ಕಾಂಗ್ರೆಸ್ನ ಹಿರಿಯ ಸಂಸದ ವಸಂತ್ರಾವ್ ಚವಾಣ್(Vasantrao Chavan) ನಿಧನರಾಗಿದ್ದಾರೆ. ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಸೋಮವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ. ಕಳೆದ ಎರಡು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸಾವಿನೊಂದಿಗೆ ಅವರ ಹೋರಾಟ ವಿಫಲವಾಯಿತು.
ಆರಂಭದಲ್ಲಿ ಚವಾಣ್ ಯಕೃತ್ತಿನ ಸೋಂಕಿನಿಂದಾಗಿ ನಾಂದೇಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆಯನ್ನೂ ಎದುರಿಸುತ್ತಿದ್ದರು. ಲೋ ಬಿಪಿ ಕೂಡ ಇತ್ತು. ಚವಾಣ್ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಹೈದರಾಬಾದ್‌ಗೆ ಕರೆದೊಯ್ಯಲಾಯಿತು.
ಅವರು ಪ್ರತಿ ತಿಂಗಳು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು, ನಾಂದೇಡ್‌ನಲ್ಲಿ ನಡೆದ ಕಾಂಗ್ರೆಸ್ ವಿಭಾಗೀಯ ಸಭೆಯಿಂದಾಗಿ ನಿತ್ಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಚುನಾವಣೆಗೆ ಸಿದ್ಧತೆ
ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ಆರಂಭವಾಗಿವೆ.ಪಕ್ಷದ ಪ್ರಮುಖ ನಾಯಕರು ಮಹಾರಾಷ್ಟ್ರ ಪ್ರವಾಸದಲ್ಲಿದ್ದಾರೆ. ಈ ವರ್ಷ ಲೋಕಸಭೆ ಚುನಾವಣೆಯಲ್ಲಿ ಲಾತೂರ್ ಮತ್ತು ನಾಂದೇಡ್‌ನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರಿಂದ ಸಭೆಯಲ್ಲಿ ವಿಭಿನ್ನ ಉತ್ಸಾಹ ಕಂಡುಬಂದಿದೆ. ಲಾತೂರ್ ಸಂಸದ ಶಿವಾಜಿರಾವ್ ಕಾಲ್ಗೆ ಮತ್ತು ನಾಂದೇಡ್ ಸಂಸದ ವಸಂತರಾವ್ ಚವಾಣ್ ಅವರೊಂದಿಗೆ ಸಭೆ ನಡೆಸಲು ಯೋಜಿಸಲಾಗಿತ್ತು.
भावपूर्ण श्रद्धांजली!
काँग्रेस पक्षाचे ज्येष्ठ नेते, नांदेड लोकसभा मतदारसंघाचे खासदार वसंतरावजी चव्हाण यांच्या निधनाची वार्ता अत्यंत धक्कादायक आहे. प्रतिकूल परस्थितीत देखील त्यांनी काँग्रेस पक्षाशी सदैव एकनिष्ठ राहून काँग्रेस पक्षाचा विचार घरोघरी पोहोचवला.
वसंतरावजी चव्हाण… pic.twitter.com/DTGRe8p5hm
— Nana Patole (@NANA_PATOLE) August 26, 2024
ಲೋಕಸಭೆ ಚುನಾವಣೆಗೆ ಕೆಲವು ದಿನಗಳ ಮೊದಲು ಅಶೋಕ್ ಚವಾಣ್ ಬಿಜೆಪಿ ಸೇರಿದ್ದರು. ಈ ಹಿನ್ನೆಲೆಯಲ್ಲಿ ನಾಂದೇಡ್ ಚುನಾವಣೆ ಕುರಿತು ಚರ್ಚೆ ನಡೆಸಲಾಯಿತು. ಕಾಂಗ್ರೆಸ್ ಭದ್ರಕೋಟೆಯಾಗಿರುವ ನಾಂದೇಡ್ ಕ್ಷೇತ್ರದಲ್ಲಿ 2004ರ ಚುನಾವಣೆಗೆ ಬಿಜೆಪಿ ಪ್ರವೇಶಿಸಿತ್ತು.
ಆದರೆ ಕಾಂಗ್ರೆಸ್ ಅಭ್ಯರ್ಥಿ ವಸಂತ್ ಚವಾಣ್ ಬಿಜೆಪಿಯ ಅಂದಿನ ಸಂಸದ ಪ್ರತಾಪ್ ಪಾಟೀಲ್ ಚಿಖ್ಲಿಕರ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು. ಚವಾಣ್ ಅವರು ಚಿಖ್ಲಿಕರ್ ಅವರನ್ನು 59 ಸಾವಿರದ 442 ಮತಗಳಿಂದ ಸೋಲಿಸಿದರು. ವಸಂತರಾವ್ ಚವಾಣ್ 5,28,894 ಹಾಗೂ ಚಿಖ್ಲಿಕರ್ 4,69,452 ಮತಗಳನ್ನು ಪಡೆದಿದ್ದರು.
ವಸಂತ್ ಚವಾಣ್ ಅವರು ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾಂಗ್ರೆಸ್ ನಾಯಕ ಎಂದು ಹೆಸರಾಗಿದ್ದರು.
ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ನಾಂದೇಡ್ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಮಹಾವಿಕಾಸ್ ಅಘಾಡಿಯ ಎಲ್ಲಾ ಮೂರು ಪಕ್ಷದ ನಾಯಕರು ಅಂದು ಚವಾಣ್ ಪರ ಒಮ್ಮತದಿಂದ ಪ್ರಚಾರ ಮಾಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ