AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಅಮೆರಿಕ ಭೇಟಿ ಬಗ್ಗೆ ರಾಹುಲ್ ಗಾಂಧಿ ಸುಳ್ಳು ಹೇಳಿದ್ದಾರೆ; ಸಚಿವ ಜೈಶಂಕರ್ ಸ್ಪಷ್ಟನೆ

ನಾನು ಅಮೆರಿಕಕ್ಕೆ ಭೇಟಿ ನೀಡಿದಾಗ ಅಮೆರಿಕ ಅಧ್ಯಕ್ಷರ ಪ್ರಮಾಣವಚನಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಬೇಕೆಂಬುದರ ಬಗ್ಗೆ ಚರ್ಚಿಸಿರಲಿಲ್ಲ. ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 'ಸುಳ್ಳು' ಹೇಳಿದ್ದಾರೆ. "ರಾಹುಲ್ ಗಾಂಧಿಯವರ ಸುಳ್ಳುಗಳು ರಾಜಕೀಯ ಉದ್ದೇಶವನ್ನು ಹೊಂದಿರಬಹುದು. ಆದರೆ ಅದು ವಿದೇಶಗಳಲ್ಲಿ ರಾಷ್ಟ್ರಕ್ಕೆ ಹಾನಿ ಮಾಡುತ್ತವೆ" ಎಂದು ಜೈಶಂಕರ್ ಹೇಳಿದ್ದಾರೆ.

ನನ್ನ ಅಮೆರಿಕ ಭೇಟಿ ಬಗ್ಗೆ ರಾಹುಲ್ ಗಾಂಧಿ ಸುಳ್ಳು ಹೇಳಿದ್ದಾರೆ; ಸಚಿವ ಜೈಶಂಕರ್ ಸ್ಪಷ್ಟನೆ
Jaishankar
ಸುಷ್ಮಾ ಚಕ್ರೆ
|

Updated on: Feb 03, 2025 | 6:07 PM

Share

ನವದೆಹಲಿ: ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆ ಅಧಿವೇಶನದ ಭಾಷಣದ ಸಮಯದಲ್ಲಿ ನೀಡಿದ ಹೇಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾನು 2024ರ ಡಿಸೆಂಬರ್ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್​. ಜೈಶಂಕರ್ ಹೇಳಿದ್ದಾರೆ.

“ನಾನು ಡಿಸೆಂಬರ್ ತಿಂಗಳಲ್ಲಿ ಜೋ ಬೈಡನ್ ಆಡಳಿತದ ವಿದೇಶಾಂಗ ಕಾರ್ಯದರ್ಶಿ ಮತ್ತು ಎನ್ಎಸ್ಎ ಅವರನ್ನು ಭೇಟಿ ಮಾಡಲು ಹೋಗಿದ್ದೆ. ನಮ್ಮ ಕಾನ್ಸುಲ್ ಜನರಲ್ ಸಭೆಯ ಅಧ್ಯಕ್ಷತೆ ವಹಿಸಲು ಸಹ ಹೋಗಿದ್ದೆ” ಎಂದು ಜೈಶಂಕರ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್‌ನಲ್ಲಿ ಅಮೆರಿಕದ ಅಧ್ಯಕ್ಷರ ಪಟ್ಟಾಭಿಷೇಕಕ್ಕೆ ಆಹ್ವಾನ ಪಡೆಯಲು ಅಮೆರಿಕಕ್ಕೆ ಹೋಗಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಕಾರಣದಿಂದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರ ಪ್ರಮಾಣವಚನ ಅಥವಾ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಅಂತಹ ಕಾರ್ಯಕ್ರಮಗಳಲ್ಲಿ ಭಾರತವನ್ನು ರಾಯಭಾರಿಗಳು ಪ್ರತಿನಿಧಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೇಕ್ ಇನ್ ಇಂಡಿಯಾ ಒಳ್ಳೆ ಐಡಿಯಾ, ಆದರೆ ಮೋದಿ ಯಶಸ್ವಿಯಾಗಲಿಲ್ಲ; ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳು ವಿದೇಶದಲ್ಲಿ ಭಾರತದ ಇಮೇಜ್‌ಗೆ ಧಕ್ಕೆ ತರುತ್ತವೆ ಎಂದು ಸಚಿವ ಜೈಶಂಕರ್ ಆರೋಪಿಸಿದ್ದಾರೆ. ನಾನು ಜೋ ಬೈಡೆನ್ ಆಡಳಿತದ ವಿದೇಶಾಂಗ ಕಾರ್ಯದರ್ಶಿ ಮತ್ತು ಎನ್‌ಎಸ್‌ಎ ಅವರನ್ನು ಭೇಟಿ ಮಾಡಲು ಹೋಗಿದ್ದೆ. ನಮ್ಮ ಕಾನ್ಸುಲ್ ಜನರಲ್ ಸಭೆಯ ಅಧ್ಯಕ್ಷತೆ ವಹಿಸಲು ಹೋಗಿದ್ದೆ. ನನ್ನ ವಾಸ್ತವ್ಯದ ಸಮಯದಲ್ಲಿ, ಮುಂಬರುವ ಎನ್‌ಎಸ್‌ಎ-ನಿಯೋಜಿತರು ನನ್ನನ್ನು ಭೇಟಿಯಾದರು. ನಮ್ಮ ಪ್ರಧಾನಿಗೆ ಸಂಬಂಧಿಸಿದ ಆಹ್ವಾನದ ಬಗ್ಗೆ ನಾವು ಯಾವುದೇ ಹಂತದಲ್ಲೂ ಚರ್ಚಿಸಿರಲಿಲ್ಲ. ನಮ್ಮ ಪ್ರಧಾನಿ ಅಂತಹ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ ಎಂಬುದು ಕಾಮನ್​ ಸೆನ್ಸ್” ಎಂದು ಸಚಿವ ಜೈಶಂಕರ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“ರಾಹುಲ್ ಗಾಂಧಿಯವರ ಸುಳ್ಳುಗಳು ರಾಜಕೀಯ ಉದ್ದೇಶವನ್ನು ಹೊಂದಿರಬಹುದು. ಆದರೆ ಅದು ವಿದೇಶಗಳಲ್ಲಿ ರಾಷ್ಟ್ರಕ್ಕೆ ಹಾನಿ ಮಾಡುತ್ತವೆ” ಎಂದು ಜೈಶಂಕರ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ