ಝಾನ್ಸಿ: ಅಪ್ಪನೇ ಅಮ್ಮನನ್ನು ಕೊಂದಿದ್ದು, 4 ವರ್ಷದ ಮಗು ಬಿಡಿಸಿದ ಚಿತ್ರದಿಂದ ಬಯಲಾಯ್ತು ಕೊಲೆ ರಹಸ್ಯ
ತಾಯಿಯನ್ನು ಕೊಂದಿದ್ದು ತನ್ನ ತಂದೆಯೇ ಎಂದು ಮಗು ಚಿತ್ರ ಬಿಡಿಸಿ ಪೊಲೀಸರಿಗೆ ನೀಡಿದೆ. ತಂದೆ ತಾಯಿಯನ್ನು ಹೇಗೆ ನಡೆಸಿಕೊಳ್ಳುತ್ತಿದ್ದ ಎಂದು ವಿವರವಾಗಿ ಹೇಳಿದ್ದು, ಪೊಲೀಸರಿಗೆ ಕೊಲೆಯ ಪ್ರಕರಣವನ್ನು ಭೇದಿಸುವಲ್ಲಿ ನೆರವಾಯಿತು. ಝಾನ್ಸಿಯ ಕೊತ್ವಾಲಿ ಪ್ರದೇಶದ ಶಿವ ಪರಿವಾರ್ ಕಾಲೋನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಕುಟುಂಬದವರ ಪ್ರಕಾರ ಅವರು 2019ರಲ್ಲಿ ಝಾನ್ಸಿ ನಿವಾಸಿ ಸಂದೀಪ್ ಬಧೋಲಿಯಾ ಅವರನ್ನು ವಿವಾಹವಾಗಿದ್ದರು.

ಉತ್ತರ ಪ್ರದೇಶದ ಝಾನ್ಸಿಯಲ್ಲಿ 27 ವರ್ಷದ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಆಕೆಯ ಪತಿ ಮತ್ತು ಅತ್ತೆ ಮಾವಂದಿರುವ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಮಹಿಳೆಯ ನಾಲ್ಕು ವರ್ಷದ ಮಗಳು ಕೂಡ ತನ್ನ ತಂದೆಯೇ ತಾಯಿಯನ್ನು ನೇಣು ಹಾಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.
ಝಾನ್ಸಿಯ ಕೊತ್ವಾಲಿ ಪ್ರದೇಶದ ಶಿವ ಪರಿವಾರ್ ಕಾಲೋನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಕುಟುಂಬದವರ ಪ್ರಕಾರ ಅವರು 2019ರಲ್ಲಿ ಝಾನ್ಸಿ ನಿವಾಸಿ ಸಂದೀಪ್ ಬಧೋಲಿಯಾ ಅವರನ್ನು ವಿವಾಹವಾಗಿದ್ದರು.
ಮಹಿಳೆಯ ತಂದೆ ಸಂಜೀವ್ ತ್ರಿಪಾಠಿ ಹೇಳುವಂತೆ ತಮ್ಮ ಕುಟುಂಬವು ವರದಕ್ಷಿಣೆಯಾಗಿ ಆತನಿಗೆ 20 ಲಕ್ಷ ರೂಪಾಯಿ ನಗದು ಮತ್ತು ಇತರೆ ಉಡುಗೊರೆ ನೀಡಿದ್ದೆವು. ಆದರೆ ಮದುವೆಯಾದ ಕೂಡಲೇ ಹೆಚ್ಚುವರಿ ವರದಕ್ಷಿಣೆ ಹಾಗೂ ಕಾರಿಗಾಗಿ ಬೇಡಿಕೆ ಇಟ್ಟಿದ್ದರು.
ಬೇಡಿಕೆ ಈಡೇರದಿದ್ದಾಗ ಆಕೆಗೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡಲು ಶುರು ಮಾಡಿದ್ದರು ಎಂದು ಹೇಳಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಅವರು ರಾಜಿ ಮಾಡಿಸಿದ್ದರು. ಮದುವೆಯ ದಿನದಂದು ವರದಕ್ಷಿಣೆಯಾಗಿ 20 ಲಕ್ಷ ರೂಪಾಯಿ ಕೊಟ್ಟಿದ್ದೆ, ಆ ದಂಪತಿಗೆ ನಂತರ ಒಂದು ಹೆಣ್ಣು ಮಗು ಜನಿಸಿತ್ತು. ಆದರೆ ಕುಟುಂಬವು ಸಮಸ್ಯೆಗಳನ್ನು ಉಂಟು ಮಾಡುತ್ತಲೇ ಇತ್ತು. ಗಂಡು ಮಗುವಿಗೆ ಜನ್ಮ ನೀಡದಿದ್ದಕ್ಕಾಗಿ ಆ ಮಹಿಳೆಯ ಅತ್ತೆ-ಮಾವ ಆಕೆಗೆ ಮತ್ತೆ ಹಿಂಸೆ ನೀಡಲು ಶುರು ಮಾಡಿದ್ದಳು.
ಮತ್ತಷ್ಟು ಓದಿ:ವರದಕ್ಷಿಣೆ ಕೊಟ್ಟಿಲ್ಲವೆಂದು ಸೊಸೆಗೆ ಎಚ್ಐವಿ ಸೋಂಕಿತ ಸೂಜಿ ಚುಚ್ಚಿದ ಅತ್ತೆ-ಮಾವ
ಗಂಡು ಮಗುವಿಗೆ ಏಕೆ ಜನ್ಮ ನೀಡಲಿಲ್ಲ ಎಂದು ಆಕೆಗೆ ಹೊಡೆಯುತ್ತಿದ್ದರು. ಹೆರಿಗೆ ನಂತರ ಆಸ್ಪತ್ರೆಯ ಬಿಲ್ ಕೂಡ ಕಟ್ಟದೇ ಆಕೆಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು, ನಾನೇ ಕೊನೆಗೆ ಬಿಲ್ ಕಟ್ಟಿ ಮನೆಗೆ ಕರೆದುಕೊಂಡು ಬಂದಿದ್ದೆ ಎಂದು ತಂದೆ ಹೇಳಿದ್ದಾರೆ.
ಆ ಮಗು ಕೂಡ ತಾನು ಕಂಡದ್ದನ್ನು ಚಿತ್ರ ಬಿಡಿಸಿ ಪೊಲೀಸರಿಗೆ ಕೊಟ್ಟಿದ್ದಾಳೆ. ಅಪ್ಪ ಅಮ್ಮನಿಗೆ ಹೊಡೆದಿದ್ದ, ಆತನೇ ನೇಣು ಹಾಕಿದ್ದಾನೆ, ಆಕೆಯ ತಲೆಗೆ ಕಲ್ಲಿನಿಂತ ಹೊಡೆದಿದ್ದ. ನಂತರ ಚೀಲದಲ್ಲಿ ತುಂಬಿದ್ದ , ನೀನು ಅಮ್ಮನನ್ನು ಹೊಡೆದರೆ ನಾನು ನಿನ್ನ ಕೈ ಮುರಿಯುತ್ತೇನೆ ಎಂದು ಹೇಳಿದ್ದಾಗಿ ಮಗು ಹೇಳಿದೆ. ನನಗೂ ಕೂಡ ಹೊಡೆಯುತ್ತಿದ್ದ ಎಂದು ಹೇಳಿದ್ದಾಳೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




