Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ಗಾಂಧಿಯಿಂದ ನಿಷೇಧಿತ ಚೀನೀ ಡ್ರೋನ್ ಬಳಕೆ; ಏನಿದು ಹೊಸ ವಿವಾದ?

ಭಾರತದ ನೀತಿಯನ್ನು ಟೀಕಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಚೀನೀ ಡ್ರೋನ್’ ಉಪಕರಣವನ್ನು ಬಳಸಿದ್ದಾರೆ ಎಂದು ಡ್ರೋನ್ ಸಂಸ್ಥೆ ಟೀಕಿಸಿದೆ. ನಿಷೇಧಿತ ಚೀನೀ ಡ್ರೋನ್ ಬಳಸಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಲಾಗಿದ್ದು, ‘ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ. ಭಾರತಕ್ಕೆ ಬಲವಾದ ಉತ್ಪಾದನಾ ವ್ಯವಸ್ಥೆ ಬೇಕೇ ವಿನಃ ಖಾಲಿ ಪದಗಳಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ, ಭಾರತದ ಡ್ರೋನ್ ಫೆಡರೇಷನ್ ರಾಹುಲ್ ಗಾಂಧಿ ಭಾರತೀಯ ಡ್ರೋನ್ ಉದ್ಯಮವನ್ನು ಕೀಳಾಗಿ ನೋಡುತ್ತಿದ್ದಾರೆ ಎಂದು ಆರೋಪಿಸಿದೆ.

ರಾಹುಲ್ ಗಾಂಧಿಯಿಂದ ನಿಷೇಧಿತ ಚೀನೀ ಡ್ರೋನ್ ಬಳಕೆ; ಏನಿದು ಹೊಸ ವಿವಾದ?
Rahul Gandhi With Drone
Follow us
ಸುಷ್ಮಾ ಚಕ್ರೆ
|

Updated on: Feb 17, 2025 | 7:40 PM

ನವದೆಹಲಿ: ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶನಿವಾರ ಡಿಜೆಐ ಡ್ರೋನ್ ತೋರಿಸಿ ಅದನ್ನು ಹಾರಿಸಿರುವ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವೀಡಿಯೊದ ಸಮಯದಲ್ಲಿ ಉಕ್ರೇನ್ ಯುದ್ಧದಲ್ಲಿ ಡ್ರೋನ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಡ್ರೋನ್ ಬಳಕೆಯ ಮೂಲಕ ಅದರ ಲಾಭ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಡ್ರೋನ್ ಉದ್ಯಮವು ಒದಗಿಸಿದ ಅವಕಾಶವನ್ನು ಪ್ರಧಾನಿ ಮೋದಿ ಗ್ರಹಿಸಲು ವಿಫಲರಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಭಾರತಕ್ಕೆ ಬಲವಾದ ಉತ್ಪಾದನಾ ವ್ಯವಸ್ಥೆ ಬೇಕೇ ಹೊರತು ಖಾಲಿ ಪದಗಳಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಈ ವೇಳೆ ರಾಹುಲ್ ಗಾಂಧಿ ತೋರಿಸಿದ್ದ ಡ್ರೋನ್ ಇದೀಗ ವಿವಾದಕ್ಕೆ ಕಾರಣವಾಗಿದೆ.

ಮೋದಿ ಸರ್ಕಾರವನ್ನು ಟೀಕಿಸುವ ಸಲುವಾಗಿ ರಾಹುಲ್ ಗಾಂಧಿ ನಿಷಏಧಿತ ಚೀನೀ ಡ್ರೋನ್ ಪ್ರದರ್ಶಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಿಷೇಧಿತ ಚೀನೀ DJI ಡ್ರೋನ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸಿರುವ ರಾಹುಲ್ ಗಾಂಧಿ ಭಾರತದ ಡ್ರೋನ್ ಉದ್ಯಮವನ್ನು ಅವಮಾನಿಸಿದ್ದಾರೆ ಎಂದು ಡ್ರೋನ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಸ್ಮಿತ್ ಶಾ ಟೀಕಿಸಿದ್ದಾರೆ. ಭಾರತದಲ್ಲಿ ನಿಷೇಧಿಸಲಾಗಿರುವ ಚೀನಾದ ಈ ಡ್ರೋನ್ ಅನ್ನು ರಾಹುಲ್ ಗಾಂಧಿ ಹೇಗೆ ತರಿಸಿಕೊಂಡರು? ಕಳ್ಳಸಾಗಣೆ ಮೂಲಕ ತರಲಾಯಿತೆ? ಕಾನೂನಿನ ಪ್ರಕಾರ ಅದು ರಿಜಿಸ್ಟರ್ ಆಗಿದೆಯೇ? ಎಂಬ ಪ್ರಶ್ನೆಗಳನ್ನು ಅವರು ಕೇಳಿದ್ದಾರೆ.

ಇದನ್ನೂ ಓದಿ: ನನ್ನ ಅಮೆರಿಕ ಭೇಟಿ ಬಗ್ಗೆ ರಾಹುಲ್ ಗಾಂಧಿ ಸುಳ್ಳು ಹೇಳಿದ್ದಾರೆ; ಸಚಿವ ಜೈಶಂಕರ್ ಸ್ಪಷ್ಟನೆ

“ಭಾರತದಲ್ಲಿ ಡ್ರೋನ್‌ಗಳನ್ನು ತಯಾರಿಸುವ 400ಕ್ಕೂ ಹೆಚ್ಚು ಕಂಪನಿಗಳಿವೆ. ಬ್ಯಾಟರಿಗಳು, ಮೋಟಾರ್‌ಗಳು, ಪ್ರೊಪೆಲ್ಲರ್‌ಗಳು, ಫ್ಲೈಟ್ ಕಂಟ್ರೋಲರ್‌ಗಳು, GNSS ಮತ್ತು ಇತರ ಘಟಕಗಳನ್ನು ತಯಾರಿಸುವ 50ಕ್ಕೂ ಹೆಚ್ಚು ಡ್ರೋನ್ ಘಟಕ ಕಂಪನಿಗಳು ಭಾರತದಲ್ಲಿವೆ. ಭಾರತೀಯ ಪರಿಸರ ವ್ಯವಸ್ಥೆಗೆ ಡ್ರೋನ್ ಭಾಗಗಳನ್ನು ತಯಾರಿಸುವ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲ ಎಂಬ ಹೇಳಿಕೆ ತುಂಬಾ ವಿಚಿತ್ರವಾಗಿದೆ. ಇದು ಇಡೀ ಭಾರತೀಯ ಪರಿಸರ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ” ಎಂದು ಸ್ಮಿತ್ ಶಾ ಹೇಳಿದ್ದಾರೆ.

ರಾಹುಲ್ ಗಾಂಧಿ ಪ್ರದರ್ಶಿಸಿರುವ ಡ್ರೋನ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಸ್ಮಿತ್ ಶಾ ಹೇಳಿದರು. DJI ಡ್ರೋನ್‌ಗಳ ಆಮದನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು. ರಾಹುಲ್ ಗಾಂಧಿ ತೋರಿಸಿದ DJI ಡ್ರೋನ್‌ಗೆ ಲೈಸೆನ್ಸ್ ಇದೆಯೇ ಎಂದು ಕೂಡ ಡಿಎಫ್​ಐ ಪ್ರಶ್ನಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ವಯಸ್ಕ ಜನಸಂಖ್ಯೆಗಿಂತ ಹೆಚ್ಚಿನ ಮತದಾರರು!; ರಾಹುಲ್ ಗಾಂಧಿ ಗಂಭೀರ ಆರೋಪ

“ಡ್ರೋನ್‌ಗಳು ಯುದ್ಧದಲ್ಲಿ ಕ್ರಾಂತಿಯನ್ನುಂಟು ಮಾಡಿವೆ, ಬ್ಯಾಟರಿಗಳು, ಮೋಟಾರ್‌ಗಳನ್ನು ಸಂಯೋಜಿಸಿ ಅಭೂತಪೂರ್ವ ರೀತಿಯಲ್ಲಿ ಯುದ್ಧಭೂಮಿಯಲ್ಲಿ ಕುಶಲತೆ ಮತ್ತು ಸಂವಹನ ನಡೆಸುತ್ತವೆ. ಡ್ರೋನ್‌ಗಳು ಕೇವಲ ಒಂದು ತಂತ್ರಜ್ಞಾನವಲ್ಲ. ಅವು ಬಲವಾದ ಕೈಗಾರಿಕಾ ವ್ಯವಸ್ಥೆಯಿಂದ ಉತ್ಪಾದಿಸಲ್ಪಟ್ಟ ತಳಮಟ್ಟದ ನಾವೀನ್ಯತೆಗಳಾಗಿವೆ. ದುರದೃಷ್ಟವಶಾತ್, ಪ್ರಧಾನಿ ಮೋದಿ ಇದನ್ನು ಗ್ರಹಿಸಲು ವಿಫಲರಾಗಿದ್ದಾರೆ. ಅವರು AI ಕುರಿತು ‘ಟೆಲಿಪ್ರೊಂಪ್ಟರ್’ ಭಾಷಣಗಳನ್ನು ನೀಡುತ್ತಿದ್ದಾರೆ. ಆದರೆ, ನಮ್ಮ ಸ್ಪರ್ಧಿಗಳು ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಮುಂದುವರೆಯುತ್ತಿದ್ದಾರೆ. ಭಾರತಕ್ಕೆ ಖಾಲಿ ಪದಗಳಲ್ಲ, ಬಲವಾದ ಉತ್ಪಾದನಾ ನೆಲೆಯ ಅಗತ್ಯವಿದೆ. ಭಾರತವು ಅಪಾರ ಪ್ರತಿಭೆ ಹೊಂದಿದೆ. ನಾವು ಸ್ಪಷ್ಟ ದೃಷ್ಟಿಯನ್ನು ಹೊಂದಿರಬೇಕು. ನಮ್ಮ ಯುವಕರಿಗೆ ಉದ್ಯೋಗಗಳನ್ನು ನೀಡಲು ಪ್ರಯತ್ನಿಸಬೇಕು” ಎಂದು ವೀಡಿಯೊದಲ್ಲಿ ರಾಹುಲ್ ಗಾಂಧಿ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ