India Innovation Index 2021: ನೀತಿ ಆಯೋಗದ ಭಾರತ ಇನೋವೇಷನ್ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ
ಭಾರತ ಇನೋವೇಷನ್ ಇಂಡೆಕ್ಸ್ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದು, ತೆಲಂಗಾಣ 2ನೇ ಸ್ಥಾನದಲ್ಲಿದೆ.
ನವದೆಹಲಿ: ನೀತಿ ಆಯೋಗದ (NITI Aayog) ಭಾರತ ಆವಿಷ್ಕಾರ ಸೂಚ್ಯಂಕದ ಮೂರನೇ ಆವೃತ್ತಿಯಲ್ಲಿ ಕರ್ನಾಟಕ, ಮಣಿಪುರ ಮತ್ತು ಚಂಡೀಗಢಗಳು ಆಯಾ ವಿಭಾಗಗಳಲ್ಲಿ ಅಗ್ರಸ್ಥಾನದಲ್ಲಿವೆ. ನೀತಿ ಆಯೋಗದ ಸದಸ್ಯ ಡಾ. ವಿ.ಕೆ ಸಾರಸ್ವತ್, ಸಿಇಒ ಪರಮೇಶ್ವರನ್ ಅಯ್ಯರ್ ಮತ್ತು ಹಿರಿಯ ಸಲಹೆಗಾರ ನೀರಜ್ ಸಿನ್ಹಾ ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಸ್ಪರ್ಧಾತ್ಮಕತೆಯ ಅಧ್ಯಕ್ಷ ಡಾ. ಅಮಿತ್ ಕಪೂರ್ ಅವರ ಉಪಸ್ಥಿತಿಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ಭಾರತ ಆವಿಷ್ಕಾರ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದಾರೆ.
‘ಪ್ರಮುಖ ರಾಜ್ಯಗಳು’ ವಿಭಾಗದಲ್ಲಿ ಕರ್ನಾಟಕವು ಮತ್ತೊಮ್ಮೆ ಅಗ್ರಸ್ಥಾನದಲ್ಲಿದೆ. ಮಣಿಪುರವು ‘ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳು’ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಚಂಡೀಗಢವು ‘ಕೇಂದ್ರಾಡಳಿತ ಪ್ರದೇಶಗಳು ಮತ್ತು ನಗರ ರಾಜ್ಯಗಳು’ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ.
?LIVE now: Launch of India Innovation Index 2021
The third edition of the index aims to comprehend the opportunities and potential for innovation in each Indian state and union territory.
?️- https://t.co/slAjmDUTfU pic.twitter.com/PZChvuUsoh
— NITI Aayog (@NITIAayog) July 21, 2022
ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಗೆ ಆವಿಷ್ಕಾರ ಪ್ರಮುಖವಾಗಿದೆ. ಇದು ನಮ್ಮ ಕಾಲದ ದೊಡ್ಡ ಸವಾಲುಗಳನ್ನು ಪರಿಹರಿಸಲು ನಮಗೆ ಸಹಾಯ ಮಾಡುತ್ತದೆ. ಲಕ್ಷಾಂತರ ಜನರನ್ನು ಬಡತನದಿಂದ ಹೊರತರುವುದು, ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಆತ್ಮನಿರ್ಭರ ಭಾರತಕ್ಕೆ ದಾರಿ ಮಾಡಿಕೊಡಲು ಇದು ಸಹಾಯಕವಾಗಿದೆ ಎಂದು ಡಾ. ಸಾರಸ್ವತ್ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ಗೆ ಐವರು ಜಡ್ಜ್ಗಳ ನೇಮಕಕ್ಕೆ ಶಿಫಾರಸು ಮಾಡಿದ ಸುಪ್ರೀಂ ಕೋರ್ಟ್ ಕೊಲಿಜಿಯಂ
Karnataka, Manipur and Chandigarh Top NITI Aayog’s India Innovation Index 2021
Read the full report here: https://t.co/VVxwArAl1O
Details: https://t.co/GzsjLsO49z
— PIB India (@PIB_India) July 21, 2022
ನೀತಿ ಆಯೋಗ 2019ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದ್ದ ಅಖಿಲ ಭಾರತ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿತ್ತು. 2020ರ ಪಟ್ಟಿಯಲ್ಲೂ ಕರ್ನಾಟಕ ಅಗ್ರಸ್ಥಾನ ಪಡೆದಿತ್ತು. ಇದೀಗ 2021ರ ನೀತಿ ಆಯೋಗ ಆವಿಷ್ಕಾರ ಸೂಚ್ಯಂಕ ಪಟ್ಟಿಯಲ್ಲೂ ಕರ್ನಾಟಕ ಪ್ರಥಮ ಸ್ಥಾನ ಪಡೆದಿದೆ.
ಆವಿಷ್ಕಾರ, ಅನುಷ್ಠಾನ, ಮಾನವ ಸಂಪನ್ಮೂಲ, ಹೂಡಿಕೆ, ವಿಷಯತಜ್ಞರು, ಉದ್ಯಮಸ್ನೇಹಿ ವಾತಾವರಣ, ಸುರಕ್ಷತೆ, ಸಾಧನೆ, ಜ್ಞಾನಪ್ರಸಾರ ಮುಂತಾದ ಅಂಶಗಳನ್ನು ಆಧರಿಸಿ ಆವಿಷ್ಕಾರ ಸೂಚ್ಯಂಕವನ್ನು ನಿರ್ಧರಿಸಲಾಗುತ್ತದೆ. ಈ ಎಲ್ಲ ಮಾನದಂಡಗಳಲ್ಲಿ ಕರ್ನಾಟಕ ಅಗ್ರಸ್ಥಾನ ಕಾಯ್ದುಕೊಂಡಿದೆ.
Published On - 12:00 pm, Thu, 21 July 22