
ಉತ್ತರಕಾಶಿ, ಮಾರ್ಚ್ 10: ಉತ್ತರಕಾಶಿಯ ಮಂಡಿಯಾಸರಿ ಗ್ರಾಮದಲ್ಲಿ ನಡೆದ ಮದುವೆಯು ತನ್ನ ವಿಶೇಷತೆಗಳಿಂದ ಗಮನಸೆಳೆಯಿತು. ಮದುವೆಗೆ (Wedding) ಬಂದಿದ್ದ ಅತಿಥಿಗಳು ಮಂಟಪದಲ್ಲೇ ನ್ಯೂಜಿಲೆಂಡ್ ವಿರುದ್ಧ ಭಾರತದ T20 ಫೈನಲ್ ವಿಜಯವನ್ನು ಆಚರಿಸಿದರು. ಈ ಸಮಾರಂಭವು ಸಂತೋಷ, ದೇಶಭಕ್ತಿ ಮತ್ತು ಸಾಮಾಜಿಕ ಬದಲಾವಣೆಯನ್ನು ಪ್ರತಿಬಿಂಬಿಸಿತು. ಮದುವೆಗೆ ಬಂದಿದ್ದ ಅತಿಥಿಗಳು, ಕುಟುಂಬಸ್ಥರು ಮದುವೆಯನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಕ್ರಿಕೆಟ್ ಪಂದ್ಯವನ್ನೂ ಎಂಜಾಯ್ ಮಾಡಿದರು.
ಭಾನುವಾರ ನಡೆದ ಅಂಕಿತ್ ರಾವತ್ ಅವರ ವಿವಾಹವು ಕೇವಲ ಎರಡು ಕುಟುಂಬಗಳ ನಡುವಿನ ಸಂಭ್ರಮಕ್ಕಿಂತ ಹೆಚ್ಚಾಗಿತ್ತು. ಇದು ನ್ಯೂಜಿಲೆಂಡ್ ವಿರುದ್ಧದ T20 ಫೈನಲ್‌ನಲ್ಲಿ ಭಾರತದ ಅದ್ಭುತ ವಿಜಯದ ಸಂಭ್ರಮವಾಗಿ ಬದಲಾಯಿತು. ಮದುಮಗ ಅಂಕಿತ್ ರಾವತ್ ಅವರ ವಿವಾಹದ ವಿಧಿವಿಧಾನಗಳ ಸಮಯದಲ್ಲಿಯೂ ಅತಿಥಿಗಳು ಅಲ್ಲಿದ್ದ ದೊಡ್ಡ ಸ್ಕ್ರೀನ್ನಲ್ಲಿ ಪಂದ್ಯವನ್ನು ನೋಡಿ ಎಂಜಾಯ್ ಮಾಡುತ್ತಿದ್ದರು.
ಇದನ್ನೂ ಓದಿ: ಆಹ್ವಾನ ಇಲ್ಲದೇ ಮದುವೆ, ರಿಸೆಪ್ಷನ್ ಊಟಕ್ಕೆ ಹೋಗಿ ಸಿಕ್ಕಿಬಿದ್ದರೆ ಶಿಕ್ಷೆ ಏನು ಗೊತ್ತೇ? ಕೇಳಿದ್ರೆ ಶಾಕ್ ಆಗ್ತೀರಿ!
ಈ ರೋಮಾಂಚಕ ಆಟವನ್ನು ವೀಕ್ಷಿಸಲು ಅತಿಥಿಗಳು, ಗ್ರಾಮಸ್ಥರು ಮತ್ತು ಕುಟುಂಬದ ಸದಸ್ಯರು ಸುತ್ತಲೂ ಸೇರಿದ್ದರು. ಕ್ರಿಕೆಟ್ ಪಂದ್ಯವು ಅಂತಿಮ ಹಂತ ತಲುಪುತ್ತಿದ್ದಂತೆ ಮದುವೆ ಮಂಟಪದಲ್ಲಿಯೂ ಉತ್ಸಾಹ ಹೆಚ್ಚಾಯಿತು. ಪಂದ್ಯದಲ್ಲಿ ಭಾರತ ಅಂತಿಮವಾಗಿ ಗೆಲುವು ಸಾಧಿಸಿದಾಗ, ಮದುವೆ ಮಂಟಪದಲ್ಲಿ ಸೇರಿದ್ದ ಜನರು ನೃತ್ಯ, ಹರ್ಷೋದ್ಗಾರ, ಮದುವೆ ಮತ್ತು ರಾಷ್ಟ್ರದ ವಿಜಯೋತ್ಸವ ಎರಡನ್ನೂ ಆಚರಿಸುವುದರೊಂದಿಗೆ ಮಂಟಪದಲ್ಲಿ ಸಂತೋಷ ಹೊರಚಿಮ್ಮಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ