಂಬದ ಸದಸ್ಯರು ಆಸ್ಪತ್ರೆಯಿಂದ ಹೊರಹೋದ ನಂತರ ಆ ಮಹಿಳೆ 12ರಿಂದ 1 ಗಂಟೆಯ ನಡುವೆ ಬಾತ್​ ರೂಮ್ ಬಳಿ ಹೋದರು. ಅಲ್ಲಿ ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದರು. ಅದರಿಂದಾಗಿ ನರ್ಸ್​ ಆಕೆಯನ್ನು ಎಳೆದುಕೊಂಡು ಹೋಗಿ ಮಲಗಿಸಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಆ ರೋಗಿ ತನ್ನ ಬಳೆಗಳನ್ನು ಒಡೆದು ಬಟ್ಟೆಗಳನ್ನು ಹರಿದುಕೊಳ್ಳಲು ಪ್ರಾರಂಭಿಸಿದಳು. ಇದು ವಾರ್ಡ್‌ನಲ್ಲಿರುವ ಇತರ ಮಹಿಳಾ ರೋಗಿಗಳಲ್ಲಿ ಭಯವನ್ನು ಉಂಟುಮಾಡಿತು. ಹೀಗಾಗಿ ಆಸ್ಪತ್ರೆಯ ಸಿಬ್ಬಂದಿ ಅವಳನ್ನು ತಡೆಯಲು ಮಧ್ಯ ಪ್ರವೇಶಿಸಬೇಕಾಯಿತು. ಆ ರೋಗಿಗೆ ಇಂಜೆಕ್ಷನ್ ನೀಡುವ ಸಲುವಾಗಿ ಆಕೆಯನ್ನು ಎಳೆದು ಹಾಸಿಗೆಯ ಮೇಲೆ ತಳ್ಳಿ ಹಿಡಿದುಕೊಳ್ಳಲಾಯಿತು ಎಂದು ಡಾ. ಸಿಂಗ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ