AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಎಪಿ ನಾಯಕನ ಪತ್ನಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್, ಸುಪಾರಿ ಕೊಟ್ಟಿದ್ದು ಪತಿ ಅನೋಖ್ ಮಿತ್ತಲ್

ಆಮ್​ ಆದ್ಮಿ ಪಕ್ಷದ ನಾಯಕ ಅನೋಖ್​ ಮಿತ್ತಲ್ ಅವರ ಪತ್ನಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು, ಜತೆಗೆ ದರೋಡೆ ಮಾಡಲಾಗಿದೆ ಎಂದು ದೂರು ದಾಖಲಿಸಲಾಗಿತ್ತು. ಆದರೆ ಅಸಲಿಗೆ ಆಕೆಯ ಪತಿ ಅನೋಖ್​ ಮಿತ್ತಲೆ ಕೊಲೆಗೆ ಸುಪಾರಿ ಕೊಟ್ಟಿದ್ದ ಎನ್ನುವ ನಿಜಾಂಶ ಬೆಳಕಿಗೆ ಬಂದಿದೆ. ಸೋಮವಾರ ಲುಧಿಯಾನಾ ಪೊಲೀಸರು ಅನೋಖ್ ಮಿತ್ತಲ್ ಹಾಗೂ ಆತನ ಗೆಳತಿಯನ್ನು ಬಂಧಿಸಿದ್ದಾರೆ. ಕೊಲೆ ಮಾಡಲು ಕೆಲವರನ್ನು ನೇಮಿಸಿಕೊಂಡಿದ್ದ. ಮಿತ್ತಲ್, ಸ್ನೇಹಿತೆ ಸೇರಿ 6 ಜನರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಒಬ್ಬ ವ್ಯಕ್ತಿ ತಲೆ ಮರೆಸಿಕೊಂಡಿದ್ದಾನೆ.

ಎಎಪಿ ನಾಯಕನ ಪತ್ನಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್, ಸುಪಾರಿ ಕೊಟ್ಟಿದ್ದು ಪತಿ ಅನೋಖ್ ಮಿತ್ತಲ್
ಅನೋಖ್ ಮಿತ್ತಲ್ Image Credit source: Indian Express
Follow us
ನಯನಾ ರಾಜೀವ್
|

Updated on:Feb 18, 2025 | 7:56 AM

ಇತ್ತೀಚೆಗಷ್ಟೇ ಪಂಜಾಬ್​ನ ಆಮ್​ ಆದ್ಮಿ ಪಕ್ಷದ ನಾಯಕ ಅನೋಖ್​ ಮಿತ್ತಲ್ ಅವರ ಪತ್ನಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು, ಜತೆಗೆ ದರೋಡೆ ಮಾಡಲಾಗಿದೆ ಎಂದು ದೂರು ದಾಖಲಿಸಲಾಗಿತ್ತು. ಆದರೆ ಅಸಲಿಗೆ ಆಕೆಯ ಪತಿ ಅನೋಖ್​ ಮಿತ್ತಲ್​ ಕೊಲೆಗೆ ಸುಪಾರಿ ಕೊಟ್ಟಿದ್ದ ಎನ್ನುವ ನಿಜಾಂಶ ಬೆಳಕಿಗೆ ಬಂದಿದೆ.

ಸೋಮವಾರ ಲುಧಿಯಾನಾ ಪೊಲೀಸರು ಅನೋಖ್ ಮಿತ್ತಲ್ ಹಾಗೂ ಆತನ ಗೆಳತಿಯನ್ನು ಬಂಧಿಸಿದ್ದಾರೆ. ಕೊಲೆ ಮಾಡಲು ಕೆಲವರನ್ನು ನೇಮಿಸಿಕೊಂಡಿದ್ದ. ಮಿತ್ತಲ್, ಸ್ನೇಹಿತೆ ಸೇರಿ 6 ಜನರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಒಬ್ಬ ವ್ಯಕ್ತಿ ತಲೆ ಮರೆಸಿಕೊಂಡಿದ್ದಾನೆ.

ಲುಧಿಯಾನಾ ಪೊಲೀಸ್ ಆಯುಕ್ತ ಕುಲದೀಪ್ ಸಿಂಗ್ ಚಾಹಲ್ ಮಾತನಾಡಿ, ಮಿತ್ತಲ್ ತನ್ನ ಪ್ರೇಯಸಿ ಸಹಾಯದಿಂದ ಪತ್ನಿ ಲಿಪ್ಸಿಯನ್ನು ಕೊಲೆ ಮಾಡಲು ಕೊಲೆಗಾರರನ್ನು ನೇಮಿಸಿಕೊಂಡಿದ್ದ ಎಂದು ಹೇಳಿದ್ದಾರೆ. ಚಾಹಲ್ ಪ್ರಕಾರ, ಮಿತ್ತಲ್ ಕೊಲೆಗೆ ಹಂತಕರಿಗೆ 2.5 ಲಕ್ಷ ರೂ.ಗಳನ್ನು ನೀಡಲು ಒಪ್ಪಿಕೊಂಡಿದ್ದ, ಈಗಾಗಲೇ 50 ಸಾವಿರ ರೂ. ಮುಂಗಡವಾಗಿ ನೀಡಿದ್ದ, ಉಳಿದ 2 ಲಕ್ಷ ರೂ. ಕೊಲೆಯ ಬಳಿಕ ನೀಡುತ್ತೇನೆ ಎಂದು ಹೇಳಿದ್ದ.

ಮತ್ತಷ್ಟು ಓದಿ: ಪಂಜಾಬ್ ಎಎಪಿ ನಾಯಕ ಅನೋಖ್ ಮಿತ್ತಲ್ ಪತ್ನಿಯ ಹತ್ಯೆಗೈದ ದುಷ್ಕರ್ಮಿಗಳು

ಮಿತ್ತಲ್ ಈ ಹಿಂದೆ ಎರಡು ಬಾರಿ ಕೊಲೆಗೆ ಯತ್ನಿಸಿದ್ದ. ಅಪರಾಧದ ಹಿಂದಿನ ಉದ್ದೇಶ ಆತನ ವಿವಾಹೇತರ ಸಂಬಂಧವಾಗಿದ್ದು, ಅದು ಪತ್ನಿಗೆ ತಿಳಿದುಬಿಟ್ಟಿತ್ತು. ಎರಲ್ಲರಿಗೂ ಹೇಳಬಹುದು ಎಂಬ ಭಯದಿಂದ ಕೊಲೆಗೆ ಸಂಚು ರೂಪಿಸಿದ್ದ.

ಅಪರಾಧಕ್ಕೆ ಬಳಸಲಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿ ಮಿತ್ತಲ್ ಪ್ರೇಯಸಿ ಅಲ್ಲಿಲ್ಲದಿದ್ದರೂ, ಯೋಜನೆ ಮತ್ತು ಪಿತೂರಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆಂದು ನಂಬಲಾಗಿದೆ ಎಂದು ಆಯುಕ್ತರು ಹೇಳಿದರು.

ಮಿತ್ತಲ್ ಪೊಲೀಸರಿಗೆ ಈ ವಿಚಾರ ತಿಳಿಸಿದ್ದು, ಫೆಬ್ರವರಿ 15ರ ಮಧ್ಯರಾತ್ರಿ ಸುಮಾರಿಗೆ ತಾನು ತನ್ನ ಪತ್ನಿ ಜತೆ ರೆಸ್ಟೋರೆಂಟ್​ನಲ್ಲಿ ಊಟ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದೆವು, ರೂರ್ಕಾ ರಸ್ತೆಯ ಬಳಿ ಕಾರನ್ನು ನಿಲ್ಲಿಸಿದಾಗ ಇನ್ನೊಂದು ವಾಹನದಲ್ಲಿ ಬಂದ ಐದಾರು ಮಂದಿ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ್ದರು, ಬಳಿಕ ಯಾವುದೋ ವಸ್ತುವಿನಿಂದ ನಾನು ಪ್ರಜ್ಞೆ ಕಳೆದುಕೊಂಡಿದ್ದೆ ಎಂದು ಹೇಳಿದ್ದ.

ಮೂರು ತಿಂಗಳ ಹಿಂದೆ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಮಿತ್ತಲ್, ಸುಮಾರು 20 ನಿಮಿಷಗಳ ನಂತರ ಪ್ರಜ್ಞೆ ಬಂದಾಗ, ತನ್ನ ಪತ್ನಿ ಗಂಭೀರ ಗಾಯಗಳೊಂದಿಗೆ ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಿದೆ ಎಂದು ಹೇಳಿಕೊಂಡಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಆಕೆ ಮೃತಪಟ್ಟಿದ್ದಾಳೆ ಎಂದು ಅವರು ಹೇಳಿದರು. ದಾಳಿಕೋರರು ತಮ್ಮ ಕಾರು ಮತ್ತು ಪತ್ನಿಯ ಆಭರಣಗಳನ್ನು ಕದ್ದಿದ್ದಾರೆ ಎಂದು ಕಥೆ ಕಟ್ಟಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:53 am, Tue, 18 February 25

VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ
VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ
ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್
ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್
VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ
VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ
ವಸ್ತ್ರದಾನದ ಮಹತ್ವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ
ವಸ್ತ್ರದಾನದ ಮಹತ್ವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ
ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಆರ್ಥಿಕವಾಗಿ ಪ್ರಗತಿ ಹೊಂದುವರು
ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಆರ್ಥಿಕವಾಗಿ ಪ್ರಗತಿ ಹೊಂದುವರು
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು? ವಿಡಿಯೋ ನೋಡಿ
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಗಾಜಿಯಾಬಾದ್ ಅಪಾರ್ಟ್​ಮೆಂಟ್​​ ಲಿಫ್ಟ್‌ನಲ್ಲಿ ಸಿಲುಕಿದ ಮಗು
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್