ಭಾರತದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್​ನ ರೂಪಾಂತರಿ ವಿರುದ್ಧ ಲಸಿಕೆ ಪರಿಣಾಮಕಾರಿ : ವಿಶ್ವ ಆರೋಗ್ಯ ಸಂಸ್ಥೆ

|

Updated on: May 11, 2021 | 7:23 PM

WHO: ಜಾಗತಿಕವಾಗಿ ತಜ್ಞರೊಂದಿಗಿನ ಚರ್ಚೆಗಳ ಪ್ರಕಾರ ವಿಶ್ವ ಆರೋಗ್ಯಸಂಸ್ಥೆಗೆ ಇದುವರೆಗೆ ತಿಳಿದಿರುವ ಮಾಹಿತಿ ಆಧರಿಸಿ ಭಾರತೀಯ ರೂಪಾಂತರಿ ವಿರುದ್ಧ ಲಸಿಕೆ ಪರಿಣಾಮಕಾರಿತ್ವದ ಕುರಿತು ಡಾ. ರೊಡೆರಿಕೊ ಎಚ್ ಆಫ್ರಿನ್ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್​ನ ರೂಪಾಂತರಿ ವಿರುದ್ಧ ಲಸಿಕೆ ಪರಿಣಾಮಕಾರಿ : ವಿಶ್ವ ಆರೋಗ್ಯ ಸಂಸ್ಥೆ
ಡಾ. ರೊಡೆರಿಕೊ ಎಚ್ ಆಫ್ರಿನ್
Follow us on

ದೆಹಲಿ: ಭಾರತದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ನ B.1.617 ರೂಪಾಂತರಿ ಹೆಚ್ಚು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಭಾರತಕ್ಕೆ ಲಸಿಕೆಗಳು, ಚಿಕಿತ್ಸಕ ಮತ್ತು ರೋಗನಿರ್ಣಯವು ಪರಿಣಾಮಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಭಾರತದ ಪ್ರತಿನಿಧಿ ಮಂಗಳವಾರ ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಜಾಗತಿಕವಾಗಿ ತಜ್ಞರೊಂದಿಗಿನ ಚರ್ಚೆಗಳ ಪ್ರಕಾರ ವಿಶ್ವ ಆರೋಗ್ಯಸಂಸ್ಥೆಗೆ ಇದುವರೆಗೆ ತಿಳಿದಿರುವ ಮಾಹಿತಿ ಆಧರಿಸಿ ಭಾರತೀಯ ರೂಪಾಂತರಿ ವಿರುದ್ಧ ಲಸಿಕೆ ಪರಿಣಾಮಕಾರಿತ್ವದ ಕುರಿತು ಡಾ. ರೊಡೆರಿಕೊ ಎಚ್ ಆಫ್ರಿನ್  ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಕಾಯಿಲೆಯ (ಕೊವಿಡ್ -19) ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ಕಾರಣ ಎಂದು ನಂಬಲಾಗುವ ಬಿ.1.617 ರೂಪಾಂತರಿಯು ಜಾಗತಿಕ ಕಳವಳದ ರೂಪಾಂತರವೆಂದು ವರ್ಗೀಕರಿಸಲ್ಪಟ್ಟ ನಾಲ್ಕನೇ ರೂಪಾಂತರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕೊವಿಡ್ -19 ಟೆಕ್ನಿಕಲ್ ಲೀಡ್ ಡಾ. ಮಾರಿಯಾ ವ್ಯಾನ್ ಕೆರ್ಖೋವ್ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು ಹೆಚ್ಚಿದ ಪ್ರಸರಣವನ್ನು ಸೂಚಿಸಲು ಕೆಲವು ಲಭ್ಯವಿರುವ ಮಾಹಿತಿಯಿದೆ. ಆದರೆ ಬಿ .1.617 ರೂಪಾಂತರ ಮತ್ತು ಎಲ್ಲಾ ಉಪ-ವಂಶಾವಳಿಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದು ಡಾ. ಕೆರ್ಖೋವ್ ಅವರು ವಿಜ್ಞಾನಿಗಳಿಗೆ ಹೇಳಿದ್ದಾರೆ.

ನಮ್ಮ Epi ತಂಡಗಳು ಮತ್ತು ನಮ್ಮ ಲ್ಯಾಬ್ ತಂಡಗಳು ಆಂತರಿಕವಾಗಿ, ಬಿ 1.617 ರ ಹೆಚ್ಚಿನ ಪ್ರಸರಣವನ್ನು ಸೂಚಿಸಲು ಕೆಲವು ಲಭ್ಯವಿರುವ ಮಾಹಿತಿಯನ್ನು ಹೊಂದಿವೆ. ಆದ್ದರಿಂದ ನಾವು ಇದನ್ನು ಜಾಗತಿಕ ಮಟ್ಟದಲ್ಲಿ ಕಳಕಳಿಯ ರೂಪಾಂತರವೆಂದು ವರ್ಗೀಕರಿಸುತ್ತಿದ್ದೇವೆ ಎಂದು ಅವರು ಹೇಳಿದರು.


ಭಾರತದಲ್ಲಿ ಪ್ರತಿದಿನ ದಾಖಲಾಗುವ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ ಮತ್ತು ಮರಣ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ. ದೇಶದಲ್ಲಿ ಪ್ರತಿದಿನ 3 ಲಕ್ಷಕಿಂತಲೂ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದು, ಇದು ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡಿದೆ.

ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ನೈಜ ಸಂಖ್ಯೆಗಳನ್ನು ವರದಿ ಮಾಡುವ ಬಗ್ಗೆ ಪ್ರಕ್ರಿಯೆ ಹೆಚ್ಚಿಸಲು ಸರ್ಕಾರಗಳಿಗೆ ಕರೆ ನೀಡಿದರು. ಸೋಂಕುಗಳ ಪ್ರಮಾಣ ಮತ್ತು ಸಾವುನೋವುಗಳು ಚಿಂತಾಜನಕ ಎಂದು ಹೇಳಿದ್ದಾರೆ ಸೌಮ್ಯಾ.

ಈ ಸಮಯದಲ್ಲಿ, ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ ಎಂದು ನಾನು ಹೇಳುತ್ತೇನೆ. ಭಾರತ ಮತ್ತು ಆಗ್ನೇಯ ಪ್ರದೇಶದ ಇತರ ದೇಶಗಳಲ್ಲಿ ನಾವು ಇಂದು ನೋಡುತ್ತಿರುವ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ನಮಗೆ ಕಳವಳವಿದೆ. ವಿಶ್ವದ ಪ್ರತಿಯೊಂದು ದೇಶಗಳು, ವಾಸ್ತವವಾಗಿ, ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ಅದರ ನಿಜವಾದ ಸಂಖ್ಯೆಗೆ ಕಡಿಮೆ ಅಂದಾಜು ಮಾಡುತ್ತಿದ್ದೀರಿ  ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಭಾರತೀಯರು ಕೇವಲ ಕೊರೊನಾದಿಂದ ಸಾಯುತ್ತಿಲ್ಲ: ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್

ಭಾರತದ ರೂಪಾಂತರಿ ಕೊರೊನಾ ಚಿಂತೆಗೀಡುಮಾಡುವ ತಳಿ ಎಂದ ವಿಶ್ವ ಆರೋಗ್ಯ ಸಂಸ್ಥೆ

Published On - 7:23 pm, Tue, 11 May 21