ಉತ್ತರಾಖಂಡ: ನೈನಿತಾಲ್​ನಲ್ಲಿ ಕಂದಕಕ್ಕೆ ಬಿದ್ದ ಬಸ್, 6 ಮಂದಿ ಸಾವು, 27 ಜನರಿಗೆ ಗಾಯ

|

Updated on: Oct 09, 2023 | 8:25 AM

ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಭಾನುವಾರ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅಪಘಾತದ ವೇಳೆ ಬಸ್‌ನಲ್ಲಿ 33 ಮಂದಿ ಪ್ರಯಾಣಿಕರಿದ್ದರು. ಬಸ್ ಹರ್ಯಾಣದಿಂದ ಬರುತ್ತಿದ್ದು, ಹಿಸಾರ್‌ನಿಂದ ಜನರನ್ನು ಕರೆದೊಯ್ಯುತ್ತಿತ್ತು. ಅಪಘಾತ ಸಂಭವಿಸಿದಾಗ ವಾಹನವು ನೈನಿತಾಲ್‌ನ ಕಲಾಧುಂಗಿ ಪ್ರದೇಶದಲ್ಲಿತ್ತು.

ಉತ್ತರಾಖಂಡ: ನೈನಿತಾಲ್​ನಲ್ಲಿ ಕಂದಕಕ್ಕೆ ಬಿದ್ದ ಬಸ್, 6 ಮಂದಿ ಸಾವು, 27 ಜನರಿಗೆ ಗಾಯ
ಬಸ್
Image Credit source: India Today
Follow us on

ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಭಾನುವಾರ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 27 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅಪಘಾತದ ವೇಳೆ ಬಸ್‌ನಲ್ಲಿ 33 ಮಂದಿ ಪ್ರಯಾಣಿಕರಿದ್ದರು. ಬಸ್ ಹರ್ಯಾಣದಿಂದ ಬರುತ್ತಿದ್ದು, ಹಿಸಾರ್‌ನಿಂದ ಜನರನ್ನು ಕರೆದೊಯ್ಯುತ್ತಿತ್ತು. ಅಪಘಾತ ಸಂಭವಿಸಿದಾಗ ವಾಹನವು ನೈನಿತಾಲ್‌ನ ಕಲಾಧುಂಗಿ ಪ್ರದೇಶದಲ್ಲಿತ್ತು.

ಗಾಯಗೊಂಡ ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ನೈನಿತಾಲ್‌ನ ವಿಪತ್ತು ನಿಯಂತ್ರಣ ಕೊಠಡಿಯಿಂದ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಎಚ್ಚರಿಕೆ ನೀಡಿತು ಮತ್ತು ತಕ್ಷಣ ರಕ್ಷಣಾ ತಂಡಗಳನ್ನು ಅಪಘಾತ ಸ್ಥಳಕ್ಕೆ ರವಾನಿಸಿತು. ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.

ಸ್ಥಳೀಯ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡ ಮತ್ತು ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡದಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

ಮತ್ತಷ್ಟು ಓದಿ: ಪುಣೆಯ ವರಂಧ​ ಘಾಟ್​ನಲ್ಲಿ 50 ಅಡಿ ಆಳದ ಕಮರಿಗೆ ಬಿದ್ದ ಮಿನಿ ಬಸ್​, ಚಾಲಕ ಸಾವು, ನಾಲ್ವರಿಗೆ ಗಂಭೀರ ಗಾಯ

ಮತ್ತೊಂದು ಘಟನೆಯಲ್ಲಿ, ಉತ್ತರಾಖಂಡದ ಪಿಥೋರಗಢದಲ್ಲಿ ಭೂಕುಸಿತ ಸಂಭವಿಸಿ ಕಲ್ಲುಬಂಡೆಗಳು ವಾಹನಕ್ಕೆ ಡಿಕ್ಕಿ ಹೊಡೆದು ಏಳಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಧಾರ್ಚುಲಾ ಉಪವಿಭಾಗದ ಕೈಲಾಶ್ ಮಾನಸ ಸರೋವರ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಏಳಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ವಾಹನ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜ್ಯದ ಬಂಡಿ ಗ್ರಾಮದಿಂದ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಧಾರ್ಚುಲಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ದಿವೇಶ್ ಶಶ್ನಿ ಪ್ರಕಾರ, ಭೂಕುಸಿತದ ಅವಶೇಷಗಳ ಅಡಿಯಲ್ಲಿ ಕಾರು ಹೂತುಹೋಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ