AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaishno Devi Yatra: ವೈಷ್ಣೋದೇವಿ ಯಾತ್ರೆಗೆ ತೆರಳುವವರಿಗೆ ಗುಡ್ ನ್ಯೂಸ್​; ಈ ಹೊಸ ಸೌಲಭ್ಯ ಒದಗಿಸಲು ಸರ್ಕಾರ ಅನುಮತಿ

ಕತ್ರಾದಿಂದ ಅಧಕುವಾರಿಯವರೆಗಿನ ರೋಪ್‌ವೇ ಉದ್ದ 1,281 ಮೀಟರ್. ರೋಪ್ ವೇ ಆರಂಭವಾದ ನಂತರ ಪ್ರಯಾಣಿಕರಿಗೆ ನೆಮ್ಮದಿ ಸಿಗಲಿದ್ದು, ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Vaishno Devi Yatra: ವೈಷ್ಣೋದೇವಿ ಯಾತ್ರೆಗೆ ತೆರಳುವವರಿಗೆ ಗುಡ್ ನ್ಯೂಸ್​; ಈ ಹೊಸ ಸೌಲಭ್ಯ ಒದಗಿಸಲು ಸರ್ಕಾರ ಅನುಮತಿ
ವೈಷ್ಣೋದೇವಿ ಯಾತ್ರೆ
TV9 Web
| Updated By: ಸುಷ್ಮಾ ಚಕ್ರೆ|

Updated on: Apr 13, 2022 | 9:30 PM

Share

ವೈಷ್ಣೋದೇವಿ ಯಾತ್ರೆಗೆ ತೆರಳುವ ಭಕ್ತರಿಗೆ ಒಂದು ಸಿಹಿ ಸುದ್ದಿಯಿದೆ. ವೈಷ್ಣೋದೇವಿ ದರ್ಶನಕ್ಕೆ (Vaishno Devi Yatra)  ಹೋಗುವವರಿಗೆ ಸರ್ಕಾರ ಹೊಸ ಸೌಲಭ್ಯವನ್ನು ಕಲ್ಪಿಸಿರುವುದರಿಂದ ಕೋಟ್ಯಂತರ ಭಕ್ತರಿಗೆ ಮಾತಾ ವೈಷ್ಣೋದೇವಿಯ ಯಾತ್ರೆ ಸುಲಭವಾಗಲಿದೆ. ಕತ್ರಾದಿಂದ ಭವನಕ್ಕೆ ಪ್ರಯಾಣವನ್ನು ಸುಲಭಗೊಳಿಸಲು ರೋಪ್‌ವೇ (Ropeway) ಸೌಲಭ್ಯವನ್ನು ಪ್ರಾರಂಭಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ರೋಪ್‌ವೇ ಕತ್ರಾ ಮತ್ತು ಅಧಕುವಾರಿ ನಡುವೆ ಪ್ರಾರಂಭವಾಗುತ್ತದೆ. ರೋಪ್ ವೇ ಆರಂಭವಾದ ನಂತರ ಪ್ರಯಾಣಿಕರಿಗೆ ನೆಮ್ಮದಿ ಸಿಗಲಿದ್ದು, ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಸ್ಥಳೀಯ ಉದ್ಯಮಿಗಳಿಗೆ ನೇರ ಲಾಭವಾಗಲಿದೆ.

ಕತ್ರಾದಿಂದ ಅಧಕುವಾರಿಯವರೆಗಿನ ರೋಪ್‌ವೇ ಉದ್ದ 1,281 ಮೀಟರ್. ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ಅಧ್ಯಕ್ಷ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಲೆಫ್ಟಿನೆಂಟ್ ಗವರ್ನರ್ ಅಧ್ಯಕ್ಷತೆಯಲ್ಲಿ ನೂತನವಾಗಿ ನೇಮಕಗೊಂಡ ದೇಗುಲ ಮಂಡಳಿ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಯಾತ್ರಾರ್ಥಿಗಳ ಪ್ರಯಾಣವನ್ನು ತೊಂದರೆ ರಹಿತವಾಗಿಸಲು ಇನ್ನೂ ಹಲವು ಸೌಲಭ್ಯಗಳನ್ನು ಆರಂಭಿಸಲು ಒಪ್ಪಿಗೆ ನೀಡಲಾಯಿತು. ಕಟ್ಟಡದ ಪ್ರದೇಶದಲ್ಲಿ ಜನದಟ್ಟಣೆ ತಪ್ಪಿಸಲು ಸ್ಕೈವಾಕ್ ಕಾಮಗಾರಿ ಮಾಡಲಾಗುತ್ತಿದೆ.

ಹಾಗೇ, ದುರ್ಗಾ ಭವನ ಮತ್ತು ಆರ್‌ಎಫ್‌ಐಡಿ ಟ್ಯಾಗ್ ಸೇವೆಯನ್ನು ಕೂಡ ಶೀಘ್ರದಲ್ಲೇ ಆರಂಭಿಸಲಾಗುವುದು. ಇದಲ್ಲದೆ, ಕತ್ರಾ ಮತ್ತು ಸುತ್ತಮುತ್ತ ಆಧ್ಯಾತ್ಮಿಕ ಥೀಮ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಕತ್ರಾ ಮತ್ತು ಅಧಕುವಾರಿಯಲ್ಲಿ ಹೆಚ್ಚಿನ ಸಿಬ್ಬಂದಿ ವಸತಿ ನಿರ್ಮಾಣಕ್ಕೂ ಅನುಮೋದನೆ ನೀಡಲಾಯಿತು.

ಇದನ್ನೂ ಓದಿ: Vaishno Devi Yatra: ವೈಷ್ಣೋದೇವಿ ಯಾತ್ರೆ ಕೈಗೊಳ್ಳುವವರು ಈ ವೆಬ್​ಸೈಟ್​ನಲ್ಲೇ ಬುಕಿಂಗ್ ಮಾಡುವುದು ಕಡ್ಡಾಯ

Vaishno Devi Temple Stampede: ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತ, 12 ಭಕ್ತರ ಸಾವು