Breaking: ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್, 36 ಮಂದಿ ಸಾವು, ಕೇಂದ್ರದಿಂದ ಪರಿಹಾರ

ಬಸ್​ ಕಂದಕಕ್ಕೆ ಉರುಳಿ ಹಲವು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಪೌರಿ-ಅಲ್ಮೋರಾ ಗಡಿಯಲ್ಲಿರುವ ರಾಮನಗರದ ಉತ್ತರಾಖಂಡದ ಕುಪಿ ಬಳಿ ಸೋಮವಾರ ಗರ್ವಾಲ್ ಮೋಟಾರ್ಸ್ ಬಸ್ ಕಂದಕಕ್ಕೆ ಬಿದ್ದಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. TOI ಪ್ರಕಾರ, ಇದು 42 ಆಸನಗಳ ಬಸ್ ಆದರೆ ಅಪಘಾತದ ಸಮಯದಲ್ಲಿ 30 ಪ್ರಯಾಣಿಕರು ವಾಹನದಲ್ಲಿದ್ದರು.

Breaking: ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಬಸ್, 36 ಮಂದಿ ಸಾವು, ಕೇಂದ್ರದಿಂದ ಪರಿಹಾರ
ಬಸ್

Updated on: Nov 04, 2024 | 2:26 PM

ಬಸ್​ ಕಂದಕಕ್ಕೆ ಉರುಳಿ ಹಲವು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಪೌರಿ-ಅಲ್ಮೋರಾ ಗಡಿಯಲ್ಲಿರುವ ರಾಮನಗರದ ಉತ್ತರಾಖಂಡದ ಕುಪಿ ಬಳಿ ಸೋಮವಾರ ಗರ್ವಾಲ್ ಮೋಟಾರ್ಸ್ ಬಸ್ ಕಂದಕಕ್ಕೆ ಬಿದ್ದಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಟೈಮ್ಸ್​ ಆಫ್ ಇಂಡಿಯಾ ವರದಿ  ಪ್ರಕಾರ, ಇದು 42 ಆಸನಗಳ ಬಸ್ ಆದರೆ ಅಪಘಾತದ ಸಮಯದಲ್ಲಿ 30 ಕ್ಕೂ ಅಧಿಕ ಪ್ರಯಾಣಿಕರು ವಾಹನದಲ್ಲಿದ್ದರು.

ಈ ಅಪಘಾತದಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಬಸ್ ಗರ್ವಾಲ್ ಮೋಟರ್ ಓನರ್ಸ್ ಯೂನಿಯನ್ ಲಿಮಿಟೆಡ್‌ಗೆ ಸೇರಿದೆ ಎಂದು ಹೇಳಲಾಗಿದೆ. ಬಸ್ ನೈನಿಕಂಡ ಬ್ಲಾಕ್‌ನ ಕಿನಾಥ್‌ನಿಂದ ರಾಮನಗರಕ್ಕೆ ಹೋಗುತ್ತಿತ್ತು. ಕೆಲವರು ಬಸ್‌ನಿಂದ ಕೆಳಗೆ ಬಿದ್ದ ತಕ್ಷಣ ದಾರಿಯಲ್ಲಿ ಹೋಗುತ್ತಿದ್ದವರನ್ನು ಸಹಾಯಕ್ಕಾಗಿ ಕರೆದಿದ್ದಾರೆ.
ಇದಾದ ನಂತರ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡವೂ ಸ್ಥಳಕ್ಕೆ ತೆರಳಿದೆ. ಅಲ್ಮೋರಾ ಎಸ್ಪಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಬಸ್ಸಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಇದಲ್ಲದೇ ನೈನಿತಾಲ್‌ನಿಂದ ಕೆಲವು ಪೊಲೀಸ್ ಪಡೆಗಳು ಕೂಡ ಸ್ಥಳಕ್ಕೆ ತೆರಳಿವೆ.

ಕೇಂದ್ರ ಸರ್ಕಾರವು ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಗಾಯಗೊಂಡವರಿಗೆ ತಲಾ 50 ಸಾವಿರ ರೂ. ನೀಡುವುದಾಗಿ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:35 am, Mon, 4 November 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us