Bhopal: ಗ್ಯಾಸ್ಸ್ಟವ್ನಿಂದ ಬೀಡಿಗೆ ಬೆಂಕಿ ಹಚ್ಚಲು ಹೋಗಿ ಸುಟ್ಟು ಕರಕಲಾದ ವ್ಯಕ್ತಿ
ರಾತ್ರಿ ಹೊತ್ತು ಗ್ಯಾಸ್ ಸ್ಟವ್ ಆನ್ ಮಾಡಿ ಲೈಟರ್ ಹುಡುಕಿ, ಹಚ್ಚುವಷ್ಟರಲ್ಲಿ ಸ್ಫೋಟ ಸಂಭವಿಸಿ ವೃದ್ಧರೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ. ಬೀಡಿ ಸೇದಬೇಕೆಂದೆನಿಸಿ ಸ್ಟವ್ನಲ್ಲಿ ಹಚ್ಚಿಕೊಳ್ಳಬೇಕೆಂದು ಪ್ರಯತ್ನಿಸಿದಾಗ ಗ್ಯಾಸ್ ಸೋರಿಕೆಯಾಗಿ ಬೆಂಕಿಯ ಜ್ವಾಲೆ ಇಡೀ ಮನೆಗೆ ವ್ಯಾಪಿಸಿ ವೃದ್ಧರೊಬ್ಬರು ಸುಟ್ಟು ಕರಕಲಾಗಿದ್ದಾರೆ.

ಗ್ಯಾಸ್ಸ್ಟವ್ನಿಂದ ಬೀಡಿಗೆ ಬೆಂಕಿ ಹಚ್ಚಲು ಹೋಗಿದ್ದ ವ್ಯಕ್ತಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ. ಬೆಂಕಿಯ ಜತೆ ಸರಸವಾಡಬಾರದು ಎಂಬ ಗಾದೆ ಮಾತಿದೆ. ಹಾಗೆಯೇ ಬೆಂಕಿ ಬಳಿ ಇದ್ದಾಗ ಸ್ವಲ್ಪ ಎಚ್ಚರ ತಪ್ಪಿದರೂ ಸಾವು ಸಂಭವಿಸಬಹುದು.
ವೃದ್ಧರೊಬ್ಬರು ಗ್ಯಾಸ್ ಸ್ಟವ್ ಆನ್ ಮಾಡಿ ಬೀಡಿಗೆ ಬೆಂಕಿ ಹಚ್ಚಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ರಾತ್ರಿ ಬೀಡಿ ಸೇದಬೇಕೆನಿಸಿತು, ಬೆಂಕಿ ಕಡ್ಡಿಯನ್ನು ಹುಡುಕುತ್ತಾ ಹೋಗಿದ್ದರು. ಅದು ಸಿಗಲಿಲ್ಲ, ನಂತರ ಬೀಡಿಯನ್ನು ಹೊತ್ತಿಸಲು ಗ್ಯಾಸ್ಸ್ಟವ್ ಬಳಸುವ ಉದ್ದೇಶದಿಂದ ಅಡುಗೆ ಮನೆಗೆ ಹೋಗಿದ್ದರು.
ಗ್ಯಾಸ್ ಆನ್ ಮಾಡಿ ಲೈಟರ್ಗಾಗಿ ಹುಡುಕಾಡುದರು, ಒಲೆಯ ಮೂಲಕ ಗ್ಯಾಸ್ ಸೋರಿಕೆಯಾಗುತ್ತಲೇ ಇತ್ತು. ಸ್ವಲ್ಪ ಸಮಯದ ನಂತರ ಲೈಟರ್ ಸಿಕ್ಕಿತ್ತು. ಆದರೆ ಆ ಹೊತ್ತಿಗೆ ಅಡುಗೆ ಮನೆಯಾದ್ಯಂತ ಗ್ಯಾಸ್ ಸಂಗ್ರಹವಾಗಿತ್ತು. ಲೈಟರ್ ಹಚ್ಚಿದ ಕ್ಷಣ ಬೆಂಕಿ ಇಡೀ ಮನೆಯನ್ನೇ ಆವರಿಸಿತ್ತು. ವ್ಯಕ್ತಿ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ.
ಮತ್ತಷ್ಟು ಓದಿ; ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅವಘಡ: ಇಬ್ಬರು ಕಾರ್ಮಿಕರು ದುರ್ಮರಣ
ಆ ವ್ಯಕ್ತಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಅವನ ದೇಹದಾದ್ಯಂತ ತೀವ್ರವಾದ ಸುಟ್ಟಗಾಯಗಳು ಉಂಟಾದವು. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಅವರ ಇಬ್ಬರು ಗಂಡು ಮಕ್ಕಳು ಸ್ಫೋಟದ ಶಬ್ದ ಕೇಳಿ ಓಡಿ ಬಂದರು, ಅವರು ಕುಟುಂಬದ ಉಳಿದವರನ್ನು ಕರೆದು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಸುಟ್ಟಗಾಯಗಳ ಪ್ರಮಾಣ ಹೆಚ್ಚಾದ ಕಾರಣ ಅವರು ಸಾವನ್ನಪ್ಪಿದ್ದಾರೆ. ಎಂದೂ ಕೂಡ ಬೆಂಕಿ ಹಾಗೂ ಗ್ಯಾಸ್ ಬಳಸಬೇಕಿದ್ದರೆ ತುಂಬಾ ಎಚ್ಚರಿಕೆಯಿಂದಬೇಕು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:19 am, Tue, 18 February 25