ಡೆಹ್ರಾಡೂನ್ ಫೆಬ್ರುವರಿ 06: ಏಕರೂಪ ನಾಗರಿಕ ಸಂಹಿತೆ (Uniform Civil Code) ಮುಸ್ಲಿಮರ ಪವಿತ್ರ ಗ್ರಂಥ ಕುರಾನ್‌ನ (Quran) ತತ್ವಗಳಿಗೆ ವಿರುದ್ಧವಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಎಸ್.ಟಿ.ಹಸನ್ (ST Hasan) ಹೇಳಿದ್ದು ನಮ್ಮ ಸಮುದಾಯವು ಅದನ್ನು ಪಾಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಕುರಾನ್‌ನಲ್ಲಿ ಮುಸ್ಲಿಮರಿಗೆ ನೀಡಿರುವ ‘ಹಿದಾಯತ್’ (ಸೂಚನೆಗಳು) ವಿರುದ್ಧವಾಗಿದ್ದರೆ ನಾವು ಅದನ್ನು (ಯುಸಿಸಿ ಬಿಲ್) ಪಾಲಿಸುವುದಿಲ್ಲ. ಅದು ‘ಹಿದಾಯತ್’ ಪ್ರಕಾರವಾಗಿದ್ದರೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಯುಸಿಸಿ ಮಸೂದೆಯನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಉತ್ತರಾಖಂಡ ವಿಧಾನಸಭೆಯಲ್ಲಿ ಇಂದು (ಮಂಗಳವಾರ) ಮಂಡಿಸಿದರು.2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಮಸೂದೆಯನ್ನು ಜಾರಿ ಮಾಡುವುದಾಗಿ ಭರವಸೆ ನೀಡಿತ್ತು.
#WATCH | On Uniform Civil Code Uttarakhand 2024 Bill, Samajwadi Party MP ST Hasan says, “If a law is made which is against the tenets of the Quran, then we will not agree with it…Till when will they keep polarising the votes, people are fed up of this now.” pic.twitter.com/OjwkCdonWv
— ANI (@ANI) February 6, 2024
ಮಸೂದೆಯು ಕಾನೂನಾದರೆ, ಇದು ಮದುವೆ, ವಿಚ್ಛೇದನ, ಉತ್ತರಾಧಿಕಾರ ಇತ್ಯಾದಿಗಳನ್ನು ನಿಯಂತ್ರಿಸುವ ವೈಯಕ್ತಿಕ ಧಾರ್ಮಿಕ ಕಾನೂನುಗಳನ್ನು ಬದಲಿಸುತ್ತದೆ. ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿರುವುದರಿಂದ ಮಸೂದೆ ಜಾರಿಯಾಗುವ ನಿರೀಕ್ಷೆಯಿದೆ.
ಅಂದಹಾಗೆ ಕಾಂಗ್ರೆಸ್ ಯುಸಿಸಿ ವಿರುದ್ಧವಲ್ಲ ಆದರೆ ಅದನ್ನು ಮಂಡಿಸುವ ವಿಧಾನದ ವಿರುದ್ಧ ಹೇಳಿದೆ. ನಾವು ಏಕರೂಪ ನಾಗರಿಕ ಸಂಹಿತೆ ವಿರುದ್ಧ ಅಲ್ಲ. ಸದನವು ವ್ಯವಹಾರ ನೀತಿಯ ನಿಯಮಗಳಿಂದ ಆಡಳಿತ ನಡೆಸುತ್ತಿದೆ ಆದರೆ ಬಿಜೆಪಿ ಅದನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿದೆ. ಸಂಖ್ಯಾಬಲದ ಆಧಾರದ ಮೇಲೆ ಶಾಸಕರ ಧ್ವನಿಯನ್ನು ಹತ್ತಿಕ್ಕಲು ಬಯಸುತ್ತದೆ. ಪ್ರಶ್ನೋತ್ತರ ವೇಳೆಯಲ್ಲಿ ಸದನದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಶಾಸಕರ ಹಕ್ಕು, ಅವರು ನಿಯಮ 58 ರ ಅಡಿಯಲ್ಲಿ ಪ್ರಸ್ತಾವನೆಯನ್ನು ಹೊಂದಿದ್ದರೂ ಅಥವಾ ಇತರ ನಿಯಮಗಳ ಅಡಿಯಲ್ಲಿ ವಿಧಾನಸಭೆಯಲ್ಲಿ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಹಕ್ಕನ್ನು ಹೊಂದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಯಶಪಾಲ್ ಆರ್ಯ ಹೇಳಿದರು.
ಉತ್ತರಾಖಂಡದ ಮಾಜಿ ಸಿಎಂ ಮತ್ತು ಕಾಂಗ್ರೆಸ್ ನಾಯಕ ಹರೀಶ್ ರಾವತ್, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಮಸೂದೆಯನ್ನು ಅಂಗೀಕರಿಸುವ ಉತ್ಸುಕತೆಯಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ: Uniform Civil Code: ಜಾತಿ, ಧರ್ಮ, ಪ್ರಾಂತ್ಯ ಬೇಧವಿಲ್ಲ, ಎಲ್ಲರಿಗೂ ಒಂದೇ ಕಾನೂನು, ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ
ಕರಡು ಪ್ರತಿ ಯಾರ ಬಳಿಯೂ ಇಲ್ಲ ಮತ್ತು ಅದರ ಬಗ್ಗೆ ತಕ್ಷಣ ಚರ್ಚೆ ನಡೆಸಬೇಕೆಂದು ಅವರು ಬಯಸುತ್ತಾರೆ. ಕೇಂದ್ರ ಸರ್ಕಾರವು ಉತ್ತರಾಖಂಡದಂತಹ ಸೂಕ್ಷ್ಮ ರಾಜ್ಯವನ್ನು ಟೋಕನಿಸಂಗಾಗಿ ಬಳಸುತ್ತಿದೆ, ಅವರು ಯುಸಿಸಿ ತರಲು ಬಯಸಿದರೆ, ಅದನ್ನು ಕೇಂದ್ರ ಸರ್ಕಾರವೇ ತರಬೇಕಿತ್ತು ಎಂದು ಎಎನ್ಐ ಜತೆ ಮಾತನಾಡಿದ ರಾವತ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ