ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಆತ್ಮಹತ್ಯೆ

ಅತ್ಯಾಚಾರದ ಬಳಿಕ ಮಾನಸಿಕವಾಗಿ ನೊಂದು ಖಿನ್ನತೆಗೆ ಒಳಗಾಗಿದ್ದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಜೂನ್ 28ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ , ಬಾಲಕಿ ಹಾಗೂ ಆಕೆಯ ಮೂರು ವರ್ಷದ ತಮ್ಮ ವರಾಂಡದಲ್ಲಿ ಕುಳಿತಿದ್ದಳು. ಆಕೆಯ ತಾಯಿ ಕೆಲಸಕ್ಕೆ ಹೋಗಿದ್ದರು. ಆಗ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಿಪಿನ್ ಆಕೆಯ ಮನೆ ಮುಂದೆ ಬೈಕ್ ನಿಲ್ಲಿಸಿದ್ದ. ಆತ ವಿಶಾಲ್ ಹಾಗೂ ಹೇಮಂತ್ ಜತೆ ಅಲ್ಲಿಗೆ ಬಂದಿದ್ದ. ಬಾಲಕಿಯ ತಮ್ಮನ ಬಳಿ ಬೈಕ್​​ನಲ್ಲಿ ಒಂದು ರೈಡ್ ಹೋಗಿ ಬರೋಣ ಅಕ್ಕನನ್ನು ಕರೆದುಕೊಂಡು ಬಾ ಎಂದು ಹೇಳಿ ಬೈಕ್​ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.

ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಆತ್ಮಹತ್ಯೆ
ಕ್ರೈಂ
Image Credit source: The Hindu

Updated on: Jul 18, 2025 | 9:04 AM

ಉತ್ತರ ಪ್ರದೇಶ, ಜುಲೈ 18: ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೂವರು ಅಪ್ರಾಪ್ತರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಸಂತ್ರಸ್ತೆಯ ತಾಯಿ ಎಫ್​ಐಆರ್ ದಾಖಲಿಸಿದ ಬಳಿಕ ಪೊಲೀಸರು(Police) ಮೂವರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದರು. ಈ ಘಟನೆಯಿಂದ ಬಾಲಕಿ ಮುಜುಗರಕ್ಕೀಡಾಗಿದ್ದಳು, ಸಮಾಜವನ್ನು ಎದುರಿಸುವುದು ಹೇಗೆ ಎಂಬುದೇ ಆಕೆಗೆ ತೋಚುತ್ತಿರಲಿಲ್ಲ. ಈ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​​ನಲ್ಲಿ ನಡೆದಿದೆ.

ಜೂನ್ 28ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ , ಬಾಲಕಿ ಹಾಗೂ ಆಕೆಯ ಮೂರು ವರ್ಷದ ತಮ್ಮ ವರಾಂಡದಲ್ಲಿ ಕುಳಿತಿದ್ದಳು. ಆಕೆಯ ತಾಯಿ ಕೆಲಸಕ್ಕೆ ಹೋಗಿದ್ದರು. ಆಗ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಿಪಿನ್ ಆಕೆಯ ಮನೆ ಮುಂದೆ ಬೈಕ್ ನಿಲ್ಲಿಸಿದ್ದ. ಆತ ವಿಶಾಲ್ ಹಾಗೂ ಹೇಮಂತ್ ಜತೆ ಅಲ್ಲಿಗೆ ಬಂದಿದ್ದ. ಬಾಲಕಿಯ ತಮ್ಮನ ಬಳಿ ಬೈಕ್​​ನಲ್ಲಿ ಒಂದು ರೈಡ್ ಹೋಗಿ ಬರೋಣ ಅಕ್ಕನನ್ನು ಕರೆದುಕೊಂಡು ಬಾ ಎಂದು ಹೇಳಿ ಬೈಕ್​ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.

ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು, ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲಿಂದ ನೇಹಾ ಚಿಕ್ಕಮ್ಮನ ಮನೆಗೆ ಹೋಗಿದ್ದಾಳೆ. ಎರಡು ದಿನಗಳ ಕಾಲ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಬಳಿಕ ಮನೆಯವರು ತುಂಬಾ ವಿಚಾರಿಸಿದಾಗ ಆಕೆ ತನಗಾದ ನೋವಿನ ಕುರಿತು ಹೇಳಿಕೊಂಡಿದ್ದಾಳೆ. ಬಳಿಕ ಆಕೆಯ ಮನೆಗೆ ಕರೆದುಕೊಂಡು ಬಂದು ಕೂಡಲೇ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಲಾಯಿತು. ಪ್ರಕರಣದಲ್ಲಿ ಮೂವರು ಹುಡುಗರನ್ನು ಆರೋಪಿಗಳೆಂದು ಹೆಸರಿಸಿದ್ದಾರೆ.

ಮತ್ತಷ್ಟು ಓದಿ: ವಾಕಿಂಗ್ ಹೋಗಿದ್ದ 80 ವರ್ಷದ ಅಜ್ಜಿ ಮೇಲೆ ಅತ್ಯಾಚಾರ; ಆರೋಪಿಗೆ ಗುಂಡು ಹಾರಿಸಿದ ಪೊಲೀಸರು

ಜುಲೈ 2ರಂದು ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಎರಡು ವಾರಗಳ ನಂತರ ಜುಲೈ 15ರಂದು ಬಾಲಕಿಯ ತಾಯಿ ಕೆಲಸದಿಂದ ಹಿಂದಿರುಗಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿದರು. ತಾಯಿ ಪಕ್ಕದ ಮನೆಯ ಛಾವಣಿಯಿಂದ ಮನೆಯೊಳಗೆ ಬಂದಾಗ ಮಗಳು ನೇಣು ಹಾಕಿಕೊಂಡಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದರು.

ಈ ಘಟನೆ ನಡೆದಾಗಿನಿಂದ ಆಕೆ ಮಾನಸಿಕ ಒತ್ತಡದಲ್ಲಿದ್ದಳು, ಮನೆಯೊಳಗೇ ಇರುತ್ತಿದ್ದಳು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗೆಗಾಗಿ ಇಲ್ಲಿ ಕ್ಲಿಕ್ ಮಾಡಿ