ದೇಹಕ್ಕೆ ಸೆಗಣಿ ಮೆತ್ತಿದರೆ ರೋಗ ಪ್ರತಿರೋಧ ಶಕ್ತಿ ಹೆಚ್ಚುತ್ತದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ: ತಜ್ಞರು

ಕೊವಿಡ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೆಗಣಿ ಅಥವಾ ಗೋಮೂತ್ರವು ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ, ಇದು ಸಂಪೂರ್ಣವಾಗಿ ನಂಬಿಕೆಯ ಮೇಲೆ ಆಧಾರಿತವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಹೇಳಿದರು.

ದೇಹಕ್ಕೆ ಸೆಗಣಿ ಮೆತ್ತಿದರೆ ರೋಗ ಪ್ರತಿರೋಧ ಶಕ್ತಿ ಹೆಚ್ಚುತ್ತದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ: ತಜ್ಞರು
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
| Updated By: Digi Tech Desk

Updated on:May 11, 2021 | 6:13 PM

ಅಹಮದಾಬಾದ್: ಕೊವಿಡ್​ನಿಂದ ದೂರವಿರಲು, ದೇಹದಲ್ಲಿ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸಲು ಕೆಲವರು ದೇಹಕ್ಕೆ ಸೆಗಣಿ ಬಳಿಯುತ್ತಾರೆ. ಈ ರೀತಿ ಸೆಗಣಿ ಮೆತ್ತುವುದರಿಂದ ರೋಗ ಪ್ರತಿರೋಧ ಹೆಚ್ಚುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಸೆಗಣಿ ಹಚ್ಚುವುದು ಇನ್ನಿತರ ರೋಗ ಹರಡಲು ಕಾರಣವಾಗುತ್ತದೆ ಎಂದು ಭಾರತದ ವೈದ್ಯರು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ದೇಶದಲ್ಲಿ ಪ್ರತಿದಿನ ಕೊರೊನಾವೈರಸ್ ಸೋಂಕು ಹೆಚ್ಚುತ್ತಲೇ ಇದೆ. ರೋಗಿಗಳ ಸಂಖ್ಯೆ 2 ಕೋಟಿ ದಾಟಿದೆ. ರೋಗಿಗಳು ಸರಿಯಾದ ಚಿಕಿತ್ಸೆ ಲಭಿಸದೆ,ಆಕ್ಸಿಜನ್ , ಬೆಡ್ ಸಿಗದೆ ಸಾಯುತ್ತಿದ್ದಾರೆ. ಹೀಗೆ ಮೃತಪಟ್ಟವರ ಸಂಖ್ಯೆ ದಾಖಲಾಗಿರುವ ಸಂಖ್ಯೆಗಿಂತ ಐದು ಅಥವಾ ಹತ್ತು ಪಟ್ಟು ಹೆಚ್ಚು ಇರುತ್ತದೆ ಅಂತಾರೆ ತಜ್ಞರು.

ಗುಜರಾತಿನಲ್ಲಿ ಕೆಲವರು ವಾರಕ್ಕೊಮ್ಮೆ ಗೋಶಾಲೆಗಳಿಗೆ ಹೋಗಿ ಗೋಮೂತ್ರ ಮತ್ತು ಸೆಗಣಿಯನ್ನು ಶರೀರಕ್ಕೆ ಹಚ್ಚಿಕೊಳ್ಳುತ್ತಾರೆ. ಇದರಿಂದ ದೇಹದಲ್ಲಿ ಪ್ರತಿರೋಧ ಶಕ್ತಿ ಹೆಚ್ಚುತ್ತದೆ, ಕೊರೊನಾವೈರಸ್ ನಿಂದ ಚೇತರಿಕೆಯಾಗುತ್ತದೆ ಎಂಬ ನಂಬಿಕೆ ಇಲ್ಲಿದೆ.

ಹಿಂದೂ ಸಂಸ್ಕೃತಿಯಲ್ಲಿ ಗೋವನ್ನು ಪವಿತ್ರ ಎಂದು ಪೂಜಿಸಲಾಗುತ್ತದೆ. ಸೆಗಣಿಯಲ್ಲಿ ಔಷಧೀಯ ಮತ್ತು ರೋಗಾಣು ಮುಕ್ತಗೊಳಿಸುವ ಗುಣವಿದೆ ಎಂದು ಮನೆಗಳನ್ನು ಶುದ್ಧಿಗೊಳಿಸಲು ಸೆಗಣಿ ಬಳಸಲಾಗುತ್ತದೆ. ವೈದ್ಯರು ಕೂಡಾ ಇಲ್ಲಿಗೆ ಬರುತ್ತಾರೆ. ಸೆಗಣಿ ಹಚ್ಚುವುದರಿಂದ ರೋಗ ಪ್ರತಿರೋಧ ಶಕ್ತಿ ಹೆಚ್ಚುತ್ತದೆ ಎಂದು ಅವರು ನಂಬುತ್ತಾರೆ ಎಂದು ಫಾರ್ಮಸ್ಯುಟಿಕಲ್ಸ್ ಕಂಪನಿಯ ಅಸೋಸಿಯೇಟ್ ಮ್ಯಾನೇಜರ್ ಮಣಿಲಾಲ್ ಬೊರಿಸಾ ಹೇಳುತ್ತಾರೆ. ಕಳೆದ ವರ್ಷಕೊವಿಡ್ ಬಂದಾಗ ಸೆಗಣಿ ಹಚ್ಚುವ ಮೂಲಕ ರೋಗದಿಂದ ಗುಣಮುಖನಾಗಿದ್ದೆ ಅಂತಾರೆ ಬೊರಿಸಾ.

ಅಂದಿನಿಂದ ಅವರು ಹಿಂದೂ ಸನ್ಯಾಸಿಗಳು ನಡೆಸುತ್ತಿರುವ ಶ್ರೀ ಸ್ವಾಮಿನಾರಾಯಣ ಗುರುಕುಲ್ ವಿಶ್ವವಿದ್ಯಾ ಪ್ರತಿಷ್ಠಾನದಲ್ಲಿ ನಿಯಮಿತವಾಗಿ ಭೇಟಿ ನೀಡುತ್ತಾರೆ. ಈ ಸಂಸ್ಥೆ ಭಾರತದಲ್ಲಿ ಕೊವಿಡ್ ಲಸಿಕೆ ನಿರ್ಮಿಸುವ ಜೈಡಸ್ ಕ್ಯಾಡಿಲಾದ ಪ್ರಧಾನ ಕಚೇರಿಯ ಬಳಿಯಲ್ಲಿಯೇ ಇದೆ.

ಇಲ್ಲಿ ದೇಹಕ್ಕೆ ಸೆಗಣಿ ಮತ್ತು ಗೋಮೂತ್ರ ಹಚ್ಚಿ ಅದು ಒಣಗುವವರೆಗೆ ಆಶ್ರಮದಲ್ಲಿರುವ ಹಸುಗಳನ್ನು ತಬ್ಬಕೊಳ್ಳುತ್ತಾರೆ. ದೇಹದ ಚೈತನ್ಯ ಹೆಚ್ಚಿಸಲು ಯೋಗ ಮಾಡುತ್ತಾರೆ. ದೇಹಕ್ಕೆ ಹಚ್ಚಿದ ಸೆಗಣಿಯನ್ನು ಹಾಲು ಅಥವಾ ಮಜ್ಜಿಗೆಯಿಂದ ತೊಳೆಯಲಾಗುತ್ತದೆ.

ಭಾರತ ಮತ್ತು ವಿಶ್ವದಾದ್ಯಂತದ ವೈದ್ಯರು ಮತ್ತು ವಿಜ್ಞಾನಿಗಳು ಕೊವಿಡ್ ಗಾಗಿ ಪರ್ಯಾಯ ಚಿಕಿತ್ಸೆಯನ್ನು ಅಭ್ಯಾಸ ಮಾಡುವುದರ ವಿರುದ್ಧ ಪದೇ ಪದೇ ಎಚ್ಚರಿಕೆ ನೀಡಿದ್ದು, ಇಂಥಾ ಅಭ್ಯಾಸಗಳು ಆರೋಗ್ಯ ಸಮಸ್ಯೆಗಳನ್ನು ಸಂಕೀರ್ಣಗೊಳಿಸಬಹುದು ಎಂದು ಹೇಳಿದ್ದಾರೆ.

ಕೊವಿಡ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೆಗಣಿ ಅಥವಾ ಗೋಮೂತ್ರವು ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ, ಇದು ಸಂಪೂರ್ಣವಾಗಿ ನಂಬಿಕೆಯ ಮೇಲೆ ಆಧಾರಿತವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಹೇಳಿದರು.

ಈ ಉತ್ಪನ್ನಗಳನ್ನು ಸ್ಮೀಯರಿಂಗ್ ಅಥವಾ ಸೇವಿಸುವುದರಲ್ಲಿ ಆರೋಗ್ಯದ ಅಪಾಯಗಳಿವೆ ಕೆಲವುತರ ರೋಗಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದು. ಈ ರೀತಿ ಸೆಗಣಿ ಹಚ್ಚುವುದಕ್ಕಾಗಿ ಜನರು ಗುಂಪು ಸೇರುವುದರಿಂದ ಕೊರೊನಾವೈರಸ್ ಹರಡುವ ಆತಂಕವೂ ಇದೆ. . ಅಹಮದಾಬಾದ್‌ನ ಮತ್ತೊಂದು ಗೋಶಾಲೆಯ ಉಸ್ತುವಾರಿ ಮಧುಚರಣ್ ದಾಸ್ ಅವರು ಭಾಗವಹಿಸುವವರ ಸಂಖ್ಯೆಯನ್ನು ಮಿತಿಗೊಳಪಡಿಸಿದ್ದೇವೆ ಎಂದು ಹೇಳಿದ್ದಾರೆ.

(Doctors in India are warning against the practice of using cow dung As Covid 19 Cure)

ಇದನ್ನೂ ಓದಿ: ಭಾರತೀಯರು ಕೇವಲ ಕೊರೊನಾದಿಂದ ಸಾಯುತ್ತಿಲ್ಲ: ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್

Published On - 5:33 pm, Tue, 11 May 21

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು