ಮದ್ಯಪಾನ ಮಾಡಬೇಡಿ ಎಂದಿದ್ದಕ್ಕೆ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ

ಮದ್ಯಪಾನ ಮಾಡಬೇಡಿ ಎಂದಿದ್ದಕ್ಕೆ ಪತಿಯೊಬ್ಬ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಬುಡೌನ್​ನಲ್ಲಿ ನಡೆದಿದೆ. ಮದ್ಯ ಚಟವನ್ನು ಬಿಡುಗಡೆ ಹೆಂಡತಿ ಮನವಿ ಮಾಡಿದಾಗ ಕೋಪಗೊಂಡ ಪತಿಯು ಪತ್ನಿಯನ್ನು ಸಜೀವ ದಹನ ಮಾಡಿದ್ದಾನೆ. ಆರೋಪಿ ಮುನೀಶ್ ಸಕ್ಸೇನಾ ಮದ್ಯವ್ಯಸನಿಯಾಗಿದ್ದು, ಗುರುವಾರ ರಾತ್ರಿ ಕುಡಿದ ಅಮಲಿನಲ್ಲಿ ಮನೆಗೆ ಮರಳಿದ್ದ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಲೋಕ್ ಪ್ರಿಯದರ್ಶಿ ತಿಳಿಸಿದ್ದಾರೆ.

ಮದ್ಯಪಾನ ಮಾಡಬೇಡಿ ಎಂದಿದ್ದಕ್ಕೆ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ
Image Credit source: India Today
Edited By:

Updated on: Mar 08, 2024 | 3:35 PM

ಮದ್ಯಪಾನ ಮಾಡಬೇಡಿ ಎಂದಿದ್ದಕ್ಕೆ ಪತಿಯೊಬ್ಬ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಬುಡೌನ್​ನಲ್ಲಿ ನಡೆದಿದೆ. ಮದ್ಯ ಚಟವನ್ನು ಬಿಡುಗಡೆ ಹೆಂಡತಿ ಮನವಿ ಮಾಡಿದಾಗ ಕೋಪಗೊಂಡ ಪತಿಯು ಪತ್ನಿಯನ್ನು ಸಜೀವ ದಹನ ಮಾಡಿದ್ದಾನೆ. ಆರೋಪಿ ಮುನೀಶ್ ಸಕ್ಸೇನಾ ಮದ್ಯವ್ಯಸನಿಯಾಗಿದ್ದು, ಗುರುವಾರ ರಾತ್ರಿ ಕುಡಿದ ಅಮಲಿನಲ್ಲಿ ಮನೆಗೆ ಮರಳಿದ್ದ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಲೋಕ್ ಪ್ರಿಯದರ್ಶಿ ತಿಳಿಸಿದ್ದಾರೆ.

ಆತನ ಪತ್ನಿ ಶಾನೋ ಆತನನ್ನು ಹೆಚ್ಚು ಕುಡಿಯುವುದನ್ನು ತಡೆಯಲು ಪ್ರಯತ್ನಿಸಿದಾಗ, ಸಕ್ಸೇನಾ ತನ್ನ ಮೋಟಾರ್‌ಸೈಕಲ್‌ನಿಂದ ಪೆಟ್ರೋಲ್ ತೆಗೆದುಕೊಂಡು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶನ್ನೋ ಅವರ ಅತ್ತೆ ಮುನ್ನಿ ದೇವಿ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದರು ಮತ್ತು ಆಕೆಯ ಕೈಗಳಿಗೆ ಸುಟ್ಟ ಗಾಯಗಳಾಗಿವೆ. ತಾಯಿ ಸುಡುತ್ತಿರುವುದನ್ನು ನೋಡಿದ ಆಕೆಯ ಇಬ್ಬರು ಮಕ್ಕಳಾದ 8 ವರ್ಷದ ಸನ್ನಿ ಮತ್ತು 5 ವರ್ಷದ ಅರ್ಜುನ್ ಕೂಗಿ ಅಕ್ಕ ಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ: ಆಸ್ತಿಗಾಗಿ ಕಿತ್ತಾಟ: ಕಾರು ಹತ್ತಿಸಿ ಅಣ್ಣನನ್ನೇ ಹತೈಗೈದ ಸಹೋದರರು

ಸ್ಥಳೀಯರು ಬೆಂಕಿ ನಂದಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಶನ್ನೋ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕೆಯ ಅತ್ತೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಸಕ್ಸೇನಾ ಅವರನ್ನು ಹುಡುಕಲು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ