ಉತ್ತರ ಪ್ರದೇಶ: ಮಗುವಾಗಲಿಲ್ಲ ಎಂದು ಮಾಂತ್ರಿಕನ ಬಳಿ ಹೋಗಿ ಶವವಾಗಿ ಬಂದ ಮಹಿಳೆ

ಮದುವೆಯಾಗಿ 10 ವರ್ಷಗಳು ಕಳೆದರೂ ಮಗುವಾಗಿಲ್ಲ ಎಂದು ಮಾಂತ್ರಿಕನ ಮೊರೆ ಹೋಗಿದ್ದ ಮಹಿಳೆ ಶವವಾಗಿ ಮನೆಗೆ ಬಂದಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಉತ್ತರ ಪ್ರದೇಶದ ಅಜಮ್‌ಗಢ ಮೂಲದ ಮಹಿಳೆ ಮೂಢನಂಬಿಕೆಗೆ ಬಲಿಯಾಗಿದ್ದಾಳೆ. ಮದುವೆಯಾಗಿ ಹತ್ತು ವರ್ಷಗಳಾದರೂ ಮಗುವಿಗೆ ಜನ್ಮ ನೀಡಲು ಸಾಧ್ಯವಾಗದ ಕಾರಣ ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು.

ಉತ್ತರ ಪ್ರದೇಶ: ಮಗುವಾಗಲಿಲ್ಲ ಎಂದು ಮಾಂತ್ರಿಕನ ಬಳಿ ಹೋಗಿ ಶವವಾಗಿ ಬಂದ ಮಹಿಳೆ
ಮಹಿಳೆ
Image Credit source: Kerala Kaumudi

Updated on: Jul 09, 2025 | 1:27 PM

ಲಕ್ನೋ, ಜುಲೈ 09: ಮದುವೆಯಾಗಿ 10 ವರ್ಷಗಳು ಕಳೆದರೂ ಮಗುವಾಗಿಲ್ಲ ಎಂದು ಮಾಂತ್ರಿಕನ ಮೊರೆ ಹೋಗಿದ್ದ ಮಹಿಳೆ ಶವವಾಗಿ ಮನೆಗೆ ಬಂದಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಉತ್ತರ ಪ್ರದೇಶದ ಅಜಮ್‌ಗಢ ಮೂಲದ ಮಹಿಳೆ ಮೂಢನಂಬಿಕೆಗೆ ಬಲಿಯಾಗಿದ್ದಾಳೆ.
ಮದುವೆಯಾಗಿ ಹತ್ತು ವರ್ಷಗಳಾದರೂ ಮಗುವಿಗೆ ಜನ್ಮ ನೀಡಲು ಸಾಧ್ಯವಾಗದ ಕಾರಣ ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು.

ನಂತರ ಕುಟುಂಬವು ಮಾಂತ್ರಿಕನ ಬಳಿಗೆ ಕರೆದುಕೊಂಡು ಹೋಗಿತ್ತು. ಯಾವುದೋ ಪೂಜೆ ಮಾಡುತ್ತೇವೆ 1 ಲಕ್ಷ ರೂ ಕೊಡಿ ಆಮೇಲೆ ನಿಮಗೆ ಮಕ್ಕಾಗುತ್ತದೆ ಎಂದು ಮಾಂತ್ರಕ ಹೇಳಿದ್ದ, ಅದನ್ನು ನಂಬಿ 2,200 ರೂ. ಮುಂಗಡ ಹಣ ಕೊಟ್ಟು ಬಂದಿದ್ದರು.

ಜುಲೈ 6 ರಂದು ಅನುರಾಧಾ ತ್ನ ಅತ್ತೆಯ ಮನೆಯಿಂದ ಆಚರಣೆಗಾಗಿ ತವರು ಮನೆ ಬಂದಿದ್ದರು. ಮಾಂತ್ರಕನ ಹೆಂಡತಿ ಹಾಗೂ ಸಹಾಯಕರು ಆಕೆಯ ಕೂದಲನ್ನು ಎಳೆದು, ಉಸಿರುಗಟ್ಟಿಸಿದ್ದರು. ಚರಂಡಿ ಹಾಗ ಶೌಚಾಲಯದ ನೀರನ್ನು ಕುಡಿಸಿದ್ದರು.

ಮತ್ತಷ್ಟು ಓದಿ: ಬಿಹಾರ: ಭೂತ ಬಿಡಿಸುವ ನೆಪದಲ್ಲಿ 4 ತಿಂಗಳ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ

ಈ ಆಚರಣೆಗಳಿಂದ ಮಿಳೆಯ ಕುಟುಂಬ ಆಘಾತಕ್ಕೊಳಗಾಗಿತ್ತು, ಆರೋಗ್ಯ ತೀವ್ರ ಹದಗೆಟ್ಟ ಕಾರಣ ಈ ಆಚರಣೆಗಳನ್ನು ನಿಲ್ಲಿಸುಂತೆ ಮನವಿ ಮಾಡಲಾಯಿತು. ಆದರೆ ಅವರು ಒಪ್ಪಲಿಲ್ಲ. ಆಕೆಯ ಸ್ಥಿತಿ ತೀರಾ ಹದಗೆಟ್ಟಿರುವುದನ್ನು ಗಮನಿಸಿ ಕೊನೆಗೂ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲು ಒಪ್ಪಿಗೆ ನೀಡಿದರು. ಅಲ್ಲಿಆಕೆ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.

ಈ ಸುದ್ದಿ ತಿಳಿದ ಬಳಿಕ ಮಾಂತ್ರಿಕನ ಕಟುಂಬ ಪರಾರಿಯಾಗಿದೆ.ಅನುರಾಧಾಳ ಶವವನ್ನು ಮರಳಿ ತಂದ ಕುಟುಂಬದವರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿದರು. ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದರು. ಮಾಂತ್ರಿಕ ಮತ್ತು ಅವನ ಸಹಾಯಕರು ಇನ್ನೂ ತಲೆಮರೆಸಿಕೊಂಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ