ಮೇ 16ರ ವೇಳೆ ಅರಬ್ಬೀ ಸಮುದ್ರದಲ್ಲಿ ರೂಪುಗೊಳ್ಳಲಿದೆ 2021ರ ಮೊದಲ ಚಂಡಮಾರುತ
ಮೇ 14 ರ ಬೆಳಿಗ್ಗೆ ಆಗ್ನೇಯ ಅರಬ್ಬೀ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ಇದು ಲಕ್ಷದ್ವೀಪದ ಪಕ್ಕದಲ್ಲಿರುವ ಈ ಪ್ರದೇಶದಾದ್ಯಂತ ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ
ದೆಹಲಿ: ಮೇ 16ರ ಹೊತ್ತಿಗೆ ಅರಬ್ಬೀ ಸಮುದ್ರದಲ್ಲಿ ಈ ವರ್ಷದ ಮೊದಲ ಚಂಡಮಾರುತ ರೂಪುಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ಹೇಳಿದೆ. 2021ರ ಮೊದಲ ಚಂಡಮಾರುತವು ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ರೂಪುಗೊಂದು ತೌಕ್ಟೆ ಎಂಬ ಹೆಸರು ಪಡೆಯಲಿದೆ. ಚಂಡಮಾರುತಕ್ಕೆ ಈ ಹೆಸರನ್ನಿಟ್ಟಿದ್ದು ಮ್ಯಾನ್ಮಾರ್. ಈ ಪ್ರದೇಶದಲ್ಲಿರುವ ಸಮುದ್ರಗಳಲ್ಲಿ ಚಂಡಮಾರುತ ರೂಪುಗೊಳ್ಳುವುದು ಅಧಿಕ. ಗುರುವಾರದಿಂದ ಮೇ 16 ರವರೆಗೆ ಲಕ್ಷದ್ವೀಪ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಮೇಲೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಮ್ಯಾಡೆನ್ ಜೂಲಿಯನ್ ಆಸಿಲೇಷನ್ (MJO) ಯ ಪ್ರಸ್ತುತ ಸ್ಥಳವು ಅರಬ್ಬೀ ಸಮುದ್ರದ ಮೇಲೆ ಇರುವುದಿಂದ ಹೆಚ್ಚಿನ ಮಳೆಯಾಗಲು ಅನುಕೂಲಕರವಾಗಿದೆ. ಒಂದು ವಾರದವರೆಗೆ ಮಳೆ ಇರಲಿದೆ.
ಮೇ 14 ರ ಬೆಳಿಗ್ಗೆ ಆಗ್ನೇಯ ಅರಬ್ಬೀ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ಇದು ಲಕ್ಷದ್ವೀಪದ ಪಕ್ಕದಲ್ಲಿರುವ ಈ ಪ್ರದೇಶದಾದ್ಯಂತ ಉತ್ತರ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ಇದು ಮೇ 16 ರ ಸುಮಾರಿಗೆ ಚಂಡಮಾರುತದತೀವ್ರವಾಗಬಹುದುಎಂದು ಹವಾಮಾನ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಗುರುವಾರದಿಂದ ಸಮುದ್ರ ಮತ್ತಷ್ಟು ಬಿರುಸಾಗುಲ ನಿರೀಕ್ಷೆಯಿದೆ, ಈ ದೃಷ್ಟಿಯಿಂದ ಈ ಕರಾವಳಿ ರಾಜ್ಯಗಳ ಮೀನುಗಾರರಿಗೆ ಶುಕ್ರವಾರದಿಂದ ಸಮುದ್ರಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಸಮುದ್ರದಲ್ಲಿದ್ದವರು ಬುಧವಾರ ರಾತ್ರಿಯೊಳಗೆ ಸುರಕ್ಷತೆಗೆ ಮರಳುವಂತೆ ಕೋರಲಾಗಿದೆ.
ಸಮುದ್ರದ ಪರಿಸ್ಥಿತಿಗಳು, ಮುಖ್ಯವಾಗಿ ಕೊಮೊರಿನ್ ಪ್ರದೇಶ ಮತ್ತು ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಉದ್ದಕ್ಕೂ, ಮೇ 14 ಮತ್ತು 16 ರ ನಡುವೆ ತುಂಬಾ ಒರಟಾಗಿರುತ್ತದೆ. ಮೇ 15 ರಂದು ಗೋವಾ ಮತ್ತು ಮಹಾರಾಷ್ಟ್ರದ ತೀರಗಳಲ್ಲಿಯೂ ಇದೇ ರೀತಿಯ ಒರಟು ಸಮುದ್ರ ಸ್ಥಿತಿ ನಿರೀಕ್ಷಿಸಲಾಗಿದೆ. ಗಂಟೆಗೆ 40 ರಿಂದ 50 ಕಿ.ಮೀ ವೇಗದಿಂದ 60 ಕಿ.ಮೀ / ಗಂಟೆ ವೇಗವಾಗಿ ಇಜು ಲಕ್ಷದ್ವೀಪ, ಮಾಲ್ಡೀವ್ಸ್ ಪ್ರದೇಶಗಳಿಗೆ ಗುರುವಾರ ಅಪ್ಪಳಿಸಲಿದೆ. ಕೇರಳ, ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ತೀರಗಳು ಭಾನುವಾರದವರೆಗೆ ಇದೇ ರೀತಿಯ ಗಾಳಿ ಬೀಸುತ್ತವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಲಕ್ಷದ್ವೀಪದಲ್ಲಿ ವಾರಾಂತ್ಯದಲ್ಲಿ ಉಬ್ಬರವಿಳಿತಕ್ಕಿಂತ ಸುಮಾರು 1 ಮೀಟರ್ ಉಬ್ಬರವಿಳಿತ ಕಂಡು ಬರಲಿದ್ದು ತಗ್ಗು ಪ್ರದೇಶಗಳು ಮುಳುಗುವ ಸಾಧ್ಯತೆಯಿದೆ.
ಇದನ್ನೂ ಓದಿ: Bengaluru Rain: ಬೆಂಗಳೂರು ಸೇರಿ ವಿವಿಧೆಡೆ ಧಾರಾಕಾರ ಮಳೆ
Fact Check: 5ಜಿ ತಂತ್ರಜ್ಞಾನ ಪ್ರಯೋಗಕ್ಕೂ ಕೋವಿಡ್-19ಗೂ ಯಾವುದೇ ಸಂಬಂಧವಿಲ್ಲ
(India Meteorological Department says this year’s first cyclone likely to form in the Arabian Sea around 2021 May 16)
Published On - 6:23 pm, Tue, 11 May 21