Veerendra Heggade: ನೂತನ ಸಂಸದರಾಗಿ ಡಾ.ವೀರೇಂದ್ರ ಹೆಗ್ಗಡೆ ಪ್ರಮಾಣವಚನ ಸ್ವೀಕಾರ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 21, 2022 | 12:44 PM

ರಾಜ್ಯಸಭಾ ಸದಸ್ಯರಾಗಿ ಕೇಂದ್ರ ಸರಕಾರದಿಂದ ನಾಮನಿರ್ದೇಶನಗೊಂಡಿರುವ ಡಾ.ಡಿ ವೀರೇಂದ್ರ ಹೆಗ್ಗಡೆ ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಸಭೆಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. 

Veerendra Heggade: ನೂತನ ಸಂಸದರಾಗಿ ಡಾ.ವೀರೇಂದ್ರ ಹೆಗ್ಗಡೆ ಪ್ರಮಾಣವಚನ ಸ್ವೀಕಾರ
ರಾಜ್ಯಸಭೆಯಲ್ಲಿ ಡಾ.ವೀರೇಂದ್ರ ಹೆಗ್ಗಡೆ ಪ್ರಮಾಣವಚನ ಸ್ವೀಕಾರ
Follow us on

ದೆಹಲಿ: ರಾಜ್ಯಸಭಾ ಸದಸ್ಯರಾಗಿ ಕೇಂದ್ರ ಸರಕಾರದಿಂದ ನಾಮನಿರ್ದೇಶನಗೊಂಡಿರುವ ಡಾ.ಡಿ ವೀರೇಂದ್ರ ಹೆಗ್ಗಡೆ (Veerendra Heggade) ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಸಭೆಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಕನ್ನಡದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಆರು ವರ್ಷಗಳ ಕಾಲ ರಾಜ್ಯಸಭೆಯ ಸದಸ್ಯರಾಗಿ ಸೇವೆಗೆ ಅವಕಾಶವಿದೆ. ಈ ಬಾರಿಯ ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಸಂಗೀತ ನಿರ್ದೇಶಕ ಇಳಯರಾಜ, ಖ್ಯಾತ ಅಥ್ಲೀಟ್ ಪಿ.ಟಿ. ಉಷಾ, ಸಿನಿಮಾ ಕತೆಗಾರ ವಿ. ವಿಜಯೇಂದ್ರ ಪ್ರಸಾದದರನ್ನ ನಾಮ ನಿರ್ದೇಶನ ಮಾಡಲಾಗಿತ್ತು.

ನನ್ನ ಅನುಭವವನ್ನು ದೇಶಕ್ಕಾಗಿ ಬಳಸಲು ಒಳ್ಳೆಯ ವೇದಿಕೆ

ರಾಜ್ಯಸಭೆಗೆ ನಾಮ ನಿರ್ದೇಶನವಾದ ಬಗ್ಗೆ ಈ ಹಿಂದೆ ಸಂತಸ ಹಂಚಿಕೊಂಡಿರುವ ವೀರೇಂದ್ರ ಹೆಗ್ಗಡೆಯವರು ನನ್ನ ಅನುಭವವನ್ನು ದೇಶಕ್ಕಾಗಿ ಬಳಸಲು ಒಳ್ಳೆಯ ವೇದಿಕೆ ಎಂದಿದ್ದರು. ರಾಜ್ಯಸಭೆ ಸದಸ್ಯತ್ವಕ್ಕೆ ನನ್ನನ್ನು ನಾಮ ನಿರ್ದೇಶನ ಮಾಡುವ ಬಗ್ಗೆ ಯಾವ ನಿರೀಕ್ಷೆಯೂ ನನಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ನಾವು ಮಾಡಿದ ಸೇವೆಯನ್ನು ಗುರುತಿಸಿ, ನನ್ನನ್ನು ಹತ್ತಿರದಿಂದ ಗಮನಿಸಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆಂದು ಭಾವಿಸುವೆ. ನನಗೀಗ 74 ವರ್ಷ ವಯಸ್ಸಾಗಿದೆ. ನನ್ನ ವಯಸ್ಸು ಮತ್ತು ಅನುಭವವನ್ನು ರಾಜ್ಯಸಭೆಯ ಮೂಲಕ ದೇಶಕ್ಕಾಗಿ ಬಳಸಲು ಒಂದು ವೇದಿಕೆ ಸಿಕ್ಕಿದೆ ಎಂದು ಭಾವಿಸಿದ್ದೇನೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಇತರ ರಾಜ್ಯಗಳಿಗೂ ವಿಸ್ತರಿಸುವ ಯೋಜನೆಯಿದೆ.

ಈಗಾಗಲೇ ಕರ್ನಾಟಕದಲ್ಲಿ ಆರು ಸಾವಿರ ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆದಿದ್ದೇವೆ. ಶೀಘ್ರದಲ್ಲೇ ಇನ್ನೂ ನಾಲ್ಕು ಸಾವಿರ ಕೇಂದ್ರಗಳನ್ನು ತೆರೆಯುವ ಉದ್ದೇಶವಿದೆ. 30. ಲಕ್ಷ ಇ-ಶ್ರಮ ಕಾಡ್೯ಗಳನ್ನು ವಿತರಿಸಲಾಗಿದೆ. ಕೃಷಿ ವಿಮೆ ಯೋಜನೆಯೂ ಸೇರಿದಂತೆ ಸರಕಾರದ ಅನೇಕ ಉತ್ತಮ ಯೋಜನೆಗಳನ್ನು ಜನರಿಗೆ ತಲುಪಿಸಬೇಕಿದೆ. ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಗ್ರಾಮಾಭಿವೃದ್ಧಿ ಯೋಜನೆಯನ್ನು ದೇಶವ್ಯಾಪಿ ಜನರಿಗೆ ತಲುಪಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದಿದ್ದರು.

ಹುದ್ದೆಗಾಗಿ ಹಂಬಲಿಸಿದವನು ನಾನಲ್ಲ, ಕೇಳಿದವನೂ ಅಲ್ಲ

ರಾಜ್ಯಸಭೆಗೆ ನಾಮನಿರ್ದೇಶನ ಆಗುತ್ತೇನೆ ಎಂಬ ಕಲ್ಪನೆ ಕೂಡ ಇಲ್ಲ. ನಾನು ಅದರ ಹಿಂದೆ ಹೋಗುವವನು ಅಲ್ಲ. ನನಗಾಗಿ ನಾನು ಇದನ್ನ ಬೇಡುವವನು ಅಲ್ಲ, ಕೇಳುವವನು ಅಲ್ಲ. ಅವರು ಕೊಟ್ಟಾಗ ನನಗೆ ಏನು ಅನಿಸಿತ್ತು ಅಂದರೆ, ದೇಶವ್ಯಾಪಿ ತಮ್ಮ ಸೇವೆಯನ್ನ ವಿಸ್ತರಿಸಲು ಒಳ್ಳೆಯ ರಂಗಸ್ಥಳವಾಗಿದೆ ಎಂದು ಈ ಹಿಂದೆ ಹೇಳಿದರು. ಈ ಬಗ್ಗೆ ಮಾಹಿತಿ ಇರಲಿಲ್ಲ. ಆದಾದ ಮೇಲೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ನಮ್ಮ ಜನತೆ ಬಹಳ ಸಂತೋಷ ಪಟ್ಟಿದ್ದಾರೆ ಎಂದು ಹೇಳಿದರು. ನನಗೆ ಯಾವುದೇ ರಾಜಕೀಯ ಆಸಕ್ತಿ ಇಲ್ಲ. ನನಗೆ ಮಂಜುನಾಥ ಸ್ವಾಮಿಯ, ಹೆಗ್ಗೆಡೆಯ ಪೀಠಕ್ಕಿಂತ ದೊಡ್ಡದ್ದು ಯಾವುದು ಇಲ್ಲ ಎಂದು ಹೇಳಿದ್ದರು.

Published On - 11:46 am, Thu, 21 July 22