Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ ಸುರಂಗದಲ್ಲಿ ಸಿಲುಕಿದ್ದ ಮಗನಿಗಾಗಿ ಕಾದು, ಆತ ಹೊರಬರುವ ಮುನ್ನ ಕೊನೆಯುಸಿರೆಳೆದ ಅಪ್ಪ

ಜಾರ್ಖಂಡ್‌ನ ಘಾಟ್‌ಶಿಲಾ ಉಪವಿಭಾಗದ ದುಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಡಲುಕಾ ಗ್ರಾಮದ ನಿವಾಸಿ ಬಸೆಟ್ ಮುರ್ಮು ತನ್ನ ಮಗ ಉತ್ತರಾಖಂಡ ಸುರಂಗದಿಂದ ಹೊರಬರುವುದನ್ನೇ ಕಾದು ಕುಳಿತಿದ್ದರು. ಮಗ ಯಾವಾಗ ಬರುತ್ತಾನೆ ಎಂದು ಕೇಳುತ್ತಲೇ ಇದ್ದ ಮುರ್ಮು, ಮಗ ಭುಕ್ತು ಹೊರಬರುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.

ಉತ್ತರಾಖಂಡ ಸುರಂಗದಲ್ಲಿ ಸಿಲುಕಿದ್ದ ಮಗನಿಗಾಗಿ ಕಾದು, ಆತ ಹೊರಬರುವ ಮುನ್ನ ಕೊನೆಯುಸಿರೆಳೆದ ಅಪ್ಪ
ಜಾಖಂಡ್ ಕಾರ್ಮಿಕ ಭುಕ್ತು ಮತ್ತು ಅಪ್ಪ
Follow us
ರಶ್ಮಿ ಕಲ್ಲಕಟ್ಟ
|

Updated on: Nov 30, 2023 | 3:19 PM

ಡೆಹ್ರಾಡೂನ್ ನವೆಂಬರ್ 30: ಉತ್ತರಾಖಂಡದ(Uttarakhand) ಸಿಲ್ಕ್ಯಾರಾ ಸುರಂಗದಲ್ಲಿ (Silkyara tunnel) ಸಿಕ್ಕಿಬಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಿದ ದಿನವನ್ನು ದೇಶವು ಮಂಗಳವಾರ ಸಂಭ್ರಮಿಸುತ್ತಿದ್ದಾಗ, ಸಿಕ್ಕಿಬಿದ್ದ ವ್ಯಕ್ತಿಯೊಬ್ಬನ ತಂದೆ ಒಳ್ಳೆಯ ಸುದ್ದಿ ಪಡೆಯುವ ಮೊದಲೇ ಸಾವಿಗೀಡಾಗಿದ್ದಾರೆ. ಜಾರ್ಖಂಡ್‌ನ ಘಾಟ್‌ಶಿಲಾ ಉಪವಿಭಾಗದ ದುಮಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಡಲುಕಾ ಗ್ರಾಮದ ನಿವಾಸಿ ಬಸೆಟ್ ಮುರ್ಮು (65) ತನ್ನ ಮಗ 26 ವರ್ಷದ ಕಾರ್ಮಿ ಭುಕ್ತು ಸುರಂಗದಿಂದ ಹೊರಬರುವ ಮುನ್ನ ಕೊನೆಯುಸಿರೆಳೆದಿದ್ದಾರೆ.

ಮಂಗಳವಾರ ಬಸೆಟ್ ಅವರು ಅಳಿಯ ಥಕರ್‌ ಹನ್ಸ್‌ದಾ ಅವರೊಂದಿಗೆ ರಕ್ಷಣಾ ಕಾರ್ಯಾಚರಣೆ ಕುರಿತು ಚರ್ಚಿಸಿದ್ದರು ಎಂದು ಸಂಬಂಧಿಯೊಬ್ಬರು ಹೇಳಿದರು, “ಒಂದು ದಿನ, ಎರಡು ದಿನ, ಒಂದು ವಾರ, ಎರಡು ವಾರಗಳ ಕಾಯುವಿಕೆ..ಹಿರಿಯ ವ್ಯಕ್ತಿಗೇ ಅದೇ ಹೆಚ್ಚು ಎಂದು ಅವರು ಹೇಳಿದ್ದಾರೆ.

ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಬಸೆಟ್ ಕುಸಿದು ಬಿದ್ದಾಗ ತನ್ನ ಕೊನೆಯ ಹಂತವನ್ನು ತಲುಪಿದ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ನಾನು ತನ್ನ ಮಾವ ಬಳಿ ಹಾಸಿಗೆಯ ಮೇಲೆ ಕುಳಿತು ಹೇಳಿದ್ದೆ ಅಂತಾರೆ ಹನ್ಸ್‌ದಾ. ಅವರನ್ನು ಆಸ್ಪತ್ರೆಗೆ ತಲುಪಿಸುವ ಹೊತ್ತು ತಡವಾಗಿತ್ತು. ನನ್ನ ಮಾವ ತನ್ನ ಮಗನನ್ನು ನೋಡಲು ಹಂಬಲಿಸುತ್ತಿದ್ದರು. ನವೆಂಬರ್ 12 ರ ನಂತರ, ಉತ್ತರಕಾಶಿಯಲ್ಲಿ ಅಪಘಾತದ ಸುದ್ದಿ ಹೊರಬಂದಾಗ, ಅವರು ಕುಗ್ಗಿ ಹೋದರು. ಪ್ರತಿದಿನವೂ’ಭುಕ್ತು ಮನೆಗೆ ಯಾವಾಗ ಬರುತ್ತಾನೆ ಎಂದು ಅವರು ಕೇಳುತ್ತಲೇ ಇದ್ದರು.

ದುರ್ಘಟನೆ ಸಂಭವಿಸಿದಾಗಿನಿಂದ ಅವರು ಭೇಟಿಯಾಗುವ ಬಹುತೇಕ ಎಲ್ಲರೊಂದಿಗೆ ಯಾವಾಗಲೂ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ವಿಚಾರಿಸುತ್ತಿದ್ದರು ಎಂದು ಬಸೆಟ್ ಅವರ ಪತ್ನಿ ಪಿಟಿ ಹೇಳಿದರು. “ನನ್ನ ತಂದೆಯ ಸಾವಿನ ಸುದ್ದಿ ಕೇಳಿ ನನಗೆ ಆಘಾತವಾಗಿದೆ ಮತ್ತು ತುಂಬಾ ದುಃಖವಾಗಿದೆ” ಎಂದು ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭುಕ್ತು ಹೇಳಿದ್ದಾರೆ.

“ದುರಂತ ಸಂಭವಿಸಿದಾಗಿನಿಂದ, ಅವರು ನನ್ನ ಸುರಕ್ಷಿತ ಮರಳುವಿಕೆಗಾಗಿ ಯಾವಾಗಲೂ ಪ್ರಾರ್ಥಿಸುತ್ತಿದ್ದರು ಎಂದು ನನ್ನ ಕುಟುಂಬ ಸದಸ್ಯರು ನನಗೆ ಹೇಳಿದರು, ಆದರೆ ಅಂತಿಮವಾಗಿ ನಾನು ಸುರಂಗದಿಂದ ಹೊರಬಂದಾಗ, ನನ್ನನ್ನು ಅಪ್ಪಿಕೊಳ್ಳಲು ನನ್ನ ತಂದೆ ಜೀವಂತವಾಗಿಲ್ಲ ಎಂದು ಭುಕ್ತು ಕಣ್ಣೀರಾಗಿದ್ದಾರೆ.

ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ್ದವರಿಗೆ 1 ಲಕ್ಷ ರೂ. ನೆರವು ಘೋಷಿಸಿದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ

ಬಸೆಟ್‌ಗೆ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದಾರ ಹಿರಿಯವ ರಾಮರೈ (30), ಆಂಧ್ರಪ್ರದೇಶದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ . ಕಿರಿಯ, ಮಂಗಲ್ (24) ಅವರೊಂದಿಗೆ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಭುಕ್ತು ಅವರ ಪತ್ನಿ ಪಂಟಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಧಲ್ಭೂಮ್‌ಗಢ್‌ನಲ್ಲಿರುವ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದ ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಆರು ಕಾರ್ಮಿಕರಲ್ಲಿ ಭುಕ್ತು ಒಬ್ಬರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಇದು ದೋಷಾರೋಪಣೆ ಮಾಡುವ ಸಮಯ ಅಲ್ಲ: ಶಿವಕುಮಾರ್
ಇದು ದೋಷಾರೋಪಣೆ ಮಾಡುವ ಸಮಯ ಅಲ್ಲ: ಶಿವಕುಮಾರ್
ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ
ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?