ಮೇಕ್ ಇನ್ ಇಂಡಿಯಾ ಒಳ್ಳೆ ಐಡಿಯಾ, ಆದರೆ ಮೋದಿ ಯಶಸ್ವಿಯಾಗಲಿಲ್ಲ; ರಾಹುಲ್ ಗಾಂಧಿ
Parliament Session: ನಿರುದ್ಯೋಗವನ್ನು ಹೋಗಲಾಡಿಸಲು ನಮ್ಮ ಸರ್ಕಾರಕ್ಕೂ ಸಾಧ್ಯವಾಗಲಿಲ್ಲ, ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೂ ಆಗಲಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ 'ಮೇಕ್ ಇನ್ ಇಂಡಿಯಾ' ಉಪಕ್ರಮವು ಒಳ್ಳೆಯದಾಗಿತ್ತು. ಆದರೆ ಅದು ವಿಫಲವಾಯಿತು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಲೋಕಸಭೆಯ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿದರು. ‘ಮೇಕ್ ಇನ್ ಇಂಡಿಯಾ’ ಉಪಕ್ರಮ ವಿಫಲವಾಗಿದೆ. ಪ್ರಸ್ತುತ ಎನ್‌ಡಿಎ ಸರ್ಕಾರದ ಅಡಿಯಲ್ಲಿ ಭಾರತದ ಉತ್ಪಾದನಾ ವಲಯವು ನಷ್ಟ ಅನುಭವಿಸಿದೆ. ಮೋದಿಯ ಕನಸಾದ ‘ಮೇಕ್ ಇನ್ ಇಂಡಿಯಾ’ ಬಹಳ ಒಳ್ಳೆಯ ಐಡಿಯಾ ಆಗಿತ್ತು. ಆದರೆ ಅದು ವಿಫಲವಾಯಿತು ಎಂದು ರಾಹುಲ್ ಗಾಂಧಿ ಸಂಸತ್ ಕಲಾಪದಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮ ಒಳ್ಳೆಯ ಐಡಿಯಾ ಎಂದು ನಾನು ಒಪ್ಪುತ್ತೇನೆ. ನಾನು ಪ್ರಧಾನಿ ನರೇಂದ್ರ ಮೋದಿಯನ್ನು ದೂಷಿಸುತ್ತಿಲ್ಲ. ಅವರು ಪ್ರಯತ್ನಿಸಲಿಲ್ಲ ಎಂದು ಹೇಳುವುದು ನ್ಯಾಯವಲ್ಲ. ಪ್ರಧಾನಿ ಮೇಕ್ ಇನ್ ಇಂಡಿಯಾ ಯಶಸ್ವಿಯಾಗಲು ಪ್ರಯತ್ನಿಸಿದರು, ಆದರೆ ಅವರು ವಿಫಲರಾದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತೀಯ ನೆಲದಲ್ಲಿ ಚೀನಾದ ಸೈನ್ಯದ ಉಪಸ್ಥಿತಿಗೆ ‘ಮೇಕ್-ಇನ್-ಇಂಡಿಯಾ’ ಉಪಕ್ರಮ ನೇರ ಹೊಣೆ ಎಂದು ರಾಹುಲ್ ಗಾಂಧಿ ಘೋಷಿಸಿದರು.
ಇದನ್ನೂ ಓದಿ: ದೆಹಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ; ಶಿಕ್ಷಣ ಕ್ಷೇತ್ರಕ್ಕೆ ಆಪ್ ಸರ್ಕಾರದ ಕೊಡುಗೆ ವಿರುದ್ಧ ವಾಗ್ದಾಳಿ
ಭಾರತವು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯವನ್ನು ರಾಹುಲ್ ಗಾಂಧಿ ಒತ್ತಿ ಹೇಳಿದರು. ಮೋದಿಯವರು ಇದನ್ನು ಹೆಚ್ಚಿಸಲು ಪ್ರಯತ್ನಿಸಿದ್ದಾರೆ. ಅವರ ಪ್ರಮುಖ ‘ಮೇಕ್ ಇನ್ ಇಂಡಿಯಾ’ ಉಪಕ್ರಮವು ಒಂದು ಪರಿಕಲ್ಪನೆಯಾಗಿ ಬಹಳ ಒಳ್ಳೆಯದು. ಆದರೆ, ಅದು ಪ್ರಾಯೋಗಿಕವಾಗಿ ಯಶಸ್ವಿಯಾಗಲಿಲ್ಲ ಎಂದಿದ್ದಾರೆ.
#BudgetSession2025 | Lok Sabha LoP and Congress MP Rahul Gandhi says “…I remember before the elections, all of you (BJP) were saying ‘400 Paar’ and you were saying you would change this (referring to Constitution). And then I was glad to see that the Prime Minister walked in… pic.twitter.com/6R8ZQLcDdz
— ANI (@ANI) February 3, 2025
“ನರೇಂದ್ರ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಅಭಿಯಾನದ ಹೊರತಾಗಿಯೂ ಉತ್ಪಾದನಾ ಕ್ಷೇತ್ರದ ಪಾಲು 2014ರಲ್ಲಿ ಶೇ. 15.3 ಇದ್ದುದು ಇಂದು ಶೇ. 12.6ಕ್ಕೆ ಇಳಿದಿದೆ. ಇದು 60 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ. ಇದಕ್ಕೆ ನಾನು ಪ್ರಧಾನಿ ಮೋದಿಯನ್ನು ದೂಷಿಸುತ್ತಿಲ್ಲ. ಉತ್ಪಾದನೆಯನ್ನು ಹೆಚ್ಚಿಸಲು ಅತ್ಯುತ್ತಮ ಕಂಪನಿಗಳು ಪ್ರಯತ್ನಿಸಿದ್ದವು. ಆದರೆ ವಿಫಲವಾದವು. ಈಗ ನಾವು ಉತ್ಪಾದನೆಯನ್ನು ಚೀನಾಕ್ಕೆ ಹಸ್ತಾಂತರಿಸಿದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದರು.
The impact of Chinese imports on Indian youth is a pressing concern. To understand the implications of this trend on India’s production industry, listen to LoP Shri @RahulGandhi‘s thoughts on the matter. pic.twitter.com/96a6XUHKB7
— Congress (@INCIndia) February 3, 2025
ಇದನ್ನೂ ಓದಿ: ರಾಬರ್ಟ್ ವಾದ್ರಾಗೆ ಬಿಜೆಪಿಯಿಂದ ಕ್ಲೀನ್ ಚಿಟ್ ಸಿಕ್ಕಿದ್ದು ಹೇಗೆ?; ರಾಹುಲ್ ಗಾಂಧಿಗೆ ಕೇಜ್ರಿವಾಲ್ ತಿರುಗೇಟು
“ನಾವು ಒಂದು ದೇಶವಾಗಿ, ಉತ್ಪಾದನೆಯನ್ನು ಸಂಘಟಿಸುವಲ್ಲಿ ವಿಫಲರಾಗಿದ್ದೇವೆ. ನಾವು ಅದನ್ನು ಚೀನಾಕ್ಕೆ ಹಸ್ತಾಂತರಿಸಿದ್ದೇವೆ. ಈ ಫೋನ್ ಭಾರತದಲ್ಲಿ ತಯಾರಿಸಲ್ಪಟ್ಟಿಲ್ಲ. ಇದನ್ನು ಭಾರತದಲ್ಲಿ ಕೇವಲ ಜೋಡಿಸಲಾಗುತ್ತದೆ. ಇದರ ಎಲ್ಲಾ ಪಾರ್ಟ್ಗಳನ್ನು ಚೀನಾದಲ್ಲಿ ತಯಾರಿಸಲಾಗುತ್ತದೆ. ನಾವು ಪ್ರತಿ ಬಾರಿ ಫೋನ್ ಬಳಸುವಾಗ ಅಥವಾ ಬಾಂಗ್ಲಾದೇಶದ ಶರ್ಟ್ ಧರಿಸಿದಾಗ ನಾವು ಅವರಿಗೆ ತೆರಿಗೆ ಪಾವತಿಸುತ್ತೇವೆ.” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
LIVE: Motion of Thanks | 18th Lok Sabha https://t.co/yWrhgF2okw
— Rahul Gandhi (@RahulGandhi) February 3, 2025
ಉದ್ಯೋಗದ ವಿಷಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಥವಾ ಪ್ರಸ್ತುತ ಎನ್‌ಡಿಎ ಸರ್ಕಾರವೆರಡೂ ಈ ದೇಶದ ಯುವಕರಿಗೆ ಉದ್ಯೋಗದ ಬಗ್ಗೆ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗಲಿಲ್ಲ ಎಂದು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಭಾರತ ಆರ್ಥಿಕವಾಗಿ ಬೆಳೆದಿದ್ದರೂ, ನಿರುದ್ಯೋಗ ನಿರಂತರ ಸವಾಲಾಗಿ ಉಳಿದಿದೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Mon, 3 February 25